Tuesday, May 26, 2026
Google search engine

Homeರಾಜಕೀಯಜೂನ್ 18ಕ್ಕೆ ವಿಧಾನಪರಿಷತ್ ಚುನಾವಣೆ ಘೋಷಣೆ : ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸ್ಥಾನ ಸಾಧ್ಯತೆ

ಜೂನ್ 18ಕ್ಕೆ ವಿಧಾನಪರಿಷತ್ ಚುನಾವಣೆ ಘೋಷಣೆ : ಕಾಂಗ್ರೆಸ್‌ಗೆ 5, ಬಿಜೆಪಿಗೆ 2 ಸ್ಥಾನ ಸಾಧ್ಯತೆ

ಬೆಂಗಳೂರು : ರಾಜ್ಯಸಭಾ ಚುನಾವಣೆ ಘೋಷಣೆ ಬೆನ್ನಲ್ಲೇ ಕರ್ನಾಟಕದ ವಿಧಾನಪರಿಷತ್ ಎಲೆಕ್ಷನ್​​ಗೂ ದಿನಾಂಕ ಪ್ರಕಟಗೊಂಡಿದೆ. ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಜೂನ್ 18ರಂದು ಚುನಾವಣೆ ನಡೆಯಲಿದೆ. ಕಾಂಗ್ರೆಸ್​​ನ 3, ಬಿಜೆಪಿಯ 3 ಮತ್ತು ಜೆಡಿಎಸ್​​ನ ಒಂದು ಸದಸ್ಯರ ಅವಧಿ ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಚುನಾವಣೆಗೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕಾಂಕ್ಷಿಗಳು ಅಲರ್ಟ್​​ ಆಗಿದ್ದು, ಸ್ಥಾನ ಗಿಟ್ಟಿಸಲು ಕಾರ್ಯಕತಂತ್ರ ಶುರುಮಾಡಿದ್ದಾರೆ.

  • ಕರ್ನಾಟಕದ ವಿಧಾನಪರಿಷತ್​​ ಚುನಾವಣೆಗೆ ದಿನಾಂಕ ಘೋಷಣೆ
  • ಜೂನ್ 26ರಂದು ತೆರವಾಗಲಿರುವ ಪರಿಷತ್​​ನ 7 ಸ್ಥಾನಗಳಿಗೆ ಎಲೆಕ್ಷನ್​​
  • ಜೂನ್ 18ರಂದು 7 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳಾಪಟ್ಟಿ :

ಚುನಾವಣೆ ಅಧಿಸೂಚನೆ : ಜೂನ್​​ 01

ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಜೂನ್​​ 08

ನಾಮಪತ್ರ ಪರಿಶೀಲನೆ: ಜೂನ್​​ 09

ನಾಮಪತ್ರ ಹಿಂಪಡೆಯಲು ಕೊನೇ ದಿನ: ಜೂನ್​​ 11

ಮತದಾನ: ಜೂನ್​​ 18

ಫಲಿತಾಂಶ: ಜೂನ್​​ 18

ವಿಧಾನ ಪರಿಷತ್ತಿನ​​ ಯಾವೆಲ್ಲ ಸದಸ್ಯರ ಅವಧಿ ಮುಕ್ತಾಯ?

ಬಿ.ಕೆ. ಹರಿಪ್ರಸಾದ್​​, ನಾಸೀರ್​​ ಅಹ್ಮದ್​​, ತಿಪ್ಪಣ್ಣ, ಪ್ರತಾಪ್​​ ಸಿಂಹ ನಾಯಕ್​​, ಎನ್​​. ನಾಗರಾಜು (ಎಂಟಿಬಿ), ಸುನಿಲ್​​ ವಲ್ಯಾಪುರ ಮತ್ತು ಗೋವಿಂದರಾಜು ಅವರ ಅಧಿಕಾರ ಅವಧಿಯು ಜೂನ್​​ನಲ್ಲಿ ಮುಕ್ತಾಯವಾಗಲಿದೆ. ಇನ್ನು ವಿಧಾನ ಸಭೆಯ ಹಾಲಿ ಬಲಾಬಲವನ್ನು ಗಮನಿಸಿದರೆ ತೆರವಾಗಲಿರುವ 7 ಸ್ಥಾನಗಳ ಪೈಕಿ 5 ಸ್ಥಾನಗಳು ಕಾಂಗ್ರೆಸ್​​ ಮತ್ತು 2 ಸ್ಥಾನಗಳು ಬಿಜೆಪಿ ಪಾಲಾಗುವ ಸಾಧ್ಯತೆ ಇದೆ. ಆ ಮೂಲಕ ಕಾಂಗ್ರೆಸ್​​ 2 ಸ್ಥಾನಗಳನ್ನು ಹೆಚ್ಚಿಸಿಕೊಂಡರೆ, ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್​​ ತಲಾ 1 ಸ್ಥಾನಗಳನ್ನು ಕಳೆದುಕೊಳ್ಳುವ ಲೆಕ್ಕಾಚಾರ ಇದೆ.

RELATED ARTICLES
- Advertisment -
Google search engine

Most Popular