Friday, April 24, 2026
Google search engine

Homeರಾಜ್ಯಒಳಮೀಸಲಾತಿ ಗೊಂದಲಕ್ಕೆ ಸರ್ಕಾರದಿಂದ ಅಂತ್ಯ : ದಲಿತ ಸಮುದಾಯಗಳಿಗೆ ಹೊಸ ಮೀಸಲಾತಿ ಹಂಚಿಕೆ

ಒಳಮೀಸಲಾತಿ ಗೊಂದಲಕ್ಕೆ ಸರ್ಕಾರದಿಂದ ಅಂತ್ಯ : ದಲಿತ ಸಮುದಾಯಗಳಿಗೆ ಹೊಸ ಮೀಸಲಾತಿ ಹಂಚಿಕೆ

ಬೆಂಗಳೂರು : ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಲ್ಲಿ ಉಂಟಾಗಿದ್ದ ಗೊಂದಲವನ್ನು ನಿವಾರಿಸುವಲ್ಲಿ ರಾಜ್ಯ ಸರ್ಕಾರ ಸಫಲವಾಗಿದ್ದು  ಇದೀಗ ಒಳಮೀಸಲಾತಿ ಹಂಚಿಕೆ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ  ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಕಗ್ಗಂಟಿಗೆ ಅಂತ್ಯ ಹಾಡಲಾಗಿದೆ. ದಲಿತ ಎಡಗೈ ಸಮುದಾಯಕ್ಕೆ ಶೇ 5.25ರಷ್ಟು ದಲಿತ ಬಲಗೈ ಸಮುದಾಯಕ್ಕೆ ಶೇ 5.25 ರಷ್ಟು ಇತರರಿಗೆ ಶೇ 4.5 ರಷ್ಟು ಮೀಸಲಾತಿ ಹಂಚಿಕೆ ಮಾಡುವ ಮೂಲಕ ನಿರ್ಣಯ ಕೈಗೊಳ್ಳಲಾಗಿದೆ.

ಇದೀಗ ಒಳಮೀಸಲಾತಿ ಕಗ್ಗಂಟು ಬಗೆಹರಿದಿದ್ದು ಇನ್ನಾದರೂ ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ  ನೆನೆಗುದಿಗೆ ಬಿದ್ದಿರುವ ನೇಮಕಾತಿಗಳು ಪ್ರಾರಂಭವಾಗುತ್ತದೆಯೋ ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡುತ್ತದೆಯೋ ಕಾದು ನೋಡಬೇಕಿದೆ.

RELATED ARTICLES
- Advertisment -
Google search engine

Most Popular