Saturday, February 7, 2026
Google search engine

Homeಸ್ಥಳೀಯಸಿದ್ದರಾಮಯ್ಯ ಮೆಟ್ರೋ ದರ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ : ಸಿ.ಟಿ ರವಿ

ಸಿದ್ದರಾಮಯ್ಯ ಮೆಟ್ರೋ ದರ ಬಗ್ಗೆ ಸುಳ್ಳು ಹೇಳುತ್ತಿದ್ದಾರೆ : ಸಿ.ಟಿ ರವಿ

ಬೆಂಗಳೂರು :  ಮೆಟ್ರೋ ದರ ಏರಿಕೆ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ. ಮೆಟ್ರೋ ದರ ಏರಿಕೆ ಕುರಿತು ಬಿಜೆಪಿ ಹೋರಾಟ ಮಾಡಲಿದೆ ಅಂತ ಬಿಜೆಪಿ ನಾಯಕ ಸಿ.ಟಿ ರವಿ ತಿಳಿಸಿದ್ದಾರೆ.

ಮೆಟ್ರೋ ದರ ಏರಿಕೆ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸುಳ್ಳು ಹೇಳೋದ್ರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖ. ಸುಳ್ಳು ಬೆಳಗ್ಗೆ ಪ್ರಾರಂಭ ಮಾಡಿ‌ ಅಂತ್ಯ ಮಾಡೋದು ಸುಳ್ಳಿನಿಂದಲೇ ಅಂತ‌ ಕಿಡಿಕಾರಿದರು.

ಮೆಟ್ರೋ ದರ ಏರಿಕೆ ಸಂಬಂಧ ಪಿ.ಸಿ ಮೋಹನ್ ವಿವರವಾಗಿ ಪತ್ರ ಬರೆದಿದ್ದರು. ಮೆಟ್ರೋ ಲಾಭದಲ್ಲಿ ನಿಮಗೆ ಪಾಲು ಇಲ್ಲವಾ ಸಿದ್ದರಾಮಯ್ಯ ಅವರೇ? ಸಮಿತಿ ಅಧ್ಯಕ್ಷ ಯಾರ್ ಆಗಬೇಕು ಅಂತ ಶಿಫಾರಸು ಮಾಡೋರು ಯಾರು? ಸಂಸದರು ಹೇಳಿದ ಹಾಗೆ ಮೆಟ್ರೋ ದರ ಏರಿಕೆ ಬಗ್ಗೆ ಬಿಜೆಪಿ ಹೋರಾಟ ಮಾಡುತ್ತದೆ ಅಂತ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದರು.

RELATED ARTICLES
- Advertisment -
Google search engine

Most Popular