ಮೈಸೂರು: 2025ರ ನಾಡಹಬ್ಬ ಮೈಸೂರು ದಸರಾದ ಖರ್ಚು ವೆಚ್ಚದ ಲೆಕ್ಕವನ್ನು ಜಿಲ್ಲಾಡಳಿತ ಈಗ ಬಿಡುಗಡೆ ಮಾಡಿದ್ದು. 43 ಕೋಟಿ ಖರ್ಚು ಮಾಡಿರುವುದಾಗಿ ತಿಳಿಸಿದೆ.
ದಸರಾ ಮುಗಿದು 7 ತಿಂಗಳ ಬಳಿಕ ಅದರ ಖರ್ಚು ವೆಚ್ಚದ ಲೆಕ್ಕವನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಯುವದಸರಾಗೆ ಬರೋಬ್ಬರಿ 16 ಕೋಟಿ ರೂ. ವೆಚ್ಚ ಮಾಡಿದೆ. ಸಿವಿಲ್ ಕಾಮಗಾರಿಗಳಿಗೆ 6 ಕೋಟಿ ರೂ. ಏರ್ ಶೋಗೆ 55 ಲಕ್ಷ ರೂ.ಗೆ ನೀಡಲಾಗಿದೆ.
ನಾಡ ಹಬ್ಬ ದಸರಾ ವಿಜೃಂಭಣೆಯಿಂದ ಆಚರಿಸಲು ಸರ್ಕಾರ 30 ಕೋಟಿ, ಮೈಸೂರು ಅಭಿವೃದ್ಧಿ ಪ್ರಾಧಿಕಾರ 10 ಕೋಟಿ, ಪ್ರಾಯೋಜಕತ್ವದಿಂದ 1.81 ಕೋಟಿ, ಟಿಕೆಟ್ ಮಾರಾಟದಿಂದ 3. 21 ಕೋಟಿ ರೂ. ಸೇರಿ ಒಟ್ಟು 45.3 ಕೋಟಿ ರೂ. ಸಂಗ್ರಹವಾಗಿತ್ತು.
ಸ್ವಾಗತ ಆಮಂತ್ರಣ ಮತ್ತು ಸ್ಥಳಾವಕಾಶಕ್ಕೆ 6 ಕೋಟಿ ರೂ, ಮೆರವಣಿಗೆಗೆ 1.60 ಕೋಟಿ ರೂ, ಪಂಜಿನ ಕವಾಯತು 1.48 ಕೋಟಿ ರೂ, ಸ್ತಬ್ಧಚಿತ್ರಕ್ಕೆ 7 ಲಕ್ಷ ರೂ, ರೈತ ದಸರಾಗೆ 52 ಲಕ್ಷ ರೂ, ಸಾಂಸ್ಕೃತಿಕ ದಸರಾಗೆ 3 ಕೋಟಿ ರೂ. ಲಲಿತಕಲೆಗೆ 22 ಲಕ್ಷ ರೂ, ಕವಿಗೋ ಷ್ಠಿಗೆ 70 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಜಿಲ್ಲಾಡಳಿತ ಲೆಕ್ಕ ಕೊಟ್ಟಿದೆ.



