Wednesday, April 22, 2026
Google search engine

Homeವಿದೇಶಟ್ರಂಪ್ ಕದನ ವಿರಾಮ ಘೋಷಣೆ ವಿಸ್ತರಣೆ : ಇದು ಅಮೆರಿಕದ ಹೊಸ ಸಂಚು ಎಂದ ಇರಾನ್!

ಟ್ರಂಪ್ ಕದನ ವಿರಾಮ ಘೋಷಣೆ ವಿಸ್ತರಣೆ : ಇದು ಅಮೆರಿಕದ ಹೊಸ ಸಂಚು ಎಂದ ಇರಾನ್!

ಟೆಹ್ರಾನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಜೊತೆಗಿನ ಕದನ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಆದರೆ, ಅಮೆರಿಕದ ಈ ನಡೆಯನ್ನು ಇರಾನ್ ತೀವ್ರವಾಗಿ ವಿರೋಧಿಸಿದ್ದು, ಇದನ್ನು “ಹೊಸ ತಂತ್ರ” ಅಥವಾ “ಸರ್ಪ್ರೈಸ್ ಅಟ್ಯಾಕ್” ಮಾಡುವ ಸಂಚು ಎಂದು ಕರೆದಿದೆ.

ಟ್ರಂಪ್ ನಿರ್ಧಾರ: ಪಾಕಿಸ್ತಾನದ ಮನವಿ ಮತ್ತು ಇರಾನ್ ಸರ್ಕಾರದ ಒಳಗಿನ ಭಿನ್ನಾಭಿಪ್ರಾಯಗಳನ್ನು ಗಮನದಲ್ಲಿಟ್ಟುಕೊಂಡು ದಾಳಿಯನ್ನು ತಾತ್ಕಾಲಿಕವಾಗಿ ತಡೆಹಿಡಿದು, ಕದನ ವಿರಾಮ ವಿಸ್ತರಿಸಲು ಟ್ರಂಪ್ ನಿರ್ಧರಿಸಿದ್ದಾರೆ.

ಇರಾನ್ ಆಕ್ಷೇಪ: ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಗೇರ್ ಗಾಲಿಬಾಫ್ ಅವರ ಸಲಹೆಗಾರರು ಅಮೆರಿಕದ ಈ ನಡೆಯನ್ನು ತಿರಸ್ಕರಿಸಿದ್ದಾರೆ. ಅಮೆರಿಕ ವಿಧಿಸಿರುವ ನೌಕಾ ದಿಗ್ಬಂಧನದ ವಿರುದ್ಧ ಸೇನಾ ಕಾರ್ಯಾಚರಣೆಯ ಮೂಲಕವೇ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಜೆಡಿ ವ್ಯಾನ್ಸ್ ಭೇಟಿ ರದ್ದು: ಇರಾನ್ ಜೊತೆಗಿನ ಎರಡನೇ ಸುತ್ತಿನ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಬೇಕಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ವಿವಾದಕ್ಕೆ ಕಾರಣವೇನು?

ಅಮೆರಿಕ ಕದನ ವಿರಾಮ ಘೋಷಿಸಿದರೂ, ಇರಾನ್‌ ನ ಬಂದರುಗಳ ಮೇಲೆ ವಿಧಿಸಲಾಗಿರುವ ನೌಕಾ ದಿಗ್ಬಂಧನವನ್ನು (Naval Blockade) ಮುಂದುವರಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರು, “ದಿಗ್ಬಂಧನವು ಯುದ್ಧಕ್ಕೆ ಸಮಾನ” ಎಂದು ಕಿಡಿಕಾರಿದ್ದಾರೆ. ಅಲ್ಲದೆ, ವಾಣಿಜ್ಯ ಹಡಗಿನ ಮೇಲಿನ ದಾಳಿ ಮತ್ತು ಸಿಬ್ಬಂದಿಯನ್ನು ಒತ್ತೆ ಇರಿಸಿಕೊಂಡಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಎಂದು ಇರಾನ್ ಆರೋಪಿಸಿದೆ.

ಟ್ರಂಪ್ ಬೇಡಿಕೆ:

ಇರಾನ್ ಸರ್ಕಾರದಲ್ಲಿ ಒಮ್ಮತವಿಲ್ಲದ ಕಾರಣ, ಅವರು ಮೊದಲು ಒಂದೇ ವೇದಿಕೆಯಲ್ಲಿ ನಿಂತು “ಏಕೀಕೃತ ಪ್ರಸ್ತಾವನೆ” (Unified Proposal) ಸಲ್ಲಿಸಲಿ ಆ ಬಳಿಕವಷ್ಟೇ ಮುಂದಿನ ಮಾತುಕತೆ ಎಂದು ಟ್ರಂಪ್ ಹೇಳಿದ್ದಾರೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular