ಕೆ.ಆರ್.ನಗರ : ಪಟ್ಟಣದ ಸಾರ್ವಜನಿಕ ಹನುಮ ಜಯಂತಿ ಆಚರಣಾ ಸಮಿತಿಯ ವತಿಯಿಂದ ಇಲ್ಲಿನ ಬಜಾರ್ ರಸ್ತೆಯಲ್ಲಿ ಕೃಷ್ಣರಾಜನಗರ ಶ್ರೀರಾಮ ನವಮಿಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ಆಚರಿಸಲಾಯಿತು.
ಶ್ರೀರಾಮ ದೇವರ ಬೃಹತ್ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ನೆರವೇರಿಸಿ ಪ್ರಸಾದ ನೀಡಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ವತಿಯಿಂದ ಸಾವಿರಾರು ಮಂದಿಗೆ ಮಜ್ಜಿಗೆ, ಪಾನಕ ಮತ್ತು ಕೊಸಂಬರಿಯನ್ನು ವಿತರಿಸಲಾಯಿತು.
ಸಮಿತಿಯ ಅಧ್ಯಕ್ಷರಾದ ಯು.ಕೃಷ್ಣಭಟ್, ಪದಾಧಿಕಾರಿಗಳಾದ ಕೆ.ವಿ.ನಂಜುಂಡ, ಪವನ್ ಶಿವಾಜಿ, ಅಶ್ವಥ್, ಧನುಷ್, ಮಾದೇಶ್, ಮಹದೇವ, ಗಿರೀಶ್, ವಿನೋದ, ರಾಮಚಂದ್ರ, ದರ್ಶನ, ರಾಘು ಹಾಗೂ ಭಕ್ತರು ಹಾಜರಿದ್ದರು.
7 ನೇ ರಸ್ತೆಯಲ್ಲಿ- ಇಲ್ಲಿನ ಶ್ರೀರಾಮ ಭಕ್ತ ಬಳಗದ ವತಿಯಿಂದ ರಾಮ ನವಮಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಈ ಸಮಯದಲ್ಲಿ ಪ್ರಭು ಶ್ರೀರಾಮ ದೇವರಿಗೆ ಪೂಜೆ ಸಲ್ಲಿಸಿ ಪಾನಕ ಮಜ್ಜಿಗೆ ಮತ್ತು ಕೋಸಂಬರಿ ವಿತರಿಸಿ ದೇವರಿಗೆ ಜಯಕಾರದ ಘೋಷಣೆ ಮೊಳಗಿಸಲಾಯಿತು.
ಮಿರ್ಲೆನಾಗರಾಜು, ಲಾಲನಹಳ್ಳಿರವಿ, ಹೆಬ್ಬಾಳುರಮೇಶ್, ಲಾಲನಹಳ್ಳಿಮಹೇಶ್, ಮೆಡಿಕಲ್ ನಾಗೇಂದ್ರ, ಬೀಚನಹಳ್ಳಿಶಿವಕುಮಾರ್, ಕರಿಯಪ್ಪ ಸೇರಿದಂತೆ ನೂರಾರು ಮಂದಿ ಹಾಜರಿದ್ದರು.



