Monday, February 23, 2026
Google search engine

Homeದೇಶತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಮುಕುಲ್ ರಾಯ್ ನಿಧನ

ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಮುಕುಲ್ ರಾಯ್ ನಿಧನ

ಕೊಲ್ಕತ್ತಾ: ಮಾಜಿ ರೈಲ್ವೆ ಸಚಿವ ಮತ್ತು ಒಂದು ಕಾಲದಲ್ಲಿ ತೃಣಮೂಲ ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿದ್ದ ಮುಕುಲ್ ರಾಯ್ 71 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು. ರಾಯ್ ಅವರನ್ನು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಬೆಳಗಿನ ಜಾವ 1.30 ರ ಸುಮಾರಿಗೆ ನಿಧನರಾಗಿದ್ದಾರೆ.

ರಾಯ್‌ ನಿಧನದ ಕುರಿತು ಮಾಹಿತಿ ನೀಡಿರುವ ಮಗ ಸುಭ್ರಾಂಗ್ಶು ರಾಯ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸುಮಾರು 1.30 ರ ಸುಮಾರಿಗೆ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೂ ಕಳೆದ ಎರಡು ವರ್ಷಗಳಿಂದ ಮುಕುಲ್ ರಾಯ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದ್ದು, ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿತ್ತು. ಪರಿಚಿತ ಮುಖಗಳನ್ನು ಗುರುತಿಸುವ ಸಾಮರ್ಥ್ಯವನ್ನು ಅವರು ಕಳೆದುಕೊಂಡಿದ್ದರು ಮತ್ತು ರೈಲ್ಸ್ ಟ್ಯೂಬ್ ಮೂಲಕ ದ್ರವ ಆಹಾರವನ್ನು ನೀಡಲಾಗುತ್ತಿತ್ತು. ಅವರ ದೇಹವನ್ನು ಅವರ ನಿವಾಸಕ್ಕೆ ಮರಳಿ ತಂದ ನಂತರ ಸೋಮವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿಯವರ ಆಪ್ತ ಸಹಾಯಕರಾಗಿದ್ದ ಮತ್ತು ಪಕ್ಷದ ಎರಡನೇ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದ ಮುಕುಲ್ ರಾಯ್ ಅವರು, 2019 ರ ಲೋಕಸಭಾ ಚುನಾವಣೆಗೆ ಕೇವಲ ಎರಡು ವರ್ಷಗಳ ಮೊದಲು 2017 ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡು ಅನೇಕರನ್ನು ಅಚ್ಚರಿಗೊಳಿಸಿದ್ದರು.

ಅಲ್ಲದೆ ಬಂಗಾಳದಲ್ಲಿ ಬಿಜೆಪಿಯ ತಳಮಟ್ಟದ ನೆಲೆಯನ್ನು ನಿರ್ಮಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದರು, ಅದನ್ನು ರಾಜ್ಯದ ಪ್ರಮುಖ ವಿರೋಧ ಪಕ್ಷವಾಗಿ ಪರಿವರ್ತಿಸಿದರು. ರಾಜ್ಯದಲ್ಲಿ ಬಿಜೆಪಿಯ ಕಾರ್ಯತಂತ್ರದ ಕೇಂದ್ರಬಿಂದುವಾಗಿದ್ದ ರಾಯ್, 2019 ರಲ್ಲಿ 42 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲಲು ಪಕ್ಷಕ್ಕೆ ಸಹಾಯ ಮಾಡಿದರು.

ರಾಯ್ 2021 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಕೃಷ್ಣನಗರದಿಂದ ಗೆದ್ದರು. ಆದಾಗೀಯೂ, ರಾಜ್ಯದಲ್ಲಿ ಪಕ್ಷದೊಳಗಿನ ಅವರ ಪ್ರಭಾವ ಶೀಘ್ರದಲ್ಲೇ ಕ್ಷೀಣಿಸಲು ಪ್ರಾರಂಭಿಸಿದ್ದು, ಅಂತಿಮವಾಗಿ ಅವರು ಮತ್ತೆ ಮಮತಾ ಬ್ಯಾನರ್ಜಿ ಪಕ್ಷವನ್ನು ಸೇರಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಅಲ್ಪ ಅಂತರದ ಜಯಗಳಿಸಿದ ನಂತರ, ಸುವೇಂದು ಅಧಿಕಾರಿ ಬಂಗಾಳದಲ್ಲಿ ವಿರೋಧ ಪಕ್ಷದ ನಾಯಕರಾದ ಒಂದು ತಿಂಗಳ ನಂತರ ರಾಯ್ ಬಿಜೆಪಿಯನ್ನು ತೊರೆದಿದ್ದರು.

RELATED ARTICLES
- Advertisment -
Google search engine

Most Popular