Monday, May 25, 2026
Google search engine

Homeಕ್ರೀಡೆಮುಂಬೈ ಸೋಲಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟ ರಾಜಸ್ಥಾನ್ ರಾಯಲ್ಸ್ : ಇಲ್ಲಿದೆ ಫೈನಲ್ ತಲುಪಿದ 4...

ಮುಂಬೈ ಸೋಲಿಸಿ ಪ್ಲೇಆಫ್‌ಗೆ ಲಗ್ಗೆ ಇಟ್ಟ ರಾಜಸ್ಥಾನ್ ರಾಯಲ್ಸ್ : ಇಲ್ಲಿದೆ ಫೈನಲ್ ತಲುಪಿದ 4 ತಂಡಗಳು ಮತ್ತು ಮುಂದಿನ ವೇಳಾಪಟ್ಟಿ!

ಮುಂಬೈ : ಐಪಿಎಲ್ 2026ರ ಲೀಗ್ ಹಂತದ ಗೊಂದಲಗಳಿಗೆ ತೆರೆ ಬಿದ್ದಿದೆ. ಲೀಗ್ ಹಂತದ ಅತಿ ದೊಡ್ಡ ಸಸ್ಪೆನ್ಸ್ ಕೊನೆಗೂ ಅಂತ್ಯಗೊಂಡಿದೆ. ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಜಸ್ಥಾನ್ ರಾಯಲ್ಸ್ (RR), ಪ್ಲೇಆಫ್‌ ನ ಕೊನೆಯ ಟಿಕೆಟ್ ಅನ್ನು ತನ್ನದಾಗಿಸಿಕೊಂಡಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ ಪಾಯಿಂಟ್ಸ್ ಟೇಬಲ್‌ನ ಸಂಪೂರ್ಣ ಚಿತ್ರಣವನ್ನು ಸ್ಪಷ್ಟಪಡಿಸಿದೆ. ಮುಂಬೈನ ಈ ಸೋಲಿನ ನಂತರ ಪ್ರೀತಿ ಜಿಂಟಾ ಒಡೆತನದ ಪಂಜಾಬ್ ಕಿಂಗ್ಸ್ (PBKS) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ತಂಡಗಳ ಪ್ಲೇಆಫ್ ಆಸೆಗೆ ತಣ್ಣೀರೆರಚಿದ್ದು, ಎರಡೂ ತಂಡಗಳು ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿವೆ.

ರಾಜಸ್ಥಾನ್ ರಾಯಲ್ಸ್ ತಂಡದ ಈ ಗೆಲುವಿನಲ್ಲಿ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಿದರು. ಇಡೀ ಪಂದ್ಯದುದ್ದಕ್ಕೂ ಮುಂಬೈ ಇಂಡಿಯನ್ಸ್ ಮೇಲೆ ಒತ್ತಡ ಹೇರಿದ ರಾಜಸ್ಥಾನ್, ಅವರಿಗೆ ಪುನರಾಗಮನಕ್ಕೆ ಯಾವುದೇ ಅವಕಾಶ ನೀಡಲಿಲ್ಲ. ಪ್ರಮುಖವಾಗಿ, ‘ಮಾಡು ಇಲ್ಲವೇ ಮಡಿ’ ಎಂಬಂತಿದ್ದ ಈ ಪಂದ್ಯದಲ್ಲಿ ತಂಡವು ಅದ್ಭುತ ಸಂಯಮ ಪ್ರದರ್ಶಿಸಿತು. ರಿಯಾನ್ ಪರಾಗ್ ಅವರ ನೇತೃತ್ವದಲ್ಲಿ (ಅತ್ಯುತ್ತಮ ಪ್ರದರ್ಶನದಿಂದಾಗಿ) ರಾಜಸ್ಥಾನ್ ರಾಯಲ್ಸ್ 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್‌ನಲ್ಲಿ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿತು.

ಪಂದ್ಯ – ಮುಖಾಮುಖಿಯಾಗುವ ತಂಡಗಳು

ಕ್ವಾಲಿಫೈಯರ್-1 – ರಾಯಲ್ ಚಾಲೆಂಜರ್ಸ್ ಬೆಂಗಳೂರು / ಗುಜರಾತ್ ಟೈಟನ್ಸ್
ಎಲಿಮಿನೇಟರ್ – ಸನ್‌ರೈಸರ್ಸ್ ಹೈದರಾಬಾದ್ / ರಾಜಸ್ಥಾನ್ ರಾಯಲ್ಸ್

ಕ್ವಾಲಿಫೈಯರ್-2 – ಕ್ವಾಲಿಫೈಯರ್-1 ರಲ್ಲಿ ಸೋತ ತಂಡ / ಎಲಿಮಿನೇಟರ್‌ನಲ್ಲಿ ಗೆದ್ದ ತಂಡ

ಗ್ರ್ಯಾಂಡ್ ಫಿನಾಲೆ – ಕ್ವಾಲಿಫೈಯರ್-1 ರ ವಿಜೇತರು/ ಕ್ವಾಲಿಫೈಯರ್-2 ರ ವಿಜೇತರು ಕಪ್‌ ಗಾಗಿ ಸೆಣೆಸಲಿದ್ದಾರೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅಗ್ರ ಎರಡು ಸ್ಥಾನಗಳಲ್ಲಿರುವ ಆರ್‌ ಸಿಬಿ ಮತ್ತು ಗುಜರಾತ್ ತಂಡಗಳಿಗೆ ಫೈನಲ್ ತಲುಪಲು ತಲಾ ಎರಡು ಅವಕಾಶಗಳು ಸಿಗಲಿವೆ. ಆದರೆ ಹೈದರಾಬಾದ್ ಮತ್ತು ರಾಜಸ್ಥಾನ್ ತಂಡಗಳಿಗೆ ಯಾವುದೇ ತಪ್ಪುಗಳನ್ನು ಮಾಡಲು ಅವಕಾಶವಿಲ್ಲ! (ಏಜೆನ್ಸಿಸ್)

RELATED ARTICLES
- Advertisment -
Google search engine

Most Popular