Wednesday, March 4, 2026
Google search engine

HomeUncategorizedರಾಷ್ಟ್ರೀಯಕೆನಡಾದಲ್ಲಿ ಚಂದನ್ ಕುಮಾರ್ ಹತ್ಯೆ ಆರೋಪಿ ಫೋಟೋ ಬಿಡುಗಡೆ

ಕೆನಡಾದಲ್ಲಿ ಚಂದನ್ ಕುಮಾರ್ ಹತ್ಯೆ ಆರೋಪಿ ಫೋಟೋ ಬಿಡುಗಡೆ

ನೆಲಮಂಗಲ : ಕೆನಡಾ ದೇಶದಲ್ಲಿ ಕನ್ನಡಿಗನನ್ನ ಗುಂಡಿಟ್ಟು ಹತ್ಯೆ ಮಾಡಿದ ಪ್ರಕರಣದಲ್ಲಿ ಕೊಲೆ ಮಾಡಿರುವ ಆರೋಪಿ ಭಾವಚಿತ್ರವನ್ನ ಕೆನಡಾದ ಟೊರಂಟೊ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಬೆಂಗಳೂರು ಹೊರವಲಯ ನೆಲಮಂಗಲ ತ್ಯಾಮಗೊಂಡ್ಲು ನಿವಾಸಿ ಚಂದನ್ ಕುಮಾರ್ ಕೊಲೆಯಾಗಿದ್ದರು. ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಡಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸಿಕೊಂಡು ಅಲ್ಲಿನ ಕನ್ನಡಿಗರ ಸಂಘಟನೆಯ ಮೂಲಕ ಸಾಕಷ್ಟು ಹೆಸರು ಸಂಪಾದನೆ ಮಾಡಿಕೊಂಡು ಇದ್ದರು. ಈ ನಡುವೆ ಕಳೆದ ತಿಂಗಳು ಕೆನಡಾದ ಟೊರಂಟೊ ನಗರದಲ್ಲಿ ಚಂದನ್ ಮೇಲೆ ಗುಂಡಿನ ದಾಳಿ ನಡೆಸಿ ಕೊಲೆ ಮಾಡಿ ಆರೋಪಿ ಎಸ್ಕೇಪ್ ಆಗಿದ್ದ. 

ಗುಂಡಿಟ್ಟು ಕೊಲೆ ಮಾಡಿರುವ ಆರೋಪಿ ವಿಚಾರದಲ್ಲಿ ಟೊರಂಟೊ ಪೊಲೀಸರು ಚಂದನ್ ಕುಮಾರ್ ಕೊಲೆಯ ಪ್ರೆಸ್ ಮೀಟ್ ಮಾಡಿದ್ದಾರೆ. ಇನ್ನೂ ತಲೆ ಮರೆಸಿಕೊಂಡಿರುವ ಆರೋಪಿ ಭಾವಚಿತ್ರ ಬಿಡುಗಡೆ ಮಾಡಿದ್ದಾರೆ. ಟೊರಂಟೊ ಪೊಲೀಸರು, ಇಷಯಾ ಥಾಮಸ್ ಬಡ್ಗೇರ್ 19 ವರ್ಷ ಕೊಲೆ ಆರೋಪಿ ಎಂದು ಗುರುತಿಸಿದ್ದು, ಟೊರಂಟೊ ಪೊಲೀಸರಿಂದ ವಾಂಟೆಡ್ ಲಿಸ್ಟ್ ಫೋಟೋ ರಿಲೀಸ್ ಮಾಡಿದ್ದಾರೆ. ಸದ್ಯ ಕೊಲೆ ಆರೋಪಿಯನ್ನ ಇನ್ನೂ ಹುಡುಕಾಟ ನಡೆಸಿರುವ ಟೊರಂಟೊ ಪೊಲೀಸರು ಪತ್ತೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. 

RELATED ARTICLES
- Advertisment -
Google search engine

Most Popular