Tuesday, March 3, 2026
Google search engine

Homeರಾಜ್ಯತಿ.ನರಸೀಪುರ ಕ್ಷೇತ್ರಕ್ಕೆ ಸಮಗ್ರ ಅಭಿವೃದ್ಧಿ; 4.50 ಕೋಟಿ ರೂ. ವೆಚ್ಚದ ಯೋಜನೆಗೆ ಭೂಮಿ ಪೂಜೆ

ತಿ.ನರಸೀಪುರ ಕ್ಷೇತ್ರಕ್ಕೆ ಸಮಗ್ರ ಅಭಿವೃದ್ಧಿ; 4.50 ಕೋಟಿ ರೂ. ವೆಚ್ಚದ ಯೋಜನೆಗೆ ಭೂಮಿ ಪೂಜೆ

ತಿ.ನರಸೀಪುರ : ತಿ.ನರಸೀಪುರ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡಬೇಕೆಂಬ ಉದ್ದೇಶ ನನ್ನ ಮತ್ತು ನನ್ನ ತಂದೆಯ ಕನಸಾಗಿದ್ದು ಆ ನಿಟ್ಟಿನಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.

ತಾಲೂಕಿನ ಸಿ.ಬಿ ಹುಂಡಿ ಗ್ರಾಮದಲ್ಲಿ ಬಸವ ಭವನ ನಿರ್ಮಾಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 4.50 ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಚರಂಡಿ, ಸಮುದಾಯ ಭವನಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕ್ಷೇತ್ರದ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ನಮ್ಮ ತಂದೆ ಮಹದೇವಪ್ಪರವರಿಗೆ ಕಳೆದ 40 ವರ್ಷಗಳಿಂದಲೂ ರಾಜಕೀಯ ಅಧಿಕಾರ ನೀಡುತ್ತಾ ಬಂದಿದ್ದಾರೆ. ಈಗ ನಾನು ಸಂಸದನಾಗಲು ಕಾರಣೀಭೂತರಾಗಿದ್ದಾರೆ, ಹಾಗಾಗಿ ನಾವು ಈ ಕ್ಷೇತ್ರಕ್ಕೆ ಎಷ್ಟೇ ಅಭಿವೃದ್ಧಿ ಮಾಡಿದರೂ ಸಾಲದು, ಈ ನಿಟ್ಟಿನಲ್ಲಿ ನಾನು ಮತ್ತು ನಮ್ಮ ತಂದೆ ಸೇರಿ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಮೂಲಕ ಮಾದರಿ ಕ್ಷೇತ್ರ ಮಾಡಲು ಮುಂದಾಗಿದ್ದೇವೆ ಎಂದರು.

ಮುಂದುವರೆದು, ಜಿ.ಪಂ.ವತಿಯಿಂದ ಎಸ್ ಸಿಪಿ ಕಾಲೋನಿಗೆ ಆರ್ಡಿಪಿರ್ ಯೋಜನೆಯಡಿ 55 ಲಕ್ಷ ರೂ.ಗಳು ಹಾಗು ಸಾಮಾನ್ಯ ವರ್ಗದ ಕಾಲೋನಿಗೆ 1.95 ಕೋಟಿ ರೂ.ಗಳು ಹಾಗು ಲೋಕೋಪಯೋಗಿ ಇಲಾಖೆಯಿಂದ ರಸ್ತೆ ಅಭಿವೃದ್ಧಿಗೆ ಚೌಹಳ್ಳಿ ಹಾಗೂ ಅಮ್ಮಾಚಿಕಟ್ಟೆ ಗ್ರಾಮದ ರಸ್ತೆ ಅಭಿವೃದ್ಧಿಗೆ ತಲಾ ಒಂದು ಕೋಟಿ ನೀಡಲಾಗಿದೆ. ಒಟ್ಟಾರೆ 4.50 ಕೋಟಿ ರೂ.ಗಳ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಲಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ವಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಹಿರಿಯೂರು ನಾಗಪ್ಪ, ವೀರೇಂದ್ರ(ನವೀನ್), ಶಂಕರ, ಗುರುಸ್ವಾಮಿ, ಮಹದೇವಸ್ವಾಮಿ, ಸಿ.ಚಿನ್ನಸ್ವಾಮಿ, ಮನೋಜ್, ಹ್ಯಾಕನೂರು ಉಮೇಶ್, ಚೌಹಳ್ಳಿ ಮಹದೇವಪ್ಪ, ಸೋಮಣ್ಣ, ಮನು, ನಿಲಸೋಗೆ ಮಹದೇವಪ್ರಸಾದ್, ಆಲಗೂಡು ಶಿವಕುಮಾರ್, ಬನ್ನಹಳ್ಳಿ ಸೋಮಣ್ಣ, ಮರಡೀಪುರ ಗೋಪಾಲ್, ರಘು, ಸಿಬಿ ಹುಂಡಿ ಸಿದ್ದು, ಸಂಸದರ ಆಪ್ತ ಸಹಾಯಕ ಬಿ.ಬಸವರಾಜು, ಕುಕ್ಕೂರು ಪ್ರಸನ್ನ, ಬೃಂದಾ ಕೃಷ್ಣೇಗೌಡ, ಚತುರ್ ಗೌಡ, ಮೂರ್ತಿ, ಜಿ.ಪಂ ಎಇಇಗಳಾದ ಪಿ.ಎನ್.ಚರಿತ, ಕೆ.ಶಿವರಾಜು, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಸಿಡಿಪಿಓ ಗೋವಿಂದರಾಜು, ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಂ.ರಾಜಣ್ಣ, ಪರಿಶಿಷ್ಟ ವರ್ಗಗಳ ಇಲಾಖೆಯ ಕೋಮಲ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆಶಕಿ ಶಾಂತ ಸೇರಿದಂತೆ ಮತ್ತಿತರರಿದ್ದರು.

RELATED ARTICLES
- Advertisment -
Google search engine

Most Popular