Friday, May 1, 2026
Google search engine

Homeರಾಜ್ಯಭಾರಿ ಮಳೆಗೆ ತತ್ತರಿಸಿದ ಜನ: ನಮ್ಮ ಮೆಟ್ರೋದಲ್ಲಿ ದಾಖಲೆ ಬರೆದ ಪ್ರಯಾಣಿಕರ ಸಂಖ್ಯೆ

ಭಾರಿ ಮಳೆಗೆ ತತ್ತರಿಸಿದ ಜನ: ನಮ್ಮ ಮೆಟ್ರೋದಲ್ಲಿ ದಾಖಲೆ ಬರೆದ ಪ್ರಯಾಣಿಕರ ಸಂಖ್ಯೆ

ಬೆಂಗಳೂರು: ಕಳೆದ ಬುಧವಾರ ಸಿಲಿಕಾನ್​ ಸಿಟಿಯಲ್ಲಿ ಸುರಿದ ಭಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಮಳೆ ಪರಿಣಾಮದಿಂದಾಗಿ ಟ್ರಾಫಿಕ್​ ಜಾಮ್​ ಮತ್ತು ಮಳೆ ನೀರಿನಿಂದ ರಸ್ತೆಗಳೆಲ್ಲ ತುಂಬಿ ಹರಿಯುತ್ತಿದೆ. ಇದರಿಂದ ಬೇಸತ್ತಿರುವ ಬೆಂಗಳೂರಿನ ಜನ ಸದ್ಯ ನಮ್ಮ ಮೆಟ್ರೋ ಮೊರೆ ಹೋಗಿದ್ದು, ದಾಖಲೆಯ ಮಟ್ಟದಲ್ಲಿ ಪ್ರಯಾಣ ಮಾಡಿದ್ದಾರೆ.

ಸಾಮಾನ್ಯವಾಗಿ ದಿನವೊಂದಕ್ಕೆ ಸುಮಾರು 10 ಲಕ್ಷ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಿದ್ದರು. ಆದರೆ, ಏಪ್ರಿಲ್ 29ರ ಬುಧವಾರದಂದು ಬರೋಬ್ಬರಿ 12.85 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುವ ಮೂಲಕ ನಮ್ಮ ಮೆಟ್ರೋ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ. ಈ ಹಿಂದೆ ಇದ್ದ ಗರಿಷ್ಠ 10.87 ಲಕ್ಷ ಪ್ರಯಾಣಿಕರ ದಾಖಲೆಯನ್ನು ಇದು ಬೃಹತ್ ಅಂತರದಿಂದ ಹಿಂದಿಕ್ಕಿದೆ.

ಇನ್ನು ಧಾರಾಕಾರ ಮಳೆಯಿಂದಾಗಿ ಓಲಾ, ಉಬರ್ ಮತ್ತು ಆಟೋಗಳ ಬುಕಿಂಗ್ ಸಿಗದೆ ಜನರು ಪರದಾಡುವ ಸ್ಥಿತಿ ನಿರ್ಮಾನವಾಗಿತ್ತು. ಅಲ್ಲದೆ, ಬೇಡಿಕೆ ಹೆಚ್ಚಾದ ಕಾರಣ ದರದಲ್ಲೂ ಭಾರಿ ಏರಿಕೆಯಾಗಿತ್ತು. ಇದರಿಂದ ಬೇಸತ್ತ ಜನರು ಮೆಜೆಸ್ಟಿಕ್ (ನಾಡಪ್ರಭು ಕೆಂಪೇಗೌಡ ನಿಲ್ದಾಣ) ಮತ್ತು ಆರ್.ವಿ. ರಸ್ತೆಯ ಇಂಟರ್‌ಚೇಂಜ್ ನಿಲ್ದಾಣಗಳಿಗೆ ಬಂದು ತಮ್ಮ ತಮ್ಮ ಸ್ಥಳಗಳಿಗೆ ಸಂಚರಿಸಿದರು.

ವರದಿಯ ಪ್ರಕಾರ, ಈ ಎರಡು ಪ್ರಮುಖ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿಯೇ ಸುಮಾರು 2.52 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಜನರು ಎಸಿ ಸೌಲಭ್ಯವಿರುವ ಬಿಎಂಟಿಸಿ ಬಸ್ ಹಾಗೂ ಮೆಟ್ರೋ ಅವಲಂಬಿಸಿದ್ದರು. ಆದರೆ ಇ ಬಾರಿ ಭಾರಿ ಮಳೆಯಿಂದ ತಪ್ಪಿಸಿಕೊಳ್ಳಲು ಮೆಟ್ರೋದಲ್ಲಿ ಸಂಚರಿಸಿದ್ದಾರೆ.

RELATED ARTICLES
- Advertisment -
Google search engine

Most Popular