Saturday, March 7, 2026
Google search engine

HomeUncategorizedರಾಷ್ಟ್ರೀಯಕೊಲ್ಲಿ ಯುದ್ಧ ಹಿನ್ನೆಲೆ: ಪಾಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ

ಕೊಲ್ಲಿ ಯುದ್ಧ ಹಿನ್ನೆಲೆ: ಪಾಕಿಸ್ತಾನದಲ್ಲಿ ಇಂಧನ ಬೆಲೆ ಏರಿಕೆ

ಇಸ್ಲಾಮಾಬಾದ್ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಕೊಲ್ಲಿ ಯುದ್ಧದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್, ಡೀಸೆಲ್ ಬೆಲೆಯನ್ನು 55 ಪಾಕಿಸ್ತಾನ ರೂಪಾಯಿ (PKR)ಏರಿಕೆ ಮಾಡಿದೆ.

ಹೊಸ ಬೆಲೆಗಳ ಅನ್ವಯ ಪೆಟ್ರೋಲ್‌ ಬೆಲೆ 321.17 ರೂ. ಆಗಿದ್ದರೆ ಡೀಸೆಲ್‌ ಬೆಲೆ 275.70 ರೂ.ನಿಂದ ರಿಂದ 335.86 ರೂ.ಗೆ ಏರಿಕೆಯಾಗಲಿದೆ.

ಸಂಘರ್ಷ ಹೆಚ್ಚಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆಗಳು ಭಾರೀ ಏರಿಕೆಯಾದ ಬೆನ್ನಲ್ಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ತಕ್ಷಣ ಹೆಚ್ಚಿಸುವಂತೆ ಒತ್ತಾಯಿಸಿತ್ತು.

ದೇಶದಲ್ಲಿ ಇಂಧನ ಕೊರತೆಯಾಗಬಹುದು ಎಂಬ ಸುದ್ದಿ ಹಬ್ಬಿದ್ದರಿಂದ ಪಾಕಿಸ್ತಾನದಲ್ಲಿ ಈಗ ಪೆಟ್ರೋಲ್‌ ತುಂಬಿಸಲು ಬಂಕ್‌ಗಳ ಮುಂದೆ ಜನ ಸಾಲುಗಟ್ಟಿ ನಿಂತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಂಕ್‌ ಮುಂದೆ ವಾಹನಗಳು ಸಾಲುಗಟ್ಟಿ ನಿಂತಿರುವ ವಿಡಿಯೋಗಳು ವೈರಲ್‌ ಆಗಿವೆ.

RELATED ARTICLES
- Advertisment -
Google search engine

Most Popular