ನೂತನ ವಸ್ತ್ರಮಳಿಗೆಯ ಉದ್ಘಾಟನೆಗೆ ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಅದೇ ಮಳಿಗೆಯಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಮಂಗಳೂರಿನ ತೊಕ್ಕೊಟ್ಟುವಿನಲ್ಲಿ ನಡೆದಿದೆ.
ಮೃತರನ್ನು ಸಲ್ಮಾನ್ ಫಾರಿಶ್ (20) ಎಂದು ಗುರುತಿಸಲಾಗಿದೆ. ಸಲ್ಮಾನ್ ಫಾರಿಶ್ ಅವರಿಗೆ ಏಕಾಏಕಿ ವಿದ್ಯುತ್ ಆಘಾತವಾಗಿದ್ದು, ಮಳಿಗೆಯಲ್ಲಿದ್ದ ಕಾರ್ಮಿಕರು ತಕ್ಷಣವೇ ಅವರನ್ನು ಆಟೋ ರಿಕ್ಷಾದಲ್ಲಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ದಾರಿಮಧ್ಯೆಯೇ ಅವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.



