Saturday, June 6, 2026
Google search engine

Homeರಾಜಕೀಯನನ್ನ ರಾಜಕೀಯ ಕಪ್ಪು-ಬಿಳಿ : ಸೂಟ್ ವಿವಾದಕ್ಕೆ ಸಿಎಂ ವಿಜಯ್ ಖಡಕ್ ಉತ್ತರ

ನನ್ನ ರಾಜಕೀಯ ಕಪ್ಪು-ಬಿಳಿ : ಸೂಟ್ ವಿವಾದಕ್ಕೆ ಸಿಎಂ ವಿಜಯ್ ಖಡಕ್ ಉತ್ತರ

ತಿರುಚನಾಪಲ್ಲಿ : ನನ್ನ ರಾಜಕೀಯ ನನ್ನ ಬಟ್ಟೆಗಳಂತೆ, ಕಪ್ಪು ಮತ್ತು ಬಿಳಿಯಾಗಿರಲಿದೆ ಎಂದು ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಜೊಸೆಫ್ ಟೀಕಾಕಾರರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿಯಾಗಿ ಸೂಟ್ ಧರಿಸುವ ವಿರೋಧ ಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದ ಅವರು ನನ್ನ ರಾಜಕೀಯ ತೆರೆದ ಪುಸ್ತಕ ಹಾಗೂ ಕಪ್ಪು, ಬಿಳುಪು ಇದ್ದಂತೆ ಈ ಕಾರಣಕ್ಕಾಗಿ ಕಪ್ಪು ಬಿಳುಪಿನ ಉಡುಪು ಧರಿಸುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ.

ತಿರುಚಿರಾಪಳ್ಳಿಯಲ್ಲಿ ನಡೆದ ಥ್ಯಾಂಕ್ಸ್ ಗಿವಿಂಗ್ ರ್ಯಾಲಿಯಲ್ಲಿ ಮಾತನಾಡಿದ ವಿಜಯ್, ಸೂಟ್ ಧರಿಸುವ ಆಯ್ಕೆಯು ರಾಜಕೀಯ ಚರ್ಚೆಯ ವಿಷಯವಾಗಿ ಮಾರ್ಪಟ್ಟಿರುವುದು ಏಕೆ ಎಂದು ಪ್ರಶ್ನಿಸಿದ್ದು ಬಟ್ಟೆ ಅಧಿಕಾರದಲ್ಲಿರುವವರಿಗೆ ಮಾತ್ರ ಮೀಸಲಾಗಿರುವ ಸವಲತ್ತು ಅಲ್ಲ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿಯಾಗಿ ಮೊದಲ ಪ್ರಮುಖ ರ್ಯಾಲಿಯಲ್ಲಿ ಮಾತನಾಡಿದ ಅವರು ಕಪ್ಪು ಮತ್ತು ಬಿಳಿ ಸೂಟ್ ಗಳನ್ನು ಸಮರ್ಥಿಸಿಕೊಳ್ಳುವ ಮೂಲಕ ಡಿಎಂಕೆ ಮೇಲೆ ದಾಳಿ ನಡೆಸಿದ್ಧಾರೆ, ತಿರುಚಿರಾಪಳ್ಳಿ ಕಾರ್ಯಕ್ರಮ ಬಳಸಿಕೊಂಡು ಟಿವಿಕೆ ಪಕ್ಷವನ್ನು ತಮಿಳುನಾಡಿನ ಪ್ರಮುಖ ರಾಜಕೀಯ ಶಕ್ತಿಯಾಗಿ ಬಿಂಬಿಸಿದ್ದಾರೆ. ಈಗ ಹಲವಾರು ಜನರು ನಾವು ಸೂಟ್ ಧರಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ಸೂಟ್ ಧರಿಸಲು ಏಕೆ ಸಾಧ್ಯವಿಲ್ಲ ಅಧಿಕಾರದಲ್ಲಿರುವವರು ಮಾತ್ರ ಸೂಟ್ ಧರಿಸಬಹುದೇ, ಉಡುಪಿನ ವಿಷಯಕ್ಕೆ ಯಾಕೆ ಟೀಕೆ ಮಾಡುತ್ತಿದ್ದಾರೋ ಅರ್ಥವಾಗುತ್ತಿಲ್ಲ ಎಂದಿದ್ದಾರೆ.

ನಾನು ಬೇರೆ ಬೇರೆ ಬಣ್ಣಗಳ ಸೂಟ್‍ಗಳನ್ನು ಧರಿಸುತ್ತಿದ್ದೇನೆಯೇ ಕಪ್ಪು ಮತ್ತು ಬಿಳಿ ಎಂಬ ಎರಡು ಬಣ್ಣಗಳು ಮಾತ್ರ ಎಂದು ಅವರು ಎಲ್ಲದರಲ್ಲೂ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ಇರುತ್ತದೆ, ಕಪ್ಪು ಏನನ್ನು ಸೂಚಿಸುತ್ತದೆ ಎಂದು ನಿಮಗೆಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದ್ದಾರೆ. ಟಿವಿಕೆ ಅವರ ಚೊಚ್ಚಲ ವಿಧಾನಸಭಾ ಚುನಾವಣಾ ಗೆಲುವಿನ ನಂತರ ಮತದಾರರಿಗೆ ಧನ್ಯವಾದ ಹೇಳಲು ಆಯೋಜಿಸಲಾದ ರ್ಯಾಲಿಯಲ್ಲಿ ಮಾತನಾಡಿದ ಅವರು ತಮ್ಮ ಉಡುಪು ಸಮರ್ಥಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ತಮ್ಮ ಚುನಾವಣಾ ಚೊಚ್ಚಲ ಪ್ರವೇಶ ಮತ್ತು ಎಂಜಿಆರ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಮಾಜಿ ತಮಿಳುನಾಡು ಮುಖ್ಯಮಂತ್ರಿ ಎಂ ಜಿ ರಾಮಚಂದ್ರನ್ ಅವರ ನಡುವಿನ ಹೋಲಿಕೆಗಳಿಗೂ ಪ್ರತಿಕ್ರಿಯಿಸಿದ ಅವರು
ದಿವಂಗತ ಮುಖ್ಯಮಂತ್ರಿ ಎಂಜಿಆರ್ ಕೂಡ ತಮ್ಮ ಮೊದಲ ಚುನಾವಣೆಯಲ್ಲಿ ಇಷ್ಟೊಂದು ಮತ ಪಾಲನ್ನು ಪಡೆಯಲಿಲ್ಲ ಎಂದಿದ್ದಾರೆ.

RELATED ARTICLES
- Advertisment -
Google search engine

Most Popular