Friday, April 24, 2026
Google search engine

Homeರಾಜ್ಯಒಳ ಮೀಸಲಾತಿ ಫೈಟ್‌ಗೆ ಕೊನೆಗೂ ಮದ್ದೆರೆದ ಸಿದ್ದರಾಮಯ್ಯ ಸರ್ಕಾರ

ಒಳ ಮೀಸಲಾತಿ ಫೈಟ್‌ಗೆ ಕೊನೆಗೂ ಮದ್ದೆರೆದ ಸಿದ್ದರಾಮಯ್ಯ ಸರ್ಕಾರ

ಬೆಂಗಳೂರು: ರಾಜ್ಯದ ದಲಿತ ಸಮುದಾಯಗಳು ಪರಿಶಿಷ್ಟ ಜಾತಿಯ ಒಳ ಮೀಸಲಾತಿಗಾಗಿ ನಡೆಸುತ್ತಿದ್ದ ಸುದೀರ್ಘ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಈ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಟ್ಟು ಶೇಕಡಾ 17 ರಷ್ಟು ಎಸ್‌ಸಿ ಮೀಸಲಾತಿಯನ್ನು ಹಲವು ಉಪಜಾತಿಗಳ ನಡುವೆ ಹಂಚಿಕೆ ಮಾಡಿ ಐತಿಹಾಸಿಕ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಮೀಸಲಾತಿ ಹಂಚಿಕೆಯ ವಿವರ:
ದಲಿತ ಎಡಗೈ ಸಮುದಾಯ: ಶೇ. 5%
ದಲಿತ ಬಲಗೈ ಸಮುದಾಯ: ಶೇ. 5%
ಸ್ಪರ್ಶ್ಯ ಸಮುದಾಯಗಳು (ಭೋವಿ, ಲಂಬಾಣಿ, ಕೊರಚ, ಕೊರಮ): ಶೇ. 5%
ಇತರ ಉಪಜಾತಿಗಳು: ಶೇ. 2.0%

ಸುಪ್ರೀಂ ಕೋರ್ಟ್‌ನ ಇತ್ತೀಚಿನ ಐತಿಹಾಸಿಕ ತೀರ್ಪಿನ ಬೆನ್ನಲ್ಲೇ ರಾಜ್ಯ ಸರ್ಕಾರ ಈ ಮಹತ್ವದ ಹೆಜ್ಜೆ ಇಟ್ಟಿದ್ದು, ಮೀಸಲಾತಿ ಸೌಲಭ್ಯವಿದ್ದರೂ ಅದರ ಪ್ರಯೋಜನ ಪಡೆಯಲಾಗದೆ ಸಮಸ್ಯೆ ಎದುರಿಸುವ ಸ್ಥಿತಿಯಲ್ಲಿದ್ದ ಅತಿ ಹಿಂದುಳಿದ ದಲಿತ ಸಮುದಾಯಗಳಿಗೆ ಈ ತೀರ್ಮಾನದಿಂದ ನ್ಯಾಯ ಸಿಗಲಿದೆ ಎಂದು ತಿಳಿಸಲಾಗಿದೆ.

ವಿಧಾನಸೌಧದಲ್ಲಿ ನಡೆದ ಈ ವಿಶೇಷ ಸಂಪುಟ ಸಭೆಯ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಮೀಸಲಾತಿ ಹಂಚಿಕೆಯು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲಾ ಉಪಜಾತಿಗಳಿಗೂ ಸಮಾನವಾಗಿ ಸಿಗುವಂತೆ ರಾಜ್ಯ ಸರ್ಕಾರ ನೋಡಿಕೊಂಡಿದೆ.

RELATED ARTICLES
- Advertisment -
Google search engine

Most Popular