ಬ್ಯಾಂಕಾಕ್ : ಥೈಲ್ಯಾಂಡ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬುಧವಾರದ ಆಟವು ಭಾರತದ ಪಾಲಿಗೆ ಮಿಶ್ರಫಲ ನೀಡಿತು. ಸ್ಟಾರ್ ಆಟಗಾರರಾದ ಪಿ.ವಿ. ಸಿಂಧು ಮತ್ತು ಕಿದಂಬಿ ಶ್ರೀಕಾಂತ್ ಸುಲಭವಾಗಿ ಎರಡನೇ ಸುತ್ತು ಪ್ರವೇಶಿಸಿದರೆ, ಉದಯೋನ್ಮುಖ ಆಟಗಾರ ಆಯುಷ್ ಶೆಟ್ಟಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದಾರೆ.
ಸಿಂಧು ಅಬ್ಬರ
ಮಾಜಿ ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅವರು ಚೈನೀಸ್ ತೈಪೆಯ ತುಂಗ್ ಸಿಯು-ಟಾಂಗ್ ವಿರುದ್ಧ ಕೇವಲ 33 ನಿಮಿಷಗಳಲ್ಲಿ 21-9, 21-12 ನೇರ ಸೆಟ್ಗಳಿಂದ ಭರ್ಜರಿ ಜಯ ಸಾಧಿಸಿದರು. ಸಿಂಧು ಮುಂದಿನ ಸುತ್ತಿನಲ್ಲಿ ಡೆನ್ಮಾರ್ಕ್ನ ಅಮಾಲಿ ಶುಲ್ಜ್ ಅವರನ್ನು ಎದುರಿಸಲಿದ್ದಾರೆ.
ಶ್ರೀಕಾಂತ್ ಪ್ರಾಬಲ್ಯ
ಕಿದಂಬಿ ಶ್ರೀಕಾಂತ್ ಅವರು 2021ರ ವಿಶ್ವ ಚಾಂಪಿಯನ್ಶಿಪ್ ಫೈನಲ್ನ ಎದುರಾಳಿ ಸಿಂಗಾಪುರದ ಲೋಹ್ ಕೀನ್ ಯೂ ಅವರನ್ನು 21-14, 21-15 ರಿಂದ ಮಣಿಸಿದರು. 2013ರ ಚಾಂಪಿಯನ್ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ಚೈನೀಸ್ ತೈಪೆಯ ಸು ಲಿ ಯಾಂಗ್ ವಿರುದ್ಧ ಸೆಣಸಲಿದ್ದಾರೆ.
ಇತರ ಭಾರತೀಯರ ಸಾಧನೆ:
ಉನ್ನತಿ ಹೂಡಾ: ಥೈಲ್ಯಾಂಡ್ನ ನೆಚ್ಚಿನ ಆಟಗಾರ್ತಿ ಪೋರ್ನ್ಪಾವಿ ಚೋಚುವಾಂಗ್ ವಿರುದ್ಧ 11-21, 21-17, 21-16 ರಿಂದ ಗೆದ್ದು ಅಚ್ಚರಿ ಮೂಡಿಸಿದರು.
ಆಯುಷ್ ಶೆಟ್ಟಿ: ಜಪಾನ್ನ ಕೊಡೈ ನಾರಾಓಕಾ ವಿರುದ್ಧ ಹೋರಾಡಿ 13-21, 21-17, 4-21 ರಿಂದ ಸೋಲೊಪ್ಪಿಕೊಂಡರು.
ಅನ್ಮೋಲ್ ಖರ್ಬ್: ಹಾಲಿ ಚಾಂಪಿಯನ್ ಚೀನಾ ದೇಶದ ಚೆನ್ ಯು ಫೈ ವಿರುದ್ಧ ಗೆಲುವಿನ ಹಂತಕ್ಕೆ ಬಂದು 21-19, 13-21, 18-21 ರಿಂದ ವಿರೋಚಿತ ಸೋಲು ಕಂಡರು.
ತರುಣ್ ಮನ್ನೆಪಲ್ಲಿ: ಜಪಾನ್ನ ಕೋಕಿ ವಟನಾಬೆ ವಿರುದ್ಧ ಸೋಲು ಅನುಭವಿಸಿದರು. (ಏಜೆನ್ಸಿಸ್)



