ಬೆಂಗಳೂರು: BIAL ಸಂಸ್ಥೆಯು 2025-26ನೇ ಸಾಲಿಗೆ ಅನ್ವಯವಾಗುವಂತೆ ರಾಜ್ಯ ಸರ್ಕಾರಿ ಸ್ವಾಮ್ಯದ Karnataka State Industrial and Infrastructure Development Corporation ಗೆ ₹16.49 ಕೋಟಿ ಲಾಭಾಂಶ ಹಸ್ತಾಂತರಿಸಿದೆ. ಸಂಸ್ಥೆಯಲ್ಲಿ ಕೆಎಸ್‌ಐಐಡಿಸಿ ಶೇ.13ರಷ್ಟು ಬಂಡವಾಳ ಪಾಲು ಹೊಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಐಎಎಲ್ ಅಧ್ಯಕ್ಷ ಹರಿ ಮರಾರ್ ಅವರಿಂದ ಲಾಭಾಂಶದ ಚೆಕ್ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಬಿಐಎಎಲ್ ಪ್ರತೀ ಷೇರಿಗೆ ₹3 ಲಾಭಾಂಶ ಘೋಷಿಸಿದ್ದು, ತೆರಿಗೆ ಕಡಿತದ ಬಳಿಕ ಕೆಎಸ್‌ಐಐಡಿಸಿಗೆ ₹14.84 ಕೋಟಿ ನಿವ್ವಳ ಮೊತ್ತ ಲಭಿಸಿದೆ. 2017-18ರ ಬಳಿಕ ಇದೇ ಮೊದಲ ಬಾರಿಗೆ ಬಿಐಎಎಲ್ ಡಿವಿಡೆಂಡ್ ಘೋಷಿಸಿದ್ದು, ಇದು ಸಂಸ್ಥೆಯ ಬಲಿಷ್ಠ ಆರ್ಥಿಕ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ತಿಳಿಸಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಸೌಕರ್ಯ ಮತ್ತು ಸಾಮರ್ಥ್ಯ ವಿಸ್ತರಣಾ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದರಿಂದ ಸಂಸ್ಥೆಯ ಕಾರ್ಯಾಚರಣೆ ಮತ್ತಷ್ಟು ಬಲಿಷ್ಠವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.



