Thursday, May 28, 2026
Google search engine

Homeರಾಜಕೀಯಹಳ್ಳಿಗಾಡಿನಿಂದ ಸಿಎಂವರೆಗೆ ಪಯಣ : ರಾಜೀನಾಮೆ ಬಳಿಕ ಸಿದ್ದರಾಮಯ್ಯ ಭಾವುಕ ಭಾಷಣ

ಹಳ್ಳಿಗಾಡಿನಿಂದ ಸಿಎಂವರೆಗೆ ಪಯಣ : ರಾಜೀನಾಮೆ ಬಳಿಕ ಸಿದ್ದರಾಮಯ್ಯ ಭಾವುಕ ಭಾಷಣ

ಬೆಂಗಳೂರು :  ಹೈಕಮಾಂಡ್ ಸೂಚನೆಯಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು ಬಳಿಕ ಸುದ್ದಿಗೋಷ್ಠಿ ನಡೆಸಿದ್ದು ಈ ವೇಳೆ ಭಾವುಕರಾಗಿ ಮಾತನಾಡಿದ್ದಾರೆ.

ಗೃಹ ಕಚೇರಿ ಕೃಷ್ಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿರುವ ಸಿಎಂ ಸಿದ್ದರಾಮಯ್ಯ, ನಾನು ಎರಡು  ಬಾರಿ ಸಿಎಂ ಆಗಿ ಎರಡು ಬಾರಿ ವಿಪಕ್ಷ ನಾಯಕನಾಗಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಟ್ಟ ಸೋನಿಯಾ ಗಾಂಧಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ನಾನು ಸಂವಿಧಾನದ ಮೇಲೆ ಅಪಾರವಾದ ಗೌರವವಿಟ್ಟುಕೊಂಡಿರುವ ವ್ಯಕ್ತಿ. ನಾನು ಬುದ್ದ, ಬಸವ,  ಗಾಂಧಿ ತತ್ವ ಪಾಲಿಸುವವನು. ನನಗೆ ಅಂಬೇಡ್ಕರ್ ಬಸವಣ್ಣನವರು ಆದರ್ಶಪ್ರಾಯ  ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ  ಅಸಮಾನತೆ ತೊಲಗಬೇಕಾದರೇ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದರು.  ಸಮಾನತೆ

ನಾನು ರಾಜಕಾರಣಕ್ಕೆ ಬಂದಿದ್ದು ಆಕಸ್ಮಿಕ.  ಹಳ್ಳಿಗಾಡಿನಿಂದ ಬಂದು ಸಿಎಂ ಆದೆ.  ಮುಂದಿನ ಸಿಎಂಗೆ ಅವಕಾಶ ಮಾಡಿಕೊಡಬೇಕಿದೆ.  ಎಂದು  ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡುತ್ತಲೇ ಸಿಎಂ ಸಿದ್ದರಾಮಯ್ಯ ಗದ್ಗದಿತರಾದರು.

RELATED ARTICLES
- Advertisment -
Google search engine

Most Popular