Friday, March 27, 2026
Google search engine

Homeಸ್ಥಳೀಯಅಂಬೇಡ್ಕರ್–ಜಗಜೀವನ್ ರಾಂ ಜಯಂತಿ ಒಂದೇ ದಿನ ಆಚರಣೆ ಮಾಡಲು ನಿರ್ಧಾರ : ಡಿ‌.ರವಿಶಂಕರ್

ಅಂಬೇಡ್ಕರ್–ಜಗಜೀವನ್ ರಾಂ ಜಯಂತಿ ಒಂದೇ ದಿನ ಆಚರಣೆ ಮಾಡಲು ನಿರ್ಧಾರ : ಡಿ‌.ರವಿಶಂಕರ್

ಕೆ. ಆರ್. ನಗರ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರುಗಳ ಜಯಂತಿ ಆಚರಣೆ ಕಾರ್ಯಕ್ರಮವನ್ನು ಬೇರೆ ಬೇರೆ ದಿನಗಳಲ್ಲಿ ಆಚರಣೆ ಮಾಡದೆ ಒಂದೇ ದಿನ ಅತ್ಯಂತ ವೈಭವದಿಂದ ಮಾಡಬೇಕೆಂಬ ಸಮುದಾಯದವರ ಸಲಹೆಯ ಮೇರೆಗೆ ಮಾ, 30 ರಂದು ಸೋಮವಾರ ಮತ್ತೆ ಸಭೆ ನಡೆಸಿ ಇಬ್ಬರು ಮಹಾನ್ ನಾಯಕರ ಜಯಂತಿ ಆಚರಣೆ ಮಾಡುವ ದಿನಾಂಕ ನಿಗದಿ ಪಡಿಸಲಾಗುತ್ತದೆ ಎಂದು ಶಾಸಕ ಡಿ‌.ರವಿಶಂಕರ್ ಹೇಳಿದರು.

ಪಟ್ಟಣದ ಆಡಳಿತ ಸೌಧದ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಾಬು ಜಗಜೀವನ್ ರಾಂ ಅವರ ರವರ 119ನೇ ಜಯಂತಿ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಮುಖಂಡರ ಸಲಹೆಯಂತೆ ಅದ್ದೂರಿಯಾಗಿ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು.
ದಲಿತ ಮುಖಂಡರಾದ ಮಧುನಹಳ್ಳಿ ಎಂ.ಲೋಕೇಶ್, ಸಿದ್ದಾಪುರದ ಕಾಳಯ್ಯ, ಮಾಜಿ ತಾಲೂಕ್ ಪಂಚಾಯತಿ ಸದಸ್ಯ ಸೋಮಣ್ಣ ಮತ್ತು ಮಲ್ಲೇಶ್ ಮಾತನಾಡಿ ರಾಷ್ಟ್ರ ಕಂಡ ಮಹಾನ್ ನಾಯಕರ ಜಯಂತಿಯನ್ನು ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಿ ಆನಂತರ ಇಬ್ಬರ ಜಯಂತಿಯನ್ನು ಒಂದೇ ದಿನ ಅದ್ದೂರಿಯಾಗಿ ಆಚರಿಸಬೇಕೆಂದು ಒತ್ತಾಯಿಸಿದರು.

ಇಂದು ಪೂರ್ವಭಾವಿ ಸಭೆಗೆ ಕೇವಲ ಎಡಗೈ ಸಮಾಜದ ಮುಖಂಡರು ಮಾತ್ರ ಆಗಮಿಸಿದ್ದು ಬಲಗೈ ಸಮಾಜದ ಮುಖಂಡರು ಸೇರಿದಂತೆ ಇನ್ನಿತರ ಸೂಕ್ಷ್ಮಾತಿ ಸೂಕ್ಷ್ಮ ಸಮಾಜ ಸೇರಿದಂತೆ ಬೇರೆ ಸಮಾಜದ ಪದಾಧಿಕಾರಿಗಳು ಮತ್ತು ಮುಖಂಡರು ಆಗಮಿಸದೆ ಇರುವುದು ಬೇಸರ ತಂದಿದ್ದು ತಾಲೂಕು ಆಡಳಿತ ಎಚ್ಚೆತ್ತುಕೊಂಡು ಎಲ್ಲಾ ಸಮಾಜದ ಮುಖಂಡರುಗಳು ಮತ್ತು ಪದಾಧಿಕಾರಿಗಳಿಗೆ ಮುಂದೆ ನಡೆಯುವ ಪೂರ್ವಭಾವಿ ಸಭೆಯ ಬಗ್ಗೆ ಮಾಹಿತಿ ನೀಡಿ ಸಭೆಯನ್ನು ಯಶಸ್ವಿ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಮುಖಂಡರುಗಳ ಸಲಹೆಯನ್ನು ಸ್ವೀಕರಿಸಿದ ಶಾಸಕ ಡಿ ರವಿಶಂಕರ್ ದೇಶದ ಮಹಾನ್ ನಾಯಕರ ಜಯಂತಿಯನ್ನು ಅದ್ದೂರಿಯಾಗಿ ಆಡಂಬರದಿಂದ ಆಚರಿಸಲು ನಾನು ಸಿದ್ದನಿದ್ದು ಅದಕ್ಕೆ ನೀವುಗಳು ಸಲಹೆ ಸಹಕಾರ ನೀಡಬೇಕು ಮತ್ತು ನಿಮ್ಮ ಸಲಹೆಯಂತೆ ಮಾ, 30 ರಂದು ಸೋಮವಾರ ತಾಲೂಕು ಪಂಚಾಯತಿಯ ಸಭಾಂಗಣದಲ್ಲಿ 3 ಗಂಟೆಗೆ ಸಭೆ ಕರೆಯಲಾಗುತ್ತದೆಂದು ಪ್ರಕಟಿಸಿದರು.
ಅಂದು ಎಲ್ಲರೂ ಸಮಯಕ್ಕೆ ಹಾಜರಾಗಿ ತಮ್ಮ ಸಲಹೆ ಮತ್ತು ಸೂಚನೆಗಳನ್ನು ನೀಡಬೇಕೆಂದು ತಿಳಿಸಿದ ಶಾಸಕರು.

ಅಂದು ಸಾಲಿಗ್ರಾಮ ಮತ್ತು ಕೆ. ಆರ್. ನಗರ ತಾಲೂಕಿನ ಎಲ್ಲಾ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ದಲಿತ ಸಂಘಟನೆಗಳ ಎಲ್ಲರಿಗೂ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಕೆ.ಆರ್. ನಗರ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ, ಸಾಲಿಗ್ರಾಮ ತಹಸೀಲ್ದಾರ್ ರುಕಿಯಾಬೇಗಂ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ವಿ.ಪಿ.ಕುಲದೀಪ್. ರವಿಕುಮಾರ್ ಬಿಇಓ ಆರ್. ಕೃಷ್ಣಪ್ಪ, ಪಿ ಎಸ ಐ ಸ್ವಾಮಿಗೌಡ, ವಲಯ ಅರಣ್ಯಾಧಿಕಾರಿ ಟಿ.ವಿ.ಹರಿಪ್ರಸಾದ್ , ಸಹಾಯಕ ಕೃಷಿ ಕೃಷಿ ಇಲಾಖೆಯ ಮಲ್ಲಿಕಾರ್ಜುನ್, ಬಿಸಿಎಂ ಇಲಾಖೆಯ ಅಧಿಕಾರಿ ಮೇಘನ, ಎ ಇ ಇ ಅರ್ಕೇಶ್ವರಮೂರ್ತಿ, ಪುರಸಭೆ ಮುಖ್ಯಾಧಿಕಾರಿ ರಮೇಶ್, ಸಿಡಿಪಿಒ ಸಿ.ಎಂ.ಅಣ್ಣಯ್ಯ ದಲಿತ ಮುಖಂಡರಾದ ಎಂ.ಎಸ್. ಮಹದೇವ್, ಕುಮಾರ್. ಸತೀಶ್, ಮಲ್ಲೇಶ್, ರಾಮಯ್ಯ. ಮಹದೇವ್, ಅನಂತು, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಸೈಯದ್ ಜಾಬೀರ್ ಸೇರಿದಂತೆ ಇತರ ಮುಖಂಡರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular