Friday, May 1, 2026
Google search engine

Homeರಾಜ್ಯವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ವಾಣಿಜ್ಯ LPG ಸಿಲಿಂಡರ್ ದರ ರೂ.993 ಏರಿಕೆ, ಹೊಸ ದರ ಇಂದಿನಿಂದ ಜಾರಿ..!

ನವದೆಹಲಿ: ಇರಾನ್-ಇಸ್ರೇಲ್ ಬಿಕ್ಕಟ್ಟಿನ ಬಳಿಕ ಭಾರತದಲ್ಲಿ LPG ಸಿಲಿಂಡರ್ ಸಿಗೋದೇ ಕಷ್ಟವಾಗುತ್ತಿದ್ದು, ಈಗಲೂ ಪರಿಸ್ಥಿತಿ ಹಾಗೆಯೇ ಮುಂದುವರಿದಿದೆ. ಇದರ ನಡುವೆಯೇ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಎನ್ನುವಂತೆ ಮೇ 1ರಿಂದ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಏರಿಕೆಯಾಗಿದೆ.

ಮೇ 1 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಬರೊಬ್ಬರಿ ರೂ.993 ರಷ್ಟು ಹೆಚ್ಚಳ ಮಾಡಲಾಗಿದ್ದು, ಇದರೊಂದಿಗೆ ಬೆಂಗಳೂರು ಸೇರಿದಂತೆ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ ರೂ.3,071.50 ತಲುಪಿದೆ.

ಇಂಧನ ಕಂಪನಿಗಳ ಪ್ರಕಾರ, ಇತ್ತೀಚಿನ ಜಾಗತಿಕ ತೈಲ ಮತ್ತು ಅನಿಲ ಮಾರುಕಟ್ಟೆಯ ಅಸ್ಥಿರತೆ, ಸರಬರಾಜು ಸರಪಳಿಯ ವೆಚ್ಚ ಏರಿಕೆ ಹಾಗೂ ವಿನಿಮಯ ದರದ ಪರಿಣಾಮದಿಂದ ಈ ಹೆಚ್ಚಳ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್‌ಗಳು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ನೇರ ಆರ್ಥಿಕ ಪರಿಣಾಮ ಬೀರಲಿದ್ದು, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ಗಗನಕ್ಕೇರಿದ್ದರೂ, 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರದ ಸಬ್ಸಿಡಿ ಹಾಗೂ ನಿಯಂತ್ರಣ ವ್ಯವಸ್ಥೆಯ ಕಾರಣದಿಂದ ಗೃಹ ಬಳಕೆಯ ಗ್ಯಾಸ್ ದರ ಸ್ಥಿರವಾಗಿಯೇ ಮುಂದುವರಿದಿದೆ.

RELATED ARTICLES
- Advertisment -
Google search engine

Most Popular