Wednesday, May 13, 2026
Google search engine

Homeಸ್ಥಳೀಯಮುಂಗಾರು ಕೈಕೊಟ್ಟರೆ ನೀರಿಗಾಗಿ ಭಾರೀ ಸಂಕಷ್ಟ : KRS ನೀರಿನ ಮಟ್ಟ 90 ಅಡಿಗೆ ಕುಸಿತ

ಮುಂಗಾರು ಕೈಕೊಟ್ಟರೆ ನೀರಿಗಾಗಿ ಭಾರೀ ಸಂಕಷ್ಟ : KRS ನೀರಿನ ಮಟ್ಟ 90 ಅಡಿಗೆ ಕುಸಿತ

ಮಂಡ್ಯ : ರಾಜ್ಯಾದ್ಯಂತ  ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಬಿರುಬಿಸಿಲಿನಿಂದ ಜನ ತತ್ತರಿಸುತ್ತಿದ್ದಾರೆ. ಈ ಮಧ್ಯೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿರುವ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕುಸಿದಿದೆ.

ಒಟ್ಟು 124.80 ಅಡಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್ ಎಸ್ ಜಲಾಶಯದಲ್ಲಿ ನೀರಿನ ಮಟ್ಟ 90 ಅಡಿಗಳಿಗೆ ಕುಸಿದಿದೆ. ಬೇಸಿಗೆಯ ಆರಂಭದಲ್ಲೇ ನೀರಿನ ಮಟ್ಟ ಇಷ್ಟು ವೇಗವಾಗಿ ಕುಸಿಯುತ್ತಿರುವುದು ಕೃಷಿ ಚಟುವಟಿಕೆಗಳ ಮೇಲೆ ಮಾತ್ರವಲ್ಲದೆ, ಕುಡಿಯುವ ನೀರಿನ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಹಿನ್ನೆಲೆಯಲ್ಲಿ ಕುಡಿಯುವ ನೀರಾಗಾಗಿ ಕಾವೇರಿ ನೀರನ್ನೇ ಅವಲಂಬಿಸಿರುವ ಮಂಡ್ಯ ಮತ್ತು ಮೈಸೂರು ಭಾಗದ ಜನತೆಗೆ ಇದೀಗ ಮತ್ತೊಂದು ಆತಂಕ ಎದುರಾಗಿದೆ.  ಸದ್ಯ  ಜಲಾಶಯದಲ್ಲಿ  ಇರುವುದು ಕೇವಲ 16 ಟಿಎಂಸಿ ನೀರು ಮಾತ್ರ. ಇದರಲ್ಲಿ ಹೂಳು ಮತ್ತು ತಾಂತ್ರಿಕ ಕಾರಣಗಳನ್ನು ಹೊರತುಪಡಿಸಿ, ವಾಸ್ತವಿಕವಾಗಿ ಬಳಕೆಗೆ ಲಭ್ಯವಿರುವುದು ಕೇವಲ 9 ಟಿಎಂಸಿ ನೀರು ಮಾತ್ರ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಮುಂದಿನ ದಿನಗಳಲ್ಲಿ ಮುಂಗಾರು ಮಳೆ ಸರಿಯಾಗಿ ಆಗದಿದ್ದರೆ, ಕೇವಲ ಕೃಷಿಯಷ್ಟೇ ಅಲ್ಲದೆ ಕುಡಿಯುವ ನೀರಿಗೂ ಭಾರೀ ಹಾಹಾಕಾರ ಎದುರಾಗುವ ಸಾಧ್ಯತೆಯಿದೆ.

RELATED ARTICLES
- Advertisment -
Google search engine

Most Popular