Saturday, April 11, 2026
Google search engine

Homeಸಿನಿಮಾವಂಚನೆ ಆರೋಪ: ಗಾಯಕಿ ಮಂಗ್ಲಿ ವಿರುದ್ಧ ಕೇಸ್‌

ವಂಚನೆ ಆರೋಪ: ಗಾಯಕಿ ಮಂಗ್ಲಿ ವಿರುದ್ಧ ಕೇಸ್‌

ಹೈದರಾಬಾದ್‌: ತೆಲುಗಿನ ಖ್ಯಾತ ಜಾನಪದ ಗಾಯಕಿ ಮಂಗ್ಲಿ (ಸತ್ಯವತಿ) ಮತ್ತು ಆಕೆಯ ಸಹೋದರನ ವಿರುದ್ಧ ಹತ್ತು ಕೋಟಿ ರೂಪಾಯಿ ವಂಚನೆ ಹಾಗೂ ಬೆದರಿಕೆ ಹಾಕಿದ ಗಂಭೀರ ಆರೋಪ ಕೇಳಿಬಂದಿದೆ.

100ಕ್ಕೂ ಹೆಚ್ಚು ಜನರಿಗೆ ಹೂಡಿಕೆಯ ಮೇಲೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಪೊಲೀಸರು ಗಾಯಕಿ ಮಂಗ್ಲಿ ಹಾಗೂ ಅವರ ಸಹೋದರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.

ದೂರಿನ ತಿಳಿಸಿರುವಂತೆ, ಚಲನಚಿತ್ರ ನಿರ್ಮಾಣ ಮತ್ತು ಸಂಬಂಧಿತ ವ್ಯವಹಾರಗಳಲ್ಲಿ ಹೂಡಿಕೆ ಮಾಡಿದರೆ ದೊಡ್ಡ ಮೊತ್ತದ ಲಾಭ ನೀಡುವುದಾಗಿ ಮಂಗ್ಲಿ ಮತ್ತು ಅವರ ತಂಡ ಜನರನ್ನು ನಂಬಿಸಿತ್ತು. ಇದನ್ನು ನಂಬಿದ ಹತ್ತಾರು ಹೂಡಿಕೆದಾರರು ಒಟ್ಟು ಹತ್ತು ಕೋಟಿ ರೂಪಾಯಿಯಷ್ಟು ಹಣವನ್ನು ನೀಡಿದ್ದರು. ಆದರೆ, ಹೇಳಿದ ಹಾಗೆ ಮಾಡದೇ, ಲಾಭದ ಹಣವಾಗಲಿ ಅಥವಾ ಅಸಲು ಹಣವನ್ನಾಗಲಿ ಮಂಗ್ಲಿ ಮತ್ತು ಆಕೆಯ ತಂಡ ಹಿಂತಿರುಗಿಸಲಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಹಣ ವಾಪಸ್ ಕೇಳಲು ಹೋದಾಗ ಹೂಡಿಕೆದಾರರ ಪರ ವಕೀಲ ಸುಬ್ಬರಾವ್ ಅವರಿಗೆ ಪ್ರಾಣ ಬೆದರಿಕೆ ಹಾಕಿ, ಅವಮಾನಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿದೆ.

ಜನರ ದೂರಿನ ಅನ್ವಯ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಗಾಯಕಿ ಮಂಗ್ಲಿ ವಿರುದ್ದ ವಂಚನೆ ಮತ್ತು ಕ್ರಿಮಿನಲ್‌ ಬೆದರಿಕೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ತೆಲುಗು ಹಾಗೂ ಇತರೆ ಭಾಷೆಯ ಸಿನಿಮಾಗಳಲ್ಲಿ ಚಾಪು ಮೂಡಿಸಿರುವ ಇವರು, ತಮ್ಮ ವಿಶಿಷ್ಟ ಜಾನಪದ ಶೈಲಿಯ ಹಾಡುಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅಂತಹ ಪ್ರಸಿದ್ಧ ಗಾಯಕಿ ಈಗ ಇಂತಹ ಗಂಭೀರ ಹಣಕಾಸು ವಿವಾದದಲ್ಲಿ ಸಿಲುಕಿರುವುದು ಚಿತ್ರರಂಗ ಮತ್ತು ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಸದ್ಯ ಮಂಗ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಹೂಡಿಕೆದಾರರ ಹಣ ಏನಾಯಿತು ಮತ್ತು ಈ ವಂಚನೆಯ ಜಾಲದಲ್ಲಿ ಇನ್ನು ಯಾರ್ಯಾರು ಭಾಗಿಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ.

ಗಾಯಕಿ ಮಂಗ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ಡ್ರಗ್ಸ್!

ಹಿಂದಿನ ವರ್ಷ ಬರ್ತ್‌ ಡೇ ಪಾರ್ಟಿಯಲ್ಲಿ ಡ್ರಗ್ಸ್‌ ಬಲಕೆಯಾಗುತ್ತು ಎಂದು ಈ ಗಾಯಕಿ ಮೇಲೆ ಆರೋಪ ಕೇಳಿ ಬಂದಿತ್ತು. ಅವರ ಪಾರ್ಟಿಯಲ್ಲಿ ದಾಳಿ ನಡೆಸಿದ ಪೊಲೀಸರು ಅಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದಾಗ ಡ್ರಗ್ಸ್ ಸೇವನೆ ದೃಢಪಟ್ಟಿತ್ತು. ಒಂಬತ್ತು ಮಂದಿ ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿತ್ತು.

RELATED ARTICLES
- Advertisment -
Google search engine

Most Popular