Thursday, March 26, 2026
Google search engine

Homeಸ್ಥಳೀಯಮಡಿಕೇರಿ ಹೊರವಲಯದಲ್ಲಿ ಹುಲಿ ಪ್ರತ್ಯಕ್ಷ : ಹುಲಿ ಪತ್ತೆಗೆ ನಿಂತ ಅರಣ್ಯ ಇಲಾಖೆ

ಮಡಿಕೇರಿ ಹೊರವಲಯದಲ್ಲಿ ಹುಲಿ ಪ್ರತ್ಯಕ್ಷ : ಹುಲಿ ಪತ್ತೆಗೆ ನಿಂತ ಅರಣ್ಯ ಇಲಾಖೆ

ಮಡಿಕೇರಿ : ಮಡಿಕೇರಿ ನಗರದ ಹೊರವಲಯದಲ್ಲಿ ಹುಲಿ ಓಡಾಟ ಕಂಡುಬಂದಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎಚ್ಚೆತ್ತುಕೊಂಡಿದ್ದು, ಹುಲಿ ಸೆರೆಗೆ ಕಾರ್ಯಾಚರಣೆ ಆರಂಭಿಸಿದೆ. ಇಬ್ಬನಿವಳವಾಡಿ, ಸಿಂಕೋನ ಹಾಗೂ ಕಗ್ಗೋಡ್ಲು ಸುತ್ತಮುತ್ತ ಪ್ರದೇಶಗಳಲ್ಲಿ ಹುಲಿ ಕಾಣಿಸಿಕೊಂಡಿರುವ ಮಾಹಿತಿ ಹಿನ್ನೆಲೆ, ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಜನರಲ್ಲಿ ಆತಂಕ ಉಂಟಾಗಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಕಟ್ಟು ನಿಟ್ಟಿನ ನಿಗಾವಹಿಸಲಾಗಿದೆ.

ಕಾರ್ಯಾಚರಣೆಗೆ ಮೂರು ಸಾಕಾನೆಗಳನ್ನು ಬಳಸಲಾಗುತ್ತಿದ್ದು, ದಟ್ಟ ಅರಣ್ಯ ಪ್ರದೇಶಗಳಲ್ಲಿ ಹುಲಿಯ ಚಲನವಲನ ಪತ್ತೆ ಮಾಡಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಥರ್ಮಲ್ ಡ್ರೋನ್ ಮೂಲಕವೂ ಹುಲಿಯ ಹಾದಿ ಮತ್ತು ಚಲನವಲನಗಳನ್ನು ನಿಗಾವಹಿಸಲಾಗುತ್ತಿದೆ.

RELATED ARTICLES
- Advertisment -
Google search engine

Most Popular