ಮಂಗಳೂರು
ಶಿವಮೊಗ್ಗ ಜಿಲ್ಲೆಯ ತ್ಯಾವರೆ ಕೊಪ್ಪ ಹುಲಿ ಮತ್ತು ಸಿಂಹ ನಿಸರ್ಗಧಾಮದಲ್ಲಿ ಮಾಚ್ 19 ರಂದು ತಡರಾತ್ರಿ ಚಿಕಿತ್ಸೆ ನೀಡುತ್ತಿದ್ದ ವೇಳೆ ನೀರಾನೆ ದಾಳಿಗೆ ತುತ್ತಾಗಿ ಮೃತಪಟ್ಟಿರುವ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರ ಅಕಾಲಿಕ ಸಾವಿನ ಬಗ್ಗೆ ಮೃತರ ಆತ್ಮಕ್ಕೆ ಶಾಂತಿ ಕೋರುವ ಶ್ರದ್ದಾಂಜಲಿ ಸಭೆ ದ.ಕ. ಜಿಲ್ಲೆ ಪಶುವೈದ್ಯಕೀಯ ಸಂಘದ ಆವರಣದಲ್ಲಿ ನಡೆಸಲಾಯಿತು.
ಸಂಘದ ಸದಸ್ಯರು ಮೌನಾಚರಣೆ ಮೂಲಕ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿದರು.
ಸಂಘದ ಅಧ್ಯಕ್ಷ ಡಾ. ಅರುಣ್ ಕುಮಾರ್ ಶೆಟ್ಟಿ ಎನ್. ಮಾತನಾಡಿ, ಸರ್ಕಾರವು ಅರಣ್ಯ ಇಲಾಖೆ ಮುಖಾಂತರ ನಡೆಸಲಾಗುವ ರಾಜ್ಯದ ಎಲ್ಲಾ ಮೃಗಾಲಯದಲ್ಲಿ ಸೇವೆಸಲ್ಲಿಸುವ ಪಶುವೈದ್ಯರಿಗೆ ಸಾಕಷ್ಟು ರಕ್ಷಣಾ ಮುಂಜಾಗರೂಕತೆ ಕ್ರಮ ಹಾಗೂ ಅಗತ್ಯ ತಾಂತ್ರಿಕ ಸಿಬ್ಬಂದಿಯ ನೆರವನ್ನು ನೀಡುವಂತೆ ಮನವಿ ಮಾಡಿದರು. ಪ್ರತೀ ಮೃಗಾಲಯದಲ್ಲಿಯೂ ಪ್ರಮಾಣಿತ ಕಾರ್ಯಾಚರಣೆ ಕಾರ್ಯವಿಧಾನವನ್ನು ಚಿಕಿತ್ಸೆ ವೇಳೆ ಕಟ್ಟು ನಿಟ್ಟಾಗಿ ಪಾಲನೆಯಾಗುವ ಬಗ್ಗೆ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಮೃತರ ಕುಟುಂಬಕ್ಕೆ ಗರಿಷ್ಟ 1 ಕೋಟಿ ರೂ. ಮೊತ್ತ ಪರಿಹಾರವನ್ನು ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಪಶುವೈದ್ಯಕೀಯ ಸಂಘದ ವತಿಯಿಂದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರಿಗೆ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನೀಡಲಾಯಿತು.
ಈ ಸಂದರ್ಭದಲ್ಲಿ ಡಾ. ವಸಂತ್ ಕುಮಾರ್, ಡಾ. ಅಶೋಕ್ ಕೆ.ಆರ್., ಡಾ. ರೇಖಾ ಎಂ.ಟಿ., ಡಾ. ಧರಣೇಶ್, ಡಾ. ಕಮಲೇಶ್, ಮುಂತಾದವರು ಹಾಜರಿದ್ದರು. ಮೃತರ ಸಾವಿನ ಬಗ್ಗೆ ಪ್ರತಿಭಟನೆಯಾಗಿ ಇಂದು ಜಿಲ್ಲೆಯ ಎಲ್ಲಾ ಪಶುವೈದ್ಯರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಿದರು.
ಪಶುವೈದ್ಯೆಯ ದುರ್ಮರಣ: ಕಪ್ಪು ಪಟ್ಟಿ ಧರಿಸಿ ಮಂಗಳೂರಲ್ಲಿ ಸಂತಾಪ
RELATED ARTICLES



