Saturday, February 7, 2026
Google search engine

Homeಆರೋಗ್ಯದೀರ್ಘಕಾಲ ಕುಳಿತು ಕೆಲಸ ಮಾಡುವುದೇ ಸ್ನಾಯು ನೋವಿನ ಮೂಲ

ದೀರ್ಘಕಾಲ ಕುಳಿತು ಕೆಲಸ ಮಾಡುವುದೇ ಸ್ನಾಯು ನೋವಿನ ಮೂಲ

ಇತ್ತೀಚಿನ ದಿನಗಳಲ್ಲಿ ಸ್ನಾಯು ನೋವು ಹೆಚ್ಚಾಗಿ ಎಲ್ಲರಲ್ಲಿಯೂ ಕಂಡುಬರುತ್ತಿರುವುದನ್ನು ಗಮನಿಸಿರಬಹುದು. ಆದರೆ ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚಾಗಿರುತ್ತಾರೆ. ಕೆಲವರು ಈ ರೀತಿ ಕಂಡು ಬರುವ ನೋವು ವಿಟಮಿನ್ ಕೊರತೆ ಎಂದು ಅನೇಕರು ಅಂದುಕೊಳ್ಳುತ್ತಾರೆ. ಆದರೆ ಈ ರೀತಿ ಕಂಡು ಬರುವ ಸ್ನಾಯು ನೋವು ಯಾವುದೇ ವಿಟಮಿನ್ ಕೊರತೆ ಅಥವಾ ಮೂಳೆಗೆ ಸಂಬಂಧ ಪಟ್ಟ ಕಾಯಿಲೆ ಆಗಿರುವುದಿಲ್ಲ. ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾಗಿ ಕೆಲವು ಪರೀಕ್ಷೆಗಳನ್ನು ಮಾಡಿದ ನಂತರವೂ ಕೂಡ ಈ ರೀತಿ ಸಮಸ್ಯೆ ಮುಂದುವರಿದರೆ ಅದಕ್ಕೆ ಕಾರಣಗಳು ಮತ್ತು ತಡೆಗಟ್ಟುವ ವಿಧಾನಗಳ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವೈದ್ಯರು ಹೇಳುವ ಪ್ರಕಾರ, ಈ ರೀತಿಯ ಸ್ನಾಯು ನೋವಿಗೆ ಹಲವು ಕಾರಣಗಳಿರುತ್ತವೆ. ಅವುಗಳಲ್ಲಿ ಒಂದು ಪ್ರಮುಖ ಕಾರಣವೆಂದರೆ ಒಂದೇ ಜಾಗದಲ್ಲಿ ಗಂಟೆಗಟ್ಟಲೆ ಕುಳಿತು ಕೆಲಸ ಮಾಡುವುದು, ಈ ರೀತಿ ಕುಳಿತುಕೊಳ್ಳುವ ಭಂಗಿ ಸರಿಯಾಗಿ ಇಲ್ಲದಿರುವುದು ಸ್ನಾಯು ನೋವಿಗೆ ಕಾರಣವಾಗುತ್ತದೆ. ಲ್ಯಾಪ್‌ಟಾಪ್‌ ಅಥವಾ ಫೋನ್‌ಗಳಲ್ಲಿ ಕೆಲಸ ಮಾಡುವಾಗ ನಿರಂತರವಾಗಿ ಕುತ್ತಿಗೆ ಬಾಗಿರುವುದು ಬೆನ್ನಿನ ಮೇಲೆ ಒತ್ತಡ ಬೀಳುತ್ತದೆ. ಇದು ಸಹ ನೋವಿಗೆ ಕಾರಣವಾಗುತ್ತದೆ. ಜೊತೆಗೆ ವಿಟಮಿನ್‌ಗಳು ಡಿ ಮತ್ತು ಕ್ಯಾಲ್ಸಿಯಂ ಸಾಮಾನ್ಯ ಮಟ್ಟದಲ್ಲಿದ್ದರೂ ಸಹ, ಈ ನೋವು ಕಡಿಮೆಯಾಗದೆಯೇ ಉಳಿಯುತ್ತದೆ.

ಮಾನಸಿಕ ಒತ್ತಡವೂ ಒಂದು ಕಾರಣವಾಗಿರಬಹುದು:

ಕೆಲವೊಮ್ಮೆ ಮಾನಸಿಕ ಒತ್ತಡ ನೇರವಾಗಿ ಅಲ್ಲದಿದ್ದರೂ ಸ್ನಾಯು ನೋವಿಗೆ ಕಾರಣವಾಗಬಹುದು. ಮಾನಸಿಕ ಒತ್ತಡವು ಹಾರ್ಮೋನ್ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ಸ್ನಾಯುಗಳನ್ನು ನಿರಂತರವಾಗಿ ಬಿಗಿಯಾಗಿರಿಸುವುದರಿಂದ ನೋವು ಉಂಟಾಗುತ್ತದೆ. ಇನ್ನು, ಮಾನಸಿಕ ಒತ್ತಡದ ಜೊತೆಗೆ, ನಿದ್ರೆ ಸರಿಯಾಗಿ ಆಗದಿದ್ದರೆ ಅದು ಕೂಡ ನೋವನ್ನು ಉಂಟುಮಾಡಬಹುದು.

ವಿಟಮಿನ್ ಕೊರತೆ ಇಲ್ಲದಿದ್ದರೂ, ದೇಹದಲ್ಲಿ ನೀರಿನ ಕೊರತೆಯಿಂದಾಗಿ ಸ್ನಾಯು ನೋವು ಉಂಟಾಗಬಹುದು. ನೀರಿನ ಕೊರತೆಯು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳನ್ನು ಕಡಿಮೆ ಮಾಡುತ್ತದೆ. ಅದರಲ್ಲಿಯೂ ಅತಿಯಾಗಿ ಬೆವರುವವರು, ಕ್ರೀಡಾಪಟುಗಳು ಸ್ನಾಯು ನೋವಿನ ಸಮಸ್ಯೆಗಳನ್ನು ಹೆಚ್ಚಾಗಿ ಎದುರಿಸುತ್ತಾರೆ. ಅಂತವರು ಕ್ಯಾಲ್ಸಿಯಂ, ವಿಟಮಿನ್‌ ಅಥವಾ ಪ್ರೋಟೀನ್‌ನ ಸೇವನೆಯನ್ನು ಸರಿಯಾಗಿ ಮಾಡುತ್ತಿದ್ದರೂ ಕೂಡ ನಿರ್ಜಲೀಕರಣದಿಂದ ಸ್ನಾಯು ನೋವು ಉಂಟಾಗುತ್ತದೆ.

ಸ್ನಾಯು ನೋವನ್ನು ತಡೆಗಟ್ಟಲು ಸಲಹೆಗಳು:

  • ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ. ಒಂದು ಗಂಟೆಗಿಂತ ಹೆಚ್ಚು ಕಾಲ ಒಂದೇ ಕಡೆಯಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ.
  • ಪ್ರತಿನಿತ್ಯ ಲಘು ವ್ಯಾಯಾಮ ಮಾಡುವುದನ್ನು ಮರೆಯಬೇಡಿ.
  • ಹಗಲಿನಲ್ಲಿ ಕನಿಷ್ಠ 7 ರಿಂದ 8 ಗ್ಲಾಸ್ ನೀರು ಕುಡಿಯಿರಿ.
  • 7 ರಿಂದ 8 ಗಂಟೆ ಸರಿಯಾಗಿ ನಿದ್ದೆ ಮಾಡಿ.
RELATED ARTICLES
- Advertisment -
Google search engine

Most Popular