ಅಹಮದಾಬಾದ್ : ಐಪಿಎಲ್ 2026 ರ ಮಹಾ ಫೈನಲ್ ಪಂದ್ಯ ಇಂದು ಅಹಮದಾಬಾದ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ (GT) ತಂಡಗಳ ನಡುವೆ ನಡೆಯಲಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪ್ರಶಸ್ತಿ ಜಿದ್ದಾಜಿದ್ದಿಗೂ ಮುನ್ನ, ಖ್ಯಾತ ಸೂಫಿ ಗಾಯಕ ಕೈಲಾಶ್ ಖೇರ್ ತಮ್ಮ ಧ್ವನಿಯ ಜಾದೂ ಹರಡಲಿದ್ದಾರೆ. ಫೈನಲ್ ಪಂದ್ಯದ ವೇಳೆ ಸ್ಟೇಡಿಯಂ ಮೇಲ್ಭಾಗದಲ್ಲಿ ಡ್ರೋನ್ ಶೋ ಕೂಡ ಆಯೋಜಿಸಲಾಗಿದ್ದು, ಇದರಲ್ಲಿ ಅತ್ಯಂತ ಸುಂದರವಾದ ತ್ರಿಶೂಲದ ಆಕೃತಿಯನ್ನು ಸೃಷ್ಟಿಸಲಾಗುತ್ತದೆ.
ಮಾಹಿತಿಯ ಪ್ರಕಾರ, ಕೈಲಾಶ್ ಖೇರ್ ಐಪಿಎಲ್ 2026 ರ ಫೈನಲ್ ನ ಟಾಸ್‌ಗಿಂತ ಮೊದಲು ಪ್ರದರ್ಶನ ನೀಡಿ ಕ್ರೀಡಾಂಗಣದಲ್ಲಿ ಜೋಶ್ ಹೆಚ್ಚಿಸಲಿದ್ದಾರೆ. ಶುಭಮನ್ ಗಿಲ್ ಮತ್ತು ರಜತ್ ಪಾಟೀದಾರ್ ಟಾಸ್ ಗಾಗಿ ಸಂಜೆ 6.58 ಕ್ಕೆ ಮೈದಾನಕ್ಕೆ ಬರಲಿದ್ದು, 7 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.
ಸತತ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುತ್ತಾ RCB?
ಗುಜರಾತ್ ಟೈಟನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡೂ ತಂಡಗಳು ಇದುವರೆಗೆ ತಲಾ 1 ಬಾರಿ ಚಾಂಪಿಯನ್ ಆಗಿವೆ. ಹಾಗಾಗಿ ಇಂದು ಯಾವುದೇ ತಂಡ ಗೆದ್ದರೂ ಅದು ಅವರ ಎರಡನೇ ಟ್ರೋಫಿಯಾಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಕಳೆದ ವರ್ಷವಷ್ಟೇ (2025) ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು.
ರಜತ್ ಪಾಟೀದಾರ್ ನಾಯಕತ್ವದ ಆರ್‌ಸಿಬಿ ತಂಡವು ಈ ಬಾರಿಯ ಅಂಕಪಟ್ಟಿಯಲ್ಲೂ ಮೊದಲ ಸ್ಥಾನದಲ್ಲಿತ್ತು. ಅಷ್ಟೇ ಅಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಜಿಟಿ ತಂಡವನ್ನು ಬುಡಮೇಲು ಮಾಡಿ ನೇರವಾಗಿ ಫೈನಲ್ ತಲುಪಿತ್ತು. ಆದರೆ, ಇಂದಿನ ಫೈನಲ್ ಪಂದ್ಯ ಗುಜರಾತ್‌ನ ತವರಿನ ಮೈದಾನವಾದ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವುದು ಜಿಟಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಗುಜರಾತ್ ಟೈಟನ್ಸ್ ತಂಡ
ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಜೇಸನ್ ಹೋಲ್ಡರ್, ಕಗಿಸೊ ರಬಾಡ, ರಶೀದ್ ಖಾನ್, ಮೊಹಮ್ಮದ್ ಸಿರಾಜ್, ಶಾರುಖ್ ಖಾನ್, ಸಾಯಿ ಕಿಶೋರ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧ್ ಕೃಷ್ಣ, ಕುಲವಂತ್ ಖೇಜ್ರೋಲಿಯಾ, ಗ್ಲೆನ್ ಫಿಲಿಪ್ಸ್, ಇಶಾಂತ್ ಶರ್ಮಾ, ರಾಹುಲ್ ತೇವಾಟಿಯಾ, ಲ್ಯೂಕ್ ವುಡ್, ಜಯಂತ್ ಯಾದವ್, ಅನುಜ್ ರಾವತ್ (ವಿಕೆಟ್ ಕೀಪರ್), ಕುಮಾರ್ ಕುಶಾಗ್ರ (ವಿಕೆಟ್ ಕೀಪರ್), ಮಾನವ್ ಸುತಾರ್, ಅರ್ಷದ್ ಖಾನ್, ಅಶೋಕ್ ಶರ್ಮಾ, ಗುರ್ನೂರ್ ಬ್ರಾರ್, ನಿಶಾಂತ್ ಸಿಂಧು, ಕಾನರ್ ಎಸ್ಟರ್‌ಹ್ಯೂಜೆನ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ
ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ಟೀಮ್ ಡೇವಿಡ್, ದೇವದತ್ ಪಡಿಕ್ಕಲ್, ಜೋರ್ಡಾನ್ ಕಾಕ್ಸ್,ಕೃನಾಲ್ ಪಾಂಡ್ಯ, ವೆಂಕಟೇಶ್ ಅಯ್ಯರ್,ಜಾಕೋಬ್ ಡಫ್ಫಿ, ಜೋಶ್ ಹ್ಯಾಜಲ್‌ವುಡ್, ಸ್ವಪ್ನಿಲ್ ಸಿಂಗ್, ಭುವನೇಶ್ವರ್ ಕುಮಾರ್,ರಿಚರ್ಡ್ ಗ್ಲೀಸನ್, ನುವಾನ್ ತುಷಾರ, ರೊಮಾರಿಯೋ ಶೆಫರ್ಡ್, ರಸಿಕ್ ಸಲಾಮ್, ವಿಕ್ಕಿ ಓಸ್ತ್ವಾಲ್, ಮಂಗೇಶ್ ಯಾದವ್, ಸುಯಶ್ ಶರ್ಮಾ, ವಿಹಾನ್ ಮಲ್ಹೋತ್ರಾ, ಅಭಿನಂದನ್ ಸಿಂಗ್, ಕನಿಷ್ಕ್ ಚೌಹಾಣ್, ಸಾತ್ವಿಕ್ ದೇಸ್ವಾಲ್ (ಏಜೆನ್ಸಿಸ್)



