Wednesday, May 20, 2026
Google search engine

Homeಸ್ಥಳೀಯಭಕ್ತರ ಮೇಲೆ ಬಿದ್ದ ಮರದ ಕೊಂಬೆ : ಮೂವರಿಗೆ ಗಾಯ

ಭಕ್ತರ ಮೇಲೆ ಬಿದ್ದ ಮರದ ಕೊಂಬೆ : ಮೂವರಿಗೆ ಗಾಯ

ಹನೂರು : ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದ ಭಕ್ತರ ಮೇಲೆ ಮರದ ಕೊಂಬೆ ಬಿದ್ದು ಮೂವರು ಗಾಯಗೊಂಡಿರುವ ಘಟನೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದಿದೆ.

ಗಾಯಗೊಂಡವರನ್ನು ಕೊಳ್ಳೇಗಾಲ ತಾಲೂಕಿನ ಹಂಪಾಪುರ ಗ್ರಾಮದ ನಿಶ್ಚಿತ್ ಶೇಖರ್ (17) ಪ್ರಿಯದರ್ಶಿನಿ ನಾಗರಾಜು (16), ತಮಿಳುನಾಡಿನ ಡೆಂಕಣಿಕೋಟೆಯ ಚಂದ್ರಪಳನಿಸ್ವಾಮಿ (45) ಎಂದು ಗುರುತಿಸಲಾಗಿದೆ.

ಘಟನೆಯ ವಿವರ

ಬುಧವಾರ ಮಧ್ಯಾಹ್ನ ಬೀಸಿದ ಭಾರೀ ಬಿರುಗಾಳಿಗೆ ಮಲೆ ಮಹದೇಶ್ವರ ಬೆಟ್ಟದ ದಾಸೋಹ ಭವನದ ಮಾರ್ಗದ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಈ ವೇಳೆ ಮಲೆ ಮಹದೇಶ್ವರ ಸ್ವಾಮಿಯ ದರ್ಶನಕ್ಕೆ ಬಂದಿದ್ದ ಮೂವರು ಭಕ್ತಾದಿಗಳ ಮೇಲೆ ಮರದ ಕೊಂಬೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿವೆ. ಮೂವರು ಪ್ರಾಣಾಪಯದಿಂದ ಪಾರಾಗಿದ್ದು ಗಾಯಗೊಂಡಿದ್ದವರನ್ನು ಮಲೆ ಮಾದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಮರದ ಕೆಳಗೆ ಇಲ್ಲದೆ ಇರುವುದರಿಂದ ದೊಡ್ಡ ಅನಾಹುತ ಒಂದು ತಪ್ಪಿದೆ.

RELATED ARTICLES
- Advertisment -
Google search engine

Most Popular