Wednesday, April 8, 2026
Google search engine

Homeಸಿನಿಮಾ‌'ಧುರಂಧರ್ 2' ಅಬ್ಬರ: 'ಬಾಹುಬಲಿ 2' ದಾಖಲೆ ಉಡೀಸ್, ಈಗ 'ಪುಷ್ಪಾ 2' ದಾಖಲೆ ಮುರಿಯುವತ್ತ...

‌’ಧುರಂಧರ್ 2′ ಅಬ್ಬರ: ‘ಬಾಹುಬಲಿ 2’ ದಾಖಲೆ ಉಡೀಸ್, ಈಗ ‘ಪುಷ್ಪಾ 2’ ದಾಖಲೆ ಮುರಿಯುವತ್ತ ದಾಪುಗಾಲು !

ಮುಂಬೈ : ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ (ಧುರಂಧರ್: ದಿ ರಿವೆಂಜ್) ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಬಿಡುಗಡೆಯಾದ 20 ದಿನಗಳ ನಂತರವೂ ಈ ಚಿತ್ರದ ಕ್ರೇಜ್ ಕಡಿಮೆಯಾಗಿಲ್ಲ. ಈ ಚಿತ್ರದ ಆರ್ಭಟಕ್ಕೆ ಹೆದರಿ ಹಲವು ಸಿನಿಮಾಗಳು ತಮ್ಮ ಬಿಡುಗಡೆಯ ದಿನಾಂಕವನ್ನೇ ಮುಂದೂಡಿವೆ.

‘ಬಾಹುಬಲಿ 2’ ಹಿಂದಿಕ್ಕಿದ ಧುರಂಧರ್!

ಮಾರ್ಚ್ 19 ರಂದು ತೆರೆಕಂಡ ಈ ಸಿನಿಮಾ, ಭಾರತೀಯ ಚಿತ್ರರಂಗದ ದೈತ್ಯ ಸಿನಿಮಾ ‘ಬಾಹುಬಲಿ 2’ ದಾಖಲೆಯನ್ನು ಮುರಿದಿದೆ. ‘ಬಾಹುಬಲಿ 2’ ಭಾರತದಲ್ಲಿ 1030.42 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು. ಈಗ ‘ಧುರಂಧರ್ 2’ ಕೇವಲ 20 ದಿನಗಳಲ್ಲಿ 1033.37 ಕೋಟಿ ರೂ. ಗಳಿಸುವ ಮೂಲಕ ಆ ದಾಖಲೆಯನ್ನು ತನ್ನದಾಗಿಸಿಕೊಂಡಿದೆ.

ವಿಶೇಷ ದಾಖಲೆ : ಭಾರತದಲ್ಲಿ 1000 ಕೋಟಿ ಕ್ಲಬ್ ಸೇರಿದ ಮೊದಲ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ‘ಧುರಂಧರ್ 2’ ಪಾತ್ರವಾಗಿದೆ.

20ನೇ ದಿನದ ಗಳಿಕೆ ವಿವರ

ವರದಿಯೊಂದರ ಪ್ರಕಾರ, 20ನೇ ದಿನ(ಮೂರನೇ ಮಂಗಳವಾರ) ಚಿತ್ರದ ಗಳಿಕೆ ಹೀಗಿದೆ:

20ನೇ ದಿನದ ಒಟ್ಟು ಗಳಿಕೆ: 10.10 ಕೋಟಿ ರೂ.

ಪ್ರದರ್ಶನಗಳು: ಭಾರತದಾದ್ಯಂತ 13,554 ಶೋಗಳು.
ಒಟ್ಟು ವಿಶ್ವವ್ಯಾಪಿ ಗಳಿಕೆ (Gross): 1,641.21 ಕೋಟಿ ರೂ.
ಒಟ್ಟು ಭಾರತದ ನೆಟ್ ಕಲೆಕ್ಷನ್: 1,033.37 ಕೋಟಿ ರೂ.
ವಿದೇಶಿ ಗಳಿಕೆ : 404 ಕೋಟಿ ರೂ.

ಭಾಷಾವಾರು ಗಳಿಕೆ (20ನೇ ದಿನ):

ಹಿಂದಿ: 9.50 ಕೋಟಿ ರೂ.
ತೆಲುಗು: 35 ಲಕ್ಷ ರೂ.
ತಮಿಳು: 15 ಲಕ್ಷ ರೂ.
ಕನ್ನಡ: 8 ಲಕ್ಷ ರೂ.
ಮಲಯಾಳಂ: 2 ಲಕ್ಷ ರೂ.

ಈಗ ‘ಪುಷ್ಪಾ 2’ ದಾಖಲೆ ಮುರಿಯುವತ್ತ ದಾಪುಗಾಲು !

ಕೆಜಿಎಫ್ 2, ಕಲ್ಕಿ 2898 ಎಡಿ ಮತ್ತು ಆರ್‌ ಆರ್‌ ಆರ್‌ ನಂತಹ ಬ್ಲಾಕ್‌ ಬಸ್ಟರ್ ಚಿತ್ರಗಳ ದಾಖಲೆಯನ್ನು ಧೂಳೀಪಟ ಮಾಡಿರುವ ‘ಧುರಂಧರ್ 2’ ಈಗ ‘ಪುಷ್ಪಾ 2’ ದಾಖಲೆಯನ್ನು ಮುರಿಯುವತ್ತ ಮುನ್ನುಗ್ಗುತ್ತಿದೆ.

ಪುಷ್ಪಾ 2 ಭಾರತದ ನೆಟ್ ಕಲೆಕ್ಷನ್: 1,234.10 ಕೋಟಿ ರೂ.
ಪುಷ್ಪಾ 2 ವಿಶ್ವವ್ಯಾಪಿ ಗಳಿಕೆ: ಸುಮಾರು 1742-1785 ಕೋಟಿ ರೂ.

ಪ್ರಸ್ತುತ ಯಾವುದೇ ದೊಡ್ಡ ಸಿನಿಮಾಗಳು ಪೈಪೋಟಿಗೆ ಇಲ್ಲದಿರುವುದರಿಂದ, ಮುಂದಿನ ಕೆಲವು ದಿನಗಳಲ್ಲಿ ‘ಧುರಂಧರ್ 2’ ಪುಷ್ಪರಾಜನ ಸಾಮ್ರಾಜ್ಯವನ್ನೂ ಮೀರಿಸುವ ಸಾಧ್ಯತೆ ದಟ್ಟವಾಗಿದೆ. (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular