Friday, February 20, 2026
Google search engine

Homeರಾಜಕೀಯನಮ್ಮ ಮನೆ ಮುಂದೆ ಕಸ ಹಾಕಲಿ : ಕಸ ವಿವಾದಕ್ಕೆ ರಾಜಕೀಯ ತೀವ್ರತೆ ಹೆಚ್ಚಳ

ನಮ್ಮ ಮನೆ ಮುಂದೆ ಕಸ ಹಾಕಲಿ : ಕಸ ವಿವಾದಕ್ಕೆ ರಾಜಕೀಯ ತೀವ್ರತೆ ಹೆಚ್ಚಳ

ಬೆಂಗಳೂರು : ನಮ್ಮ ಮನೆಯ ಮುಂದೆ ಕಸ ಸುರಿದರೂ ಪರವಾಗಿಲ್ಲ, ಸರ್ಕಾರ ತನ್ನ ಬಳಿ ಹಣವಿಲ್ಲ, ನಾವು ಪಾಪರ್‌ ಆಗಿದ್ದೇವೆ ಎಂದು ಘೋಷಿಸಿಕೊಳ್ಳುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಬಹಿರಂಗ ಸವಾಲು ಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಸ ವಿಲೇವಾರಿ ಮಾಡಲು ಅಡ್ಡಿಪಡಿಸಿದರೆ ಬಿಜೆಪಿ ಕಚೇರಿ ಹಾಗೂ ಅವರ ಪಕ್ಷದ ನಾಯಕರ ಮನೆ ಮುಂದೆ ಕಸ ಸುರಿಯುವುದಾಗಿ ನಗರ ಉಸ್ತುವಾರಿ ಸಚಿವರಾಗಿರುವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ಇಂತಹ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ ಎಂದು ತಿರುಗೇಟು ನೀಡಿದರು.

ಕಸ ವಿಲೇವಾರಿ ಮಾಡಲು ಸರ್ಕಾರಕ್ಕೆ ಯೋಗ್ಯತೆ ಇಲ್ಲ.ನಮ್ಮ ಮನೆ ಮುಂದೆ ಕಸ ಹಾಕಿದರೂ ತೊಂದರೆಯಿಲ್ಲ. ಹಣ ಬಿಡುಗಡೆ ಮಾಡಲು ಹಣ ಇಲ್ಲ. ಜನರೇ ನಿಮಗೆ ಛೀಮಾರಿ ಹಾಕುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಡಿ.ಕೆ.ಶಿವಕುಮಾರ್‌ ಗೊಡ್ಡು ಬೆದರಿಕೆಗೆ ನಾವು ಹೆದರುವುದಿಲ್ಲ. ಸಮಸ್ಯೆ ಬಗೆಹರಿಸಲು ಹಣ ಬಿಡುಗಡೆ ಮಾಡಿ. ಕಸ ತಂದು ನಮ್ಮ ಮನೆ ಮುಂದೆ, ಬಿಜೆಪಿ ಕಚೇರಿ ಮುಂದೆ ಹಾಕುತ್ತೇನೆ ಎಂದರೆ ಅದು ನಿಮ್ಮ ದೌರ್ಬಲ್ಯ ಎಂದು ಕಿಡಿಕಾರಿದರು.

RELATED ARTICLES
- Advertisment -
Google search engine

Most Popular