Saturday, February 21, 2026
Google search engine

HomeರಾಜಕೀಯSiddaramaiah ವಿರುದ್ಧ ಕುಮಾರಸ್ವಾಮಿ ಕಿಡಿ : ಸಿದ್ದರಾಮಯ್ಯ ಕುರ್ಚಿ ಬಿಡಲ್ಲ

Siddaramaiah ವಿರುದ್ಧ ಕುಮಾರಸ್ವಾಮಿ ಕಿಡಿ : ಸಿದ್ದರಾಮಯ್ಯ ಕುರ್ಚಿ ಬಿಡಲ್ಲ

ಬೆಂಗಳೂರು : ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡಲ್ಲ, ಇದು ಅವರ ಜಾಯಮಾನದಲ್ಲಿ ಬಂದಿದೆ. ನನ್ನ ಪಕ್ಷದಲ್ಲೇ ಇದನ್ನ ನೋಡಿದ್ದೇನೆ ನಾನು ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ವಿಷಯ, ಅಹಿಂದ ಜನರಿಗಾಗಿ ಕೆಲಸ ಮಾಡೋಕೆ ಅವರು ಅಧಿಕಾರಕ್ಕೆ ಬಂದಿಲ್ಲ. ಅವರಿಗೆ ವೈಯಕ್ತಿಕ ಕುರ್ಚಿ ಮುಖ್ಯ. ಕುರ್ಚಿ ಹಿಡಿಯಲು ನಮ್ಮಲ್ಲಿ ಇದ್ದಾಗ ಕೆಲವು ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ದರು. ಅವತ್ತು ಅದಕ್ಕೆ ನಾವು ನಿರ್ಧಾರ ಮಾಡಿದ್ದೆವು. ಆಶ್ರಯ ಕೊಟ್ಟ ಪಕ್ಷವನ್ನೇ ಇವತ್ತು ಆವರಿಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದ ಹಳಬರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ಇದ್ದರೆ ಕಾಂಗ್ರೆಸ್, ನಾನು ಇಲ್ಲ ಅಂದರೆ ಕಾಂಗ್ರೆಸ್ ಇಲ್ಲ ಅಂತ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಡೋಕೆ ಆಗಲ್ಲ ಅಂತ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಬಿಡಲ್ಲ ಎಂದರು. 

ಸಿದ್ದರಾಮಯ್ಯ ಕಾಂಗ್ರೆಸ್ ಅವರಿಗೆ ಸಂದೇಶ ಕೊಟ್ಟಿದ್ದಾರೋ? ಸಿಎಂ ಸ್ಥಾನ ತೆಗೆಯೋಕೆ ನಿಂತಿರೋರಿಗೆ ಸಂದೇಶ ಕೊಟ್ಟಿದ್ದಾರೋ ಗೊತ್ತಿಲ್ಲ. ಇಂತಹ ಸಮಯದಲ್ಲಿ ಅವರು ಕುರುಬ ಸಮಾಜವನ್ನ ಎಳೆದಿರೋದು ಯಾವ ಮಟ್ಟಕ್ಕೆ ಅವರ ಹೃದಯದ ಭಾವನೆ ಇದೆ ಅಂತ ಗೊತ್ತಾಗುತ್ತದೆ. ಜಾತಿ ಹೆಸರು ಇಟ್ಟುಕೊಂಡು ಸಾಮಾಜಿಕ ನ್ಯಾಯ, ಜಾತ್ಯಾತೀತ ಎಂದು ಹೇಳುತ್ತಾರೆ. ಕುರುಬ ಸಮಾಜದವನು ನನ್ನನ್ನ ಅಸೂಯೆಯಿಂದ ತೆಗೆಯೋಕೆ ಹೋಗುತ್ತಿದ್ದಾರೆ ಅಂತಾರೆ, ಉತ್ತಮ ಬಜೆಟ್ ಕೊಟ್ಟವನು ನಾನು ಎನ್ನುತ್ತಾರೆ. ಸಿದ್ದರಾಮಯ್ಯ ಬೆಳೆಯೋಕೆ ಕುರುಬ ಸಮಾಜ ಮಾತ್ರವಲ್ಲ, ಎಲ್ಲಾ ಸಮುದಾಯ ಬೆಂಬಲ ಕೊಟ್ಟಿದೆ. ಇವತ್ತು ಜಾತಿ ಹೆಸರಿನ ಸಂಕುಚಿತ ಮನೋಭಾವದಲ್ಲಿ ಸಾಮಾಜಿಕ ನ್ಯಾಯ ಜಾರಿಗೆ ತರೋದು, ಎಲ್ಲಾ ಸಮಾಜದ ಬಗ್ಗೆ ಚರ್ಚೆ ಮಾಡುತ್ತಾರೆ. ಅಂಬೇಡ್ಕರ್, ಬಸವಣ್ಣ ಎಲ್ಲರ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಈಗ ಜ್ಞಾನೋದಯವಾಗಿದೆ. ಅವರ ನಡವಳಿಕೆ ಅವರನ್ನ ಬೆಳೆಸಿದವರು ಊಹೆ ಮಾಡಿರಲಿಲ್ಲ ಎಂದು ಕಿಡಿಕಾರಿದರು. 

ಬಾಗಲಕೋಟೆ ಕಲ್ಲು ತೂರಾಟ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ರಚನೆ ಆದ ಮೇಲೆ, ಹಿಂದೆ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿತ್ತು. ಇಂತಹ ಗಲಾಟೆ ಆದಾಗ ಕಾಂಗ್ರೆಸ್ ಅವರು ಪ್ರತಿಕ್ರಿಯೆ ಕೊಟ್ಟಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮದ್ದೂರು, ನಾಗಮಂಗಲ ಸೇರಿ ಅನೇಕ ಕಡೆ ಮೆರವಣಿಗೆ ಮಾಡೋವಾಗ ಗಲಭೆಗಳು ಆಯಿತು. ಈಗ ಬಾಗಲಕೋಟೆಯಲ್ಲಿ ಮುಂದುವರೆದ ಭಾಗವಾಗಿ ಗಲಾಟೆ ಆಗಿದೆ. ಪೊಲೀಸರ ಮೇಲೆ ಕಲ್ಲು ತೂರಿದ್ದಾರೆ. ಗಲಾಟೆ ಆದಾಗ ಯಾರನ್ನು ಅವರು ನೋಡಲ್ಲ. ಪೊಲೀಸ್ ಇಲಾಖೆ, ಸರ್ಕಾರ ಮುಂದೆ ಏನಾಗಬಹುದು ಅಂತ ತಿಳಿದುಕೊಳ್ಳಬೇಕು. ಪ್ರಾರಂಭಿಕವಾಗಿ ಕ್ರಮ ಆಗಬೇಕು. ಇಂತಹ ಪ್ರಕರಣಗಳಿಗೆ ನಾನು ವಿರೋಧಿ. ಯಾರೇ ತಪ್ಪು ಮಾಡಿದರು ತಪ್ಪೇ. ಸರ್ಕಾರಕ್ಕೆ ಇಂತಹ ವಾತಾವರಣ ಮುಂದುವರಿಸಿದರೆ ಇದಕ್ಕೆ ಸಹಮತ ಕೊಟ್ಟರೆ ಮುಂದಿನ ದಿನಗಳಲ್ಲಿ ಈ ರಾಜ್ಯದಲ್ಲಿ ಯಾವ ಪರಿಸ್ಥಿತಿ ನಿರ್ಮಾಣ ಆಗಬಹುದು ಅರ್ಥ ಮಾಡಿಕೊಳ್ಳಿ ಎಂದು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸಮನ್ವಯ ಸಮಿತಿ ಆಗಬೇಕು ಅಂತ ಬಿಜೆಪಿ ಕಾರ್ಯಕಾರಣಿಯಲ್ಲಿ ಚರ್ಚೆ ಆಗಿದೆ. ಗೊಂದಲ ಸರಿಪಡಿಸಲು ಸಮಿತಿ ಅಗಬೇಕು ಅಂತ ನಾನು ಮೊದಲಿಂದ ಹೇಳಿದ್ದೇನೆ. ಅವರಲ್ಲಿ ಸಮಿತಿ ಮಾಡಬೇಕು ಅಂತ ಅವರ ಭಾವನೆ ಇದೆ. ನಮ್ಮ ಪಕ್ಷದಿಂದ ಮೈತ್ರಿಯ ಹೊಂದಾಣಿಕೆಗೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ಳುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular