Wednesday, April 22, 2026
Google search engine

Homeಸಿನಿಮಾಬಾಕ್ಸ್ ಆಫೀಸ್‌ ನಲ್ಲಿ ಅಕ್ಷಯ್ ಕುಮಾರ್ ಅಬ್ಬರ : 5 ದಿನಕ್ಕೆ 72 ಕೋಟಿ ದಾಟಿದ...

ಬಾಕ್ಸ್ ಆಫೀಸ್‌ ನಲ್ಲಿ ಅಕ್ಷಯ್ ಕುಮಾರ್ ಅಬ್ಬರ : 5 ದಿನಕ್ಕೆ 72 ಕೋಟಿ ದಾಟಿದ ‘ಭೂತ್ ಬಂಗ್ಲಾ’ ಕಲೆಕ್ಷನ್!

‌ ಮುಂಬೈ : ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತು ಪ್ರಿಯದರ್ಶನ್ ಜೋಡಿಯ ಬಹುನಿರೀಕ್ಷಿತ ಹಾರರ್ ಕಾಮಿಡಿ ಸಿನಿಮಾ ‘ಭೂತ್ ಬಂಗ್ಲಾ’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ಮೊದಲ ದಿನದಿಂದಲೇ ಅಭಿಮಾನಿಗಳ ಮನಗೆದ್ದಿರುವ ಈ ಸಿನಿಮಾ, ಈಗ ಐದನೇ ದಿನವೂ ತನ್ನ ಕಲೆಕ್ಷನ್ ವೇಗವನ್ನು ಮುಂದುವರಿಸಿದೆ.

ಸಿನಿಮಾ ವಿಶ್ಲೇಷಕರ ಪ್ರಕಾರ, 5ನೇ ದಿನವೂ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಂಖ್ಯೆ ಸ್ಥಿರವಾಗಿದೆ.

ಐದನೇ ದಿನದ ಗಳಿಕೆ: ರಾತ್ರಿ 10:30ರ ವರೆಗಿನ ಅಂಕಿಅಂಶದಂತೆ ಅಂದಾಜು 7.65 ಕೋಟಿ ರೂ. ಗಳಿಸಿದೆ.

ಒಟ್ಟು ಪ್ರದರ್ಶನಗಳು: ಚಿತ್ರಕ್ಕೆ ದೇಶಾದ್ಯಂತ 6,581 ಶೋಗಳನ್ನು ನೀಡಲಾಗಿದೆ. ಮಧ್ಯಾಹ್ನದ ಶೋಗಳಲ್ಲಿ ಶೇ. 18.62 ರಷ್ಟು ಹಾಗೂ ಒಟ್ಟಾರೆಯಾಗಿ ಶೇ. 19 ರಷ್ಟು ಆಕ್ಯುಪೆನ್ಸಿ ಕಂಡುಬಂದಿದೆ. ಒಟ್ಟು 5 ದಿನದ ಗಳಿಕೆಯಲ್ಲ 72.40 ಕೋಟಿ ರೂ. ಸಂಗ್ರಹವಾಗಿದೆ.

ಜಾಗತಿಕ ಮಟ್ಟದಲ್ಲಿ 100 ಕೋಟಿ ಕ್ಲಬ್‌ ಗೆ ಸೇರ್ಪಡೆ!

ಭಾರತದಲ್ಲಿ ಮಾತ್ರವಲ್ಲದೆ ವಿದೇಶಿ ಮಾರುಕಟ್ಟೆಯಲ್ಲೂ ಸಿನಿಮಾ ಸದ್ದು ಮಾಡುತ್ತಿದೆ. ನಾಲ್ಕು ದಿನಗಳ ಅಂತ್ಯಕ್ಕೆ ವಿಶ್ವದಾದ್ಯಂತ ಸಿನಿಮಾ 106.34 ಕೋಟಿ ರೂ. ಗಳಿಸುವ ಮೂಲಕ ನೂರು ಕೋಟಿ ಕ್ಲಬ್ ಸೇರಿದೆ. ಓವರ್‌ಸೀಸ್ ಮಾರುಕಟ್ಟೆಯೊಂದರಲ್ಲೇ ಸಿನಿಮಾ 29 ಕೋಟಿ ರೂಪಾಯಿ ಬಾಚಿಕೊಂಡಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular