ಕೆ.ಆರ್.ನಗರ : ಸರ್ಕಾರಿ ಶಾಲೆಗಳ ಶೈಕ್ಷಣಿಕ ಅಭಿವೃದ್ದಿಗೆ ಉಳ್ಳವರು ಶಿಕ್ಷಣ ಇಲಾಖೆಯೊಂದಿಗೆ ಕೈ ಜೋಡಿಸಿ ಉತ್ತಮ ಗುಣಮಟ್ಟದ ಶಿಕ್ಷಣ ತಮ್ಮ ಊರಿನ ಮಕ್ಕಳಿಗೆ ದೊರೆಯಲು ಸಹಕಾರ ನೀಡಬೇಕೆಂದು ಯುವರಾಜ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪ್ರೊ.ಸಿ.ಡಿ.ಪರಶುರಾಮ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕುಪ್ಪೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲಾ ಮಕ್ಕಳಿಗೆ ಚಿಕ್ಕಕೊಪ್ಪಲು ಸಿ.ಎಚ್.ದೇವೇಗೌಡ ಸ್ಮಾರಕ ಉಚಿತ ವಾಚನಾಲಯ ಕೇಂದ್ರದ ವತಿಯಿಂದ ಸಮವಸ್ತ್ರ, ನೋಟ್‌ಬುಕ್, ಲೇಖನ ಸಾಮಗ್ರಿಗಳು ಹಾಗೂ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆಗೆ ಹೋದವರು ಕೂಡ ತಮ್ಮ ಊರಿಗೆ ಕೈಲಾದಷ್ಟು ಸೇವೆ ಮಾಡಿ ಹುಟ್ಟೂರಿನ ಋಣ ತೀರಿಸುವ ಕೆಲಸ ಮಾಡಬೇಕು. ಬಡ ವಿದ್ಯಾರ್ಥಿಗಳ ಓದಿಗೆ ಸಹಾಯ ಹಸ್ತ ಚಾಚಬೇಕು,ಆಗ ಮಾತ್ರ ಉನ್ನತ ಶಿಕ್ಷಣ ಪಡೆದಿದ್ದು ಸಾರ್ಥಕವಾಗಲಿದೆ ಎಂದರು. ಸರ್ಕಾರಿ ಶಾಲೆಗಳ ಉಳಿವಿಗೆ ಗ್ರಾಮಸ್ಥರು ಕೈ ಜೋಡಿಸಬೇಕು. ಶಾಲೆಗಳು ಇಲ್ಲದ ಗ್ರಾಮ ಎಂಬ ಹಣೆ ಪಟ್ಟಿಕೊಳ್ಳಬೇಕಾದ ಪರಿಸ್ಥಿತಿ ಬರದಂತೆ ಎಚ್ಚರ ವಹಿಸಬೇಕು ಎಂದರು.
ನಿವೃತ್ತ ಉಪನ್ಯಾಸಕ ಕೆ.ಎ.ಜವರೇಗೌಡ ಮಾತನಾಡಿ ಪ್ರೊ.ಸಿ.ಡಿ.ಪರುಶುರಾಮ್ ಅವರು ಉನ್ನತ ಹುದ್ದೆಯಲ್ಲಿದ್ದವರು ಈ ಭಾಗದ ಸರ್ಕಾರಿ ಶಾಲೆಗಳ ಶೈಕ್ಷಣ ಅಭಿವೃದ್ದಿಗಾಗಿ ವೈಯಕ್ತಿಕವಾಗಿ ನಿರಂತರವಾಗಿ ಶ್ರಮಿಸುತ್ತಿದ್ದು ಇವರ ಸೇವೆ ಇನ್ನಷ್ಟು ವಿಸ್ತಾರಗೊಳ್ಳಲು ಅವರಿಗೆ ದೇವರು ಶಕ್ತಿ ನೀಡಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ತುಳಸಿ ಶಿವಪ್ರಸಾದ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಅಂಗವಾಡಿ ಮಕ್ಕಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೇ ಲಂಡನ್ ನಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡುತ್ತಿರುವ ಚಿರಾಗ್ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕೆ.ಆರ್.ನಗರ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು, ಜಿಲ್ಲಾ ಪತ್ರಕರ್ತರ ಅಭ್ಯುದಯ ಸಹಕಾರ ಸಂಘದ ನಿರ್ದೇಶಕ ಮುಕುಂದ ರಾವಂದೂರು, ಮುಖ್ಯ ಶಿಕ್ಷಕ ಶ್ರೀರಾಮಪುರ ಶ್ರೀನಿಧಿ, ಸಹಕಾರ ಸಂಘದ ಮಾಜಿ ಅಧ್ಯಕ್ಷರಾದ ಡಿ.ರಾಮಕೃಷ್ಣೇಗೌಡ, ಕೆ.ಆರ್.ಮಂಜುನಾಥ್, ಮಾಜಿ ನಿರ್ದೇಶಕ ವಿಶ್ವಶ್ವೇರಯ್ಯ,ಮಾಸ್ಟರ್ ಹಿರಣ್ಣಯ್ಯ,ರಾಮೇಗೌಡ, ಚಂದ್ರೇಗೌಡ,ನಾಟಿ ವೈದ್ಯ ನಾಗರಾಜೇಗೌಡ, ಕೆ.ಸಿ.ಸುಬ್ಬೇಗೌಡ , ಟೈಲರ್ ತಮ್ಮಯ್ಯ, ಕೆ.ಎನ್.ದಿನೇಶ್, ಶಾಲಾಭಿವೃದ್ದಿ ಸಮಿತಿಯ ಸದಾ ಶಿವಕೀರ್ತಿ, ಆನಂದ್, ಎಂ.ಎಸ್. ಅನು, ಎನ್. ಸರಸ್ವತಿ, ಕೆ.ಎಸ್.ಶಂಕುರಲ, ಮುದ್ದನಹಳ್ಳಿ ಅರುಕುಮಾರ್ ಸೇರಿದಂತೆ ಹಲವರು ಹಾಜರಿದ್ದರು.



