ವಾಷಿಂಗ್ಟನ್: ಅಮೆರಿಕದ ರಾಜಧಾನಿ ವಾಷಿಂಗ್ಟನ್ ಡಿ.ಸಿ.ಯಲ್ಲಿ ಪ್ರತಿವರ್ಷ ನಡೆಯುವ ಅತ್ಯಂತ ಪ್ರತಿಷ್ಠಿತ ಮತ್ತು ಅದ್ದೂರಿ ಕಾರ್ಯಕ್ರಮ ಎಂದರೆ ಅದು ‘ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ಡಿನ್ನರ್’ (WHCD). ಪತ್ರಕರ್ತರು ಮತ್ತು ಸರ್ಕಾರದ ನಡುವಿನ ಬಾಂಧವ್ಯ ವೃದ್ಧಿಸಲು ಆಯೋಜಿಸುವ ಈ ಔತಣಕೂಟವನ್ನು “ವಾಷಿಂಗ್ಟನ್‌ನ ಆಸ್ಕರ್ ಹಬ್ಬ” ಎಂದೇ ಕರೆಯಲಾಗುತ್ತದೆ.
2026ರ ಈ ಬಾರಿಯ ಡಿನ್ನರ್ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿದೆ. ಶ್ವೇತ ಭವನದ ವಿದ್ಯಮಾನಗಳನ್ನು ವರದಿ ಮಾಡುವ ಪತ್ರಕರ್ತರಿಗಾಗಿ ವೈಟ್ ಹೌಸ್ ಕರೆಸ್ಪಾಂಡೆಂಟ್ಸ್ ಅಸೋಸಿಯೇಷನ್ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ. ಈ ಕಾರ್ಯಕ್ರಮದ ಮೂಲಕ ಸಂಗ್ರಹವಾಗುವ ಹಣವನ್ನು ಪ್ರತಿಭಾವಂತ ಪತ್ರಕರ್ತರಿಗೆ ಸ್ಕಾಲರ್‌ಶಿಪ್ ನೀಡಲು ಬಳಸಲಾಗುತ್ತದೆ. ಪತ್ರಿಕೋದ್ಯಮದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಇಲ್ಲಿ ಗೌರವಿಸಲಾಗುತ್ತದೆ.
2026ರ ವಿಶೇಷತೆಗಳು
2017-2020ರ ನಡುವಿನ ತಮ್ಮ ಮೊದಲ ಅವಧಿಯಲ್ಲಿ ಮಾಧ್ಯಮಗಳ ಮೇಲಿನ ಅಸಮಾಧಾನದಿಂದ ಈ ಡಿನ್ನರ್ ಅನ್ನು ಬಹಿಷ್ಕರಿಸಿದ್ದ ಡೊನಾಲ್ಡ್ ಟ್ರಂಪ್, 2026 ರಲ್ಲಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಭಾಗವಹಿಸಿ ಎಲ್ಲರ ಗಮನ ಸೆಳೆದರು. ಜೊತೆಗೆ ಈ ಬಾರಿ ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರು ಟ್ರಂಪ್ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಗಣ್ಯರು ‘ಕೌಬಾಯ್’ ಶೈಲಿಯ ಉಡುಗೆಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಹೊಸ ಕಳೆ ನೀಡಿದ್ದರು. ಇತಿಹಾಸದಲ್ಲೇ ಮೊದಲ ಬಾರಿಗೆ ಈ ಕಾರ್ಯಕ್ರಮವು ನೆಟ್‌ಫ್ಲಿಕ್ಸ್‌ನಲ್ಲಿ ನೇರಪ್ರಸಾರಗೊಂಡು ವಿಶ್ವದಾದ್ಯಂತ ವೀಕ್ಷಿಸಲ್ಪಟ್ಟಿತು. ಸಂಪ್ರದಾಯದಂತೆ ಅಧ್ಯಕ್ಷರು ತಮ್ಮನ್ನು ತಾವು ಮತ್ತು ವಿರೋಧಿಗಳನ್ನು ಲೇವಡಿ ಮಾಡಿದರು. ಆದರೆ, ಹಾಸ್ಯನಟ ಸಿನ್ಬಾಡ್ ಪ್ರದರ್ಶನ ನೀಡುತ್ತಿದ್ದಾಗ ಗುಂಡಿನ ಸದ್ದು ಕೇಳಿಬಂದ ಕಾರಣ ಅವರು ವೇದಿಕೆಯಿಂದ ಓಡಿಹೋಗಬೇಕಾದ ಘಟನೆಯೂ ನಡೆಯಿತು.
1914ರಲ್ಲಿ ಸ್ಥಾಪನೆಯಾದ ಈ ಸಂಘವು 1921 ರಲ್ಲಿ ತನ್ನ ಮೊದಲ ಔತಣಕೂಟವನ್ನು ಕೇವಲ 50 ಪುರುಷರೊಂದಿಗೆ ಆರಂಭಿಸಿತ್ತು. 1950ರ ದಶಕದವರೆಗೆ ಇಲ್ಲಿ ಕರಿಯರಿಗೆ ಪ್ರವೇಶವಿರಲಿಲ್ಲ ಮತ್ತು 1962ರ ನಂತರವಷ್ಟೇ ಮಹಿಳೆಯರಿಗೆ ಅವಕಾಶ ನೀಡಲಾಯಿತು. 1924 ರಲ್ಲಿ ಕ್ಯಾಲ್ವಿನ್ ಕೂಲಿಡ್ಜ್ ಭಾಗವಹಿಸಿದ ನಂತರ, ಅಧ್ಯಕ್ಷರು ಕನಿಷ್ಠ ಒಂದು ಬಾರಿಯಾದರೂ ಈ ಕೂಟಕ್ಕೆ ಬರುವುದು ಸಂಪ್ರದಾಯವಾಯಿತು.
1968 ರಿಂದ ಈ ಡಿನ್ನರ್ ಸತತವಾಗಿ ವಾಷಿಂಗ್ಟನ್ ಹಿಲ್ಟನ್ ಹೋಟೆಲ್‌ನ ಇಂಟರ್ನ್ಯಾಷನಲ್ ಬಾಲ್‌ರೂಮ್‌ನಲ್ಲಿ ನಡೆಯುತ್ತಿದೆ. 1981ರಲ್ಲಿ ಅಧ್ಯಕ್ಷ ರೋನಾಲ್ಡ್ ರೇಗನ್ ಮೇಲೆ ಈ ಹೋಟೆಲ್ ಹೊರಭಾಗದಲ್ಲೇ ಹತ್ಯೆಯ ಯತ್ನ ನಡೆದಿದ್ದರಿಂದ ಇದನ್ನು “ಹಿಂಕ್ಲಿ ಹಿಲ್ಟನ್” ಎಂದೂ ಕರೆಯಲಾಗುತ್ತದೆ. 36 ಸಾವಿರ ಚದರ ಅಡಿ ವಿಸ್ತೀರ್ಣದ ಈ ಹಾಲಿನಲ್ಲಿ ಯಾವುದೇ ಕಂಬಗಳಿಲ್ಲ. ಹೀಗಾಗಿ 3,000 ಜನರಿಗೆ ಎಲ್ಲಿ ಕುಳಿತರೂ ವೇದಿಕೆ ಸ್ಪಷ್ಟವಾಗಿ ಕಾಣುತ್ತದೆ.ಮತ್ತೊಂದು ವಿಶೇಷವೆಂದರೆ ಅಧ್ಯಕ್ಷರ ಭದ್ರತೆಗಾಗಿ ಇಲ್ಲಿ ರಹಸ್ಯ ಸುರಂಗ ಮಾರ್ಗವಿದೆ. ಇದು ಅವರು ಯಾರಿಗೂ ಕಾಣಿಸದಂತೆ ನೇರವಾಗಿ ವೇದಿಕೆಗೆ ಬರಲು ಸಹಾಯ ಮಾಡುತ್ತದೆ.



