Wednesday, February 25, 2026
Google search engine

Homeರಾಜಕೀಯನಮ್ಮ ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ಧ : ಸಚಿವ ಪ್ರಿಯಾಂಕ್‌ ಖರ್ಗೆ

ನಮ್ಮ ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ಧ : ಸಚಿವ ಪ್ರಿಯಾಂಕ್‌ ಖರ್ಗೆ

ಬೆಂಗಳೂರು : ನಮ್ಮ ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ಧ ಇದೆ, ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ಕ್ರಮ ಕೈಗೊಂಡಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆ ಕುರಿತು ಬೆಂಗಳೂರಿನಲ್ಲಿ ಸಚಿವರು ಮಾತನಾಡಿದ ಅವರು, ಸರ್ಕಾರ ಎಲ್ಲಾ ಹುದ್ದೆ ಭರ್ತಿಗೆ ಸಿದ್ದವಿದೆ. ಯುವಕರ ಸಮಸ್ಯೆಗಳ ಬಗ್ಗೆಯೂ ಅರಿವಿದ್ದು, ವಿಪಕ್ಷದಲ್ಲಿ ಇದ್ದಾಗಲೂ ನಾವು ಸ್ಪಂದಿಸಿದ್ದೇವೆ ಈಗಲೂ 35-40 ಸಾವಿರ ಹುದ್ದೆ ತುಂಬಿದ್ದೇವೆ. ಈಗಲೂ ಒಳ ಮೀಸಲಾತಿ ಸಮಸ್ಯೆ ಸ್ವಲ್ಪ ಇದೆ, ಎಲ್ಲವನ್ನು ಸರಿಪಡಿಸಿಕೊಂಡು ನೇಮಕಾತಿ ಆಗಲಿದೆ ಈ ಬಗ್ಗೆ ಕ್ಯಾಬಿನೆಟ್ ನಲ್ಲೂ ಇದರ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಮುಂದುವರೆದು, ತಕ್ಷಣಕ್ಕೆ ಮಾಡಬಹುದಾದ ನೇಮಕಾತಿಗಳನ್ನ ತಕ್ಷಣ ಮಾಡುತ್ತೇವೆ. ಮೀಸಲಾತಿನೂ‌ ಇರಬೇಕು ಸಾಮಾಜಿಕ‌ ನ್ಯಾಯದ ಪರನೂ ಇರಬೇಕು ಸಂವಿಧಾನನದ ಪ್ರಕಾರ ಮಾಡುವಾಗ ಕೆಲವೆಲ್ಲ ಆಗುತ್ತದೆ. ಯಾರಾದರೂ ಕೋರ್ಟ್‌ಗೆ ಹೋದ್ರೆ ಅದು ನ್ಯಾಯಾಲಯದ ಮೇಲೆ‌ ನಿರ್ಧಾರ ಆಗುತ್ತೆ. ಅಲ್ಲಿ ಹೈಕೋರ್ಟ್ ಸುಪ್ರೀಂ ಕೋರ್ಟ್ ಅಂತ ಹೋದಾಗ ಕೆಲವು ತಡವಾಗಬಹುದು ಎಂದಿದ್ದಾರೆ.

ಇನ್ನೂ ವಯೋಮಿತಿ ಹೆಚ್ಚಳದ ಬಗ್ಗೆಯೂ ಈಗಾಗಲೇ ನಮ್ಮ ಸರ್ಕಾರ ಕ್ರಮ ಕೈಗೊಂಡಿದ್ದು, ಬೇರೆ ಏನಿದ್ದರೂ ಪರಿಶೀಲಿಸುತ್ತೇವೆ. ಬಿಜೆಪಿ ಅವಧಿಯಲ್ಲಿ ವಿಧಾನಸೌಧ ವ್ಯಾಪಾರ ಸೌಧವಾಗಿತ್ತು. ಎಷ್ಟು ಹಗರಣಗಳು ಆಗಿತ್ತು ಗೊತ್ತಿದೆ. ಅವರಿದ್ದಾಗ ಯಾರ‍್ಯಾರು ಒಂದೊಂದು ಹುದ್ದೆ ಎಷ್ಟಕ್ಕೆ ಸೇಲ್ ಮಾಡಿದ್ದಾರೆ ಗೊತ್ತಿದೆ ಎಂದು ಕಿಡಿ ಕಾರಿದ್ದಾರೆ.

ರಾಜ್ಯದ 43 ಸರ್ಕಾರಿ ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇವೆ. ಶೀಘ್ರವೇ ಖಾಲಿ ಇರುವ ಹುದ್ದೆಗಳನ್ನ ಭರ್ತಿ ಮಾಡುವಂತೆ ಧಾರವಾಡದಲ್ಲಿ 5,000 ಕ್ಕೂ ಹೆಚ್ಚು ಉದ್ಯೋಗಾಂಕ್ಷಿಗಳು ಬೃಹತ್‌ ಪ್ರತಿಭಟನೆ ನಡೆಸಿದ್ದರು.

RELATED ARTICLES
- Advertisment -
Google search engine

Most Popular