ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಮ್ಮ ಸರ್ಕಾರ ಕೇವಲ ಗ್ಯಾರಂಟಿ ನೀಡುವುದು ಮಾತ್ರವಲ್ಲದೆ ಗ್ರಾಮಗಳ ಅಭಿವೃದ್ಧಿಗೂ ಕೊಟ್ಯಂತರ ರೂಗಳ ಅನುದಾನ ನೀಡುತ್ತಿದೆ ಎಂದು ಶಾಸಕ ಡಿ ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಮಾಯಿಗೌಡಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ1 ಕೋಟಿ ರೂ ವೆಚ್ಚದ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೇರವೇರಿಸಿ ನಂತರ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಈ ಹಿಂದೆ ಕಳೆದ 20 ವರ್ಷಗಳಿಂದಲೂ ಅಭಿವೃದ್ಧಿಯನ್ನೇ ಕಾಣದ ಸಕ್ಕರೆ ಹಲಗೆ ಗೌಡನ ಕೊಪ್ಪಲು ಸೇರಿದಂತೆ ಈ ಭಾಗದ ಗ್ರಾಮಗಳಿಗೆ ಅನುದಾನ ನೀಡುತ್ತಿದ್ದು ಕನಿಷ್ಠ ಉತ್ತಮ ರಸ್ತೆಯು ಇಲ್ಲದ ಸಕ್ಕರೆ ಗ್ರಾಮದಲ್ಲಿ ಇದೀಗ 50 ಲಕ್ಷ ರೂಗಳ ವೆಚ್ಚದಲ್ಲಿ ರಸ್ತೆ ಮಾಡಲಾಗುತ್ತಿದ್ದು ಸರ್ಕಾರದ ಬಜೆಟ್ ನಂತರ ಬರುವ ಅನುದಾನದಲ್ಲಿ ಉಳಿದ ಭಾಗದ ರಸ್ತೆಯನ್ನು ನಿರ್ಮಾಣ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.

ಗೃಹಲಕ್ಷ್ಮಿ ಉಚಿತ ಬಸ್ ಉಚಿತ ವಿದ್ಯುತ್ ಇವೆಲ್ಲವೂ ಗ್ರಾಮೀಣ ಬದುಕನ್ನು ಉದ್ದರಿಸುವ ಕಾರ್ಯಕ್ರಮಗಳಾಗಿದ್ದು ಯಾರೇ ಆರೋಪಗಳನ್ನು ಮಾಡಿದರು ಈ ಕಾರ್ಯಕ್ರಮಗಳು ಬಡವರ ನೆರವಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದು ಇವುಗಳು ಮಾತ್ರವಲ್ಲದೆ ತಾಲೂಕಿನ ನಿರ್ಲಕ್ಷಿತ ಗ್ರಾಮಗಳನ್ನು ಗುರುತಿಸಿ ಅವುಗಳ ಅಭಿವೃದ್ಧಿಗೂ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾಯಿಗೌಡನಹಳ್ಳಿ ಗ್ರಾಮದಲ್ಲಿ 5 ಲಕ್ಷ ರೂ ವೆಚ್ಚದ ವೀರಭದ್ರೇಶ್ವರ ದೇವಸ್ಥಾನ, ಗ್ರಾಮದ ಪರಿಮಿತಿಯಲ್ಲಿ 10 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿ, ಸಕ್ಕರೆ ಗ್ರಾಮದಲ್ಲಿ 50 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ದಿ, 10 ಲಕ್ಷ ವೆಚ್ಚದ ಗಂಗಮಾಳಮ್ಮ ಮತ್ತು ದೊಡ್ಡಮ್ಮ ತಾಯಿ ದೇವಸ್ಥಾನ ನಿರ್ಮಾಣ, ಹಲಗೇಗೌಡನಕೊಪ್ಪಲು ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ದಮ್ಮನಹಳ್ಳಿ ಉದಯ್, ಮಾಯಿಗೌಡನಹಳ್ಳಿ ಗ್ರಾ.ಪಂ.ಮಾಜಿ ಅಧ್ಯಕ್ಷ ಮಹೇಶ್, ಕಾವ್ಯ ಬೀರೇಗೌಡ, ಉಪಾಧ್ತಕ್ಷರಾದ, ಎಂ.ಎನ್.ಮಹದೇವ್,
ಜವರೇಗೌಡ,ಮಾಜಿ ಉಪಾಧ್ಯಕ್ಷರಾದ ಸ್ವಾಮೇಗೌಡ, ವಡ್ಡಕೊಪ್ಪಲು ಕುಮಾರಸ್ವಾಮಿ, ಸದಸ್ಯ ಅಶಿ ಮಲ್ಲಿಕಾರ್ಜುನ್, ಮಾಜಿ ಸದಸ್ಯ ರಘು,
ಯುವ ಕಾಂಗ್ರೆಸ್ ಮುಖಂಡರಾದ ನಾಡಪ್ಪನಹಳ್ಳಿ ಅಶ್ವತ,
ಚಿಕ್ಕಕೊಪ್ಪಲು ಮನು, ಸಿ.ಎಸ್.ಗಿರಿ,ವಿಜಿ ಕಾಡು,ಕುಮಾರ, ಸಕ್ಕರೆ ಗೌಡಯ್ಯ, ನಟರಾಜು, ತಮ್ಮೇಗೌಡ,ಸುಂಡ ರವಿ,
ಜಲೇಂದ್ರ , ಕೆಂಪೇಗೌಡ, ಲೋಕೇಶ್, ದಯನಂದ್, ಪ್ರಕಾಶ್, ಜವರಪ್ಪ, ಸ್ವಾಮೇಗೌಡ, ಶಿವಣ್ಣೇಗೌಡ, ಹಾಡ್ಯ ಸಹಕಾರ ಸಂಘದ ಮಾಜಿ ಅಧ್ಯಕ್ಷ ತ್ರಿಯಂಬಕಸ್ವಾಮಿ, ಹಾಡ್ಯ ರಾಕೇಶ್, ಪಿಡಿಓ ರಾಜೇಶ್,ಇಂಜಿನಿಯರ್ ತುಳಸಿ ಕುಮಾರ್ ಸೇರಿದಂತೆ ಮತ್ತಿತರರು ಹಾಜರಿದ್ದರು.



