Friday, February 20, 2026
Google search engine

Homeಸ್ಥಳೀಯನಟೇಶ್ ದೂರಿನ ಮೇರೆಗೆ ಸೈಬರ್ ಪೊಲೀಸರ ಕ್ರಮ : ಸ್ನೇಹಮಯಿ ಕೃಷ್ಣ ಬಂಧನ

ನಟೇಶ್ ದೂರಿನ ಮೇರೆಗೆ ಸೈಬರ್ ಪೊಲೀಸರ ಕ್ರಮ : ಸ್ನೇಹಮಯಿ ಕೃಷ್ಣ ಬಂಧನ

ಮೈಸೂರು :  ಮುಡಾ ಹಗರಣ ಬಯಲಿಗೆ ಬರಲು ಪ್ರಮುಖ ಪಾತ್ರವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರನ್ನು ಶುಕ್ರವಾರ ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮುಡಾ ಹಗರಣ ದೂರುದಾರ ಸ್ನೇಹಮಯಿ ಕೃಷ್ಣ ಆರೋಪ ಮಾಡಿರುವ ಮುಡಾದ ಅಂದಿನ ಆಯುಕ್ತರಾದ ಡಿ.ಬಿ ನಟೇಶ್ ಅವರು ಇತ್ತೀಚಿಗೆ ಮುಂಬಡ್ತಿ ಹೊಂದಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಇಲಾಖೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕಗೊಂಡರು. ಮುಡಾ ಹಗರಣದಲ್ಲಿ ಡಿ.ಬಿ ನಟೇಶ್ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ದೂರಿದ್ದರು ಹಗರಣ ಪ್ರಮುಖ ಆರೋಪಿ ಸ್ಥಾನದಲ್ಲೀ ಕೂಡ ನಟೇಶ್ ಇದ್ದರು.ಆದರೂ ಅವರಿಗೆ ಮುಂಬಡ್ತಿ ಸಿಕ್ಕಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು.

ಈ ವಿಚಾರವಾಗಿ RTI ಕಾರ್ಯಕರ್ತ ಸ್ನೇಹಮಯಿ ಅವರು ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನಟೇಶ್ ಅವರಿಗೆ ಬಡ್ತಿ ನೀಡಲು ಸುಮಾರು 1.6 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ವಿಚಾರ ರಾಜ್ಯಾದ್ಯಂತ ದೊಡ್ಡ ಸದ್ದು ಮಾಡಿತ್ತು. ಸ್ನೇಹಮಯಿ ಕೃಷ್ಣ ಅವರ ಆರೋಪದ ವಿರುದ್ಧ ಟಿ.ಬಿ ನಟೇಶ್ ದೂರು ಸಲ್ಲಿಸಿದ್ದರು. ನನ್ನ ಮತ್ತು ಮುಖ್ಯ ಕಾರ್ಯದರ್ಶಿಗಳ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾದದ್ದು ಸಾಕ್ಷ್ಯಾಧಾರಗಳಿಲ್ಲದೆ ಈ ರೀತಿ ಆರೋಪ ಮಾಡಿ ನಮ್ಮ ತೇಜೋವಧೆ ಮಾಡುತ್ತಿರುವುದಕ್ಕೆ ಸೂಕ್ತ ಕ್ರಮ ಜರುಗಿಸುವಂತೆ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಮೇರೆಗೆ ಶುಕ್ರವಾರ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರಿನಲ್ಲೇ ಬಂಧಿಸಿದ್ದಾರೆ. ಅನ್ಯ ಕಾರ್ಯ ನಿಮಿತ್ತ ಮೈಸೂರಿಂದ ಬೆಂಗಳೂರಿಗೆ ತೆರಳಿದ್ದ ಸ್ನೇಹಮಯಿ ಕೃಷ್ಣರನ್ನು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಬಳಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಬಳಿಕ ಶಾಂತಿನಗರ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ.

ಮುಂಬಡ್ತಿ ಪಡೆಯಲು ಸಿಎಸ್ ಶಾಲಿನಿ ರಜನೀಶ್ ಅವರಿಗೆ ಡಿ.ಬಿ ನಟೇಶ್ 1.60 ಕೋಟಿ ರೂ. ಹಣ ನೀಡಿದ್ದಾರೆ ಎಂಬ ಗಂಭೀರ ಆರೋಪವನ್ನು ಸ್ನೇಹಮಯಿ ಕೃಷ್ಣ ಮಾಡಿದ್ದರು. ಮುಂದುವರೆದು ಹೆಚ್ಚಿನ ಮಾಹಿತಿಗಾಗಿ ಸಿಸಿಬಿ ತಂಡ ಮೈಸೂರಿನಲ್ಲಿರುವ ಸ್ನೇಹಮಯಿ ಕೃಷ್ಣ ನಿವಾಸಕ್ಕೂ ದಾಳಿ ಇಟ್ಟು ಹೆಚ್ಚಿನ ಮಾಹಿತಿಗಳನ್ನು ಕಲೆಹಾಕಿದ್ದಾರೆ. 10 ಕ್ಕು ಹೆಚ್ಚು ಜನರಿರುವ ಸಿಸಿಬಿ ತಂಡದಿಂದ ಸ್ನೇಹಮಯಿ ಕೃಷ್ಣ ಮನೆಯಲ್ಲಿ ಇಂಚಿಂಚು ಪರಿಶೀಲನೆ ನಡೆಸಿದ್ದಾರೆ. ಮನೆಯನ್ನೆಲ್ಲಾ ಜಾಲಾಡಿ ಹಲವು ಮಾಹಿತಿಗಳ‌ ಕಲೆ ಹಾಕಿ ಸ್ನೇಹಮಯಿ ಕೃಷ್ಣ ಇರುತ್ತಿದ್ದ ಕೊಠಡಿಯಲ್ಲಿ ತಪಾಸಣೆ ನಡೆಸಿ ಹಲವು ದಾಖಲೆಗಳ ಪರಿಶೀಲಿಸಿದ್ದಾರೆ. ಇಬ್ಬರು ಮಹಿಳಾ ಪೊಲೀಸ್ ಸಿಬ್ಬಂದಿಗಳೊಂದಿಗೆ ಸ್ನೇಹಮಹಿ ಕೃಷ್ಣ ಅವರ ಪತ್ನಿಯನ್ನೂ ಕೂಡ ವಿಚಾರಣೆಗೆ ಒಳಪಡಿಸಿದ್ದರು. ಎಲ್ಲವನ್ನೂ ಪೊಲೀಸ್ ಸಿಬ್ಬಂದಿಗಳು ವೀಡಿಯೋ ರೆಕಾರ್ಡ್ ಮಾಡಿಕೊಳ್ಳುವ ಮೂಲಕ ಮಾಹಿತಿ ಕಲೆಹಾಕಿದರು. ಸುಮಾರು ಎರಡು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ ಹೊರಟಿದ್ದಾರೆ.

RELATED ARTICLES
- Advertisment -
Google search engine

Most Popular