Tuesday, May 5, 2026
Google search engine

Homeರಾಜಕೀಯಗ್ಯಾರಂಟಿ ಯೋಜನೆಗಳಿಗೆ ಜನ ಬೆಂಬಲ : ಕಾಂಗ್ರೆಸ್ ಮೇಲೆ ವಿಶ್ವಾಸ : ಸಿಎಂ ಸಿದ್ದರಾಮಯ್ಯ

ಗ್ಯಾರಂಟಿ ಯೋಜನೆಗಳಿಗೆ ಜನ ಬೆಂಬಲ : ಕಾಂಗ್ರೆಸ್ ಮೇಲೆ ವಿಶ್ವಾಸ : ಸಿಎಂ ಸಿದ್ದರಾಮಯ್ಯ

ಬೆಂಗಳೂರು : ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಫಲಿತಾಂಶ ಆಶ್ಚರ್ಯಕರವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ತಮಿಳುನಾಡಿನಲ್ಲಿ ಫಲಿತಾಂಶ ಆಶ್ಚರ್ಯಕರವಾಗಿದೆ. ಯುವಕರು ವಿಜಯ್‌ಗೆ ಮತ ಹಾಕಿದ್ದಾರೆ. ಚುನಾವಣೆಗಳಲ್ಲಿ ಈ ತರ ಆಗುತ್ತೆ, ತಮಿಳುನಾಡಿನ ಮತದಾರರು ಬದಲಾವಣೆ ಬಯಸಿದ್ದರು. ಅದರಂತೆ ಬದಲಾವಣೆಗೆ ಮತ ಹಾಕಿದ್ದಾರೆ. ಇದು ಸರ್ ಪ್ರೈಸ್ ಫಲಿತಾಂಶ ಎಂದಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 15 ವರ್ಷ ಮಮತಾ ಬ್ಯಾನರ್ಜಿ ಇದ್ದರು. ಆಡಳಿತ ವಿರೋಧಿ ಅಲೆ ಇರಬಹುದು. ನಾನು ಅಲ್ಲಿಗೆ ಹೋಗಿಲ್ಲ. SIR ಮಾಡಿ 91 ಲಕ್ಷ ಮತ ರದ್ದು ಮಾಡಿದ್ರು. ಇವೆಲ್ಲ ಕಾರಣ ಇರಬಹುದು. ನನಗೆ ನಿಖರ ಮಾಹಿತಿ ಇಲ್ಲ. ಕೇರಳ ನಿರೀಕ್ಷೆ ಇತ್ತು. ನಿರೀಕ್ಷೆಗಿಂತ ಜಾಸ್ತಿ ಬಂದಿದೆ. ಕೇರಳ ಸಿಎಂ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಕರ್ನಾಟಕದಲ್ಲಿ SIRಗೆ ಅವಕಾಶ ಕೊಡ್ತೀರಾ ಎಂಬ ಪ್ರಶ್ನೆಗೆ ಕರ್ನಾಟಕದಲ್ಲಿ ನಿಷ್ಪಕ್ಷಪಾತವಾಗಿ SIR ಮಾಡಬೇಕು. ಟಾರ್ಗೆಟ್ ಮಾಡಿದ್ರೆ ಅದಕ್ಕೆ ಅವಕಾಶ ಕೊಡಲ್ಲ ಎಂದು ತಿಳಿಸಿದ್ದಾರೆ.

ಉಪಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಉಪಚುನಾವಣೆ ಎರಡು ಕ್ಷೇತ್ರದಲ್ಲಿ ನಾವು ಗೆದ್ದಿದ್ದೇವೆ. ಬಿಜೆಪಿ ಅವರು ಉಪಚುನಾವಣೆ ಮುಂದಿನ ಚುನಾವಣೆ ದಿಕ್ಸೂಚಿ ಅಂತ ಪ್ರಚಾರ ಮಾಡಿದ್ರು. 2028 ಚುನಾವಣೆಗೆ ದಿಕ್ಸೂಚಿ ಅಂತ ಪ್ರಚಾರ ಮಾಡಿದ್ರು. ಈಗ ನಾವು ಗೆದ್ದಿದ್ದೇವೆ. ಬಿಜೆಪಿ ಪ್ರಕಾರ 2028ಕ್ಕೂ ನಾವೇ ಬರ್ತೀವಿ ಅಂತ ಆಯ್ತಲ್ಲ. ಮತದಾರರು, ಕಾರ್ಯಕರ್ತರು, ಮಂತ್ರಿಗಳು, ಶಾಸಕರಿಗೆ ಸರ್ಕಾರ, ಪಕ್ಷದ ವತಿಯಿಂದ ಧನ್ಯವಾದ ಹೇಳ್ತೀನಿ. ಕಳೆದ ಬಾರಿ 3 ಬೈ ಎಲೆಕ್ಷನ್‌ನಲ್ಲಿ ಗೆದ್ದಿದ್ದೇವೆ. ಈಗ ಮತ್ತೆ 2ರಲ್ಲಿ ಗೆದ್ದಿದ್ದೇವೆ. ನಮ್ಮ ಕಾರ್ಯಕ್ರಮ ಜನ ಮೆಚ್ಚಿದ್ದಾರೆ. ನಮ್ಮ ಕಾರ್ಯಕ್ರಮಗಳು ಜನರಿಗೆ ತಲುಪಿವೆ. ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಕಾಂಗ್ರೆಸ್ ನುಡಿದಂತೆ ನಡೆಯೋ ಪಕ್ಷ. ಗ್ಯಾರಂಟಿ ಯೋಜನೆಗಳು ನಮ್ಮನ್ನ ಕೈ ಹಿಡಿದಿವೆ. ನಮ್ಮನ್ನ ಗೆಲ್ಲಿಸಿದ ಎಲ್ಲಾ ಮತದಾರರಿಗೆ ಧನ್ಯವಾದ ಹೇಳ್ತೀನಿ ಎಂದಿದ್ದಾರೆ.

ದಾವಣಗೆರೆಯಲ್ಲಿ ಮುಸ್ಲಿಂ ಮತ ಕಡಿಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮುಸ್ಲಿಮರು 35 ಸಾವಿರ ವೋಟ್ ನಮಗೆ ಹಾಕಿದ್ದಾರೆ. ಮುಸ್ಲಿಂಮರ 56 ಸಾವಿರದಲ್ಲಿ 35 ಸಾವಿರ ನಮಗೆ ಬಂದಿದೆ. ಈ ಬಾರಿ ಸ್ವಲ್ಪ ಎಸ್‌ಡಿಪಿಐಗೆ ವೋಟ್ ಹಾಕಿದ್ದಾರೆ. ಎಲ್ಲಿ ಕಡಿಮೆ ಆಗಿದೆ ಅಂತ ಪಕ್ಷ ತನಿಖೆ ಮಾಡುತ್ತೆ. ಈಗ ಚುನಾವಣೆ ವಿರೋಧಿ ಚಟುವಟಿಕೆ ಹಿನ್ನೆಲೆ ಕೆಪಿಸಿಸಿ ತಗೊಂಡಿರುವ ಕ್ರಮ ಸರಿ ಇದೆ ಎಂದು ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular