ಕೊಚ್ಚಿ : ಮಲಯಾಳಂ ಚಿತ್ರರಂಗದ ಇಬ್ಬರು ದಿಗ್ಗಜರಾದ ಮೋಹನ್ ಲಾಲ್ ಮತ್ತು ಮಮ್ಮುಟ್ಟಿ ಬಹಳ ವರ್ಷಗಳ ನಂತರ ಒಂದೇ ಪರದೆಯ ಮೇಲೆ ಕಾಣಿಸಿಕೊಂಡಿದ್ದರಿಂದ ‘ಪೇಟ್ರಿಯಾಟ್’ ಸಿನಿಮಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಬಿಡುಗಡೆಯಾದ ಐದೇ ದಿನಕ್ಕೆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿದೆ.
ಸಿನಿಮಾದ ಇತ್ತೀಚಿನ ಕಲೆಕ್ಷನ್ ರಿಪೋರ್ಟ್ ಹೀಗಿದೆ:
ಸಿನಿಮಾ ಆರಂಭದಲ್ಲಿ ಉತ್ತಮ ಓಪನಿಂಗ್ ಪಡೆದರೂ, ನೆಗೆಟಿವ್ ರಿವ್ಯೂಗಳಿಂದಾಗಿ ಕಲೆಕ್ಷನ್‌ನಲ್ಲಿ ಭಾರೀ ಕುಸಿತ ಕಂಡಿದೆ. ಸ್ಯಾಕ್ನಿಲ್ಕ್ (Sacnilk) ವರದಿಯ ಪ್ರಕಾರ
ಮೊದಲ ದಿನ: ₹10 ಕೋಟಿ, ಎರಡನೇ ದಿನ: ₹6.15 ಕೋಟಿ, ಮೂರನೇ ದಿನ: ₹5.50 ಕೋಟಿ, ನಾಲ್ಕನೇ ದಿನ: ₹1.70 ಕೋಟಿ, ಐದನೇ ದಿನ (ಮಂಗಳವಾರ): ₹1.50 ಕೋಟಿ, ಒಟ್ಟು ಕಲೆಕ್ಷನ್: ₹24.85 ಕೋಟಿ
ಬಜೆಟ್ ನ ಎಷ್ಟು ಶೇಕಡಾ ವಸೂಲಿ ಮಾಡಿದೆ?
ಮಹೇಶ್ ನಾರಾಯಣನ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸುಮಾರು ₹125 ಕೋಟಿ ಭಾರೀ ಬಜೆಟ್‌ನಲ್ಲಿ ತಯಾರಾಗಿದೆ. ಆದರೆ, ಐದು ದಿನ ಕಳೆದರೂ ಸಿನಿಮಾ ತನ್ನ ಒಟ್ಟು ಬಜೆಟ್‌ನ ಕೇವಲ 20% ರಷ್ಟು ಮಾತ್ರ ಹಣ ಗಳಿಸಲು ಶಕ್ತವಾಗಿದೆ. ವಾರದ ದಿನಗಳಲ್ಲಿ (Weekdays) ಪ್ರೇಕ್ಷಕರಿಲ್ಲದೆ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ.
ಮೋಹನ್ ಲಾಲ್‌ಗೆ ಸತತ ಎರಡನೇ ಸೋಲು?
2025ರಲ್ಲಿ ಬಂದ ‘ವೃಷಭ’ ಸಿನಿಮಾ ಕೇವಲ ₹1.64 ಕೋಟಿ ಗಳಿಸಿ ಹೀನಾಯವಾಗಿ ಸೋತಿತ್ತು. ಈಗ ‘ಪೇಟ್ರಿಯಾಟ್’ ಕೂಡ ಅದೇ ಹಾದಿಯಲ್ಲಿ ಸಾಗುತ್ತಿರುವುದು ಮೋಹನ್ ಲಾಲ್ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. 2026ರಲ್ಲಿ ‘ಆಡು 3’ ಮತ್ತು ‘ವಾಝಾ 2’ ನಂತಹ ಸಿನಿಮಾಗಳು ಮಲಯಾಳಂ ಚಿತ್ರರಂಗಕ್ಕೆ ಗೆಲುವು ತಂದುಕೊಟ್ಟಿದ್ದವು, ಆದರೆ ‘ಪೇಟ್ರಿಯಾಟ್’ ಈ ವರ್ಷದ ಅತಿದೊಡ್ಡ ನಿರಾಸೆಯಾಗಿ ಉಳಿಯುವ ಲಕ್ಷಣ ಕಾಣಿಸುತ್ತಿದೆ.
ಸದ್ಯ ಮಾರುಕಟ್ಟೆಯಲ್ಲಿ ‘ವಾಝಾ 2’ ಮತ್ತು ‘ಭರತನಾಟ್ಯಂ 2’ ನಂತಹ ಸಿನಿಮಾಗಳಿಂದ ದೊಡ್ಡ ಪೈಪೋಟಿ ಇಲ್ಲದಿದ್ದರೂ, ಪೇಟ್ರಿಯಾಟ್ ಸಿನಿಮಾ ಪ್ರೇಕ್ಷಕರನ್ನು ಸೆಳೆಯಲು ವಿಫಲವಾಗಿದೆ. (ಏಜೆನ್ಸಿಸ್)



