Wednesday, July 15, 2026
Google search engine

Homeರಾಜ್ಯನಮ್ಮ ಮೆಟ್ರೋದಲ್ಲಿ ಮತ್ತಷ್ಟು ಸುರಕ್ಷತೆ : ಎಲ್ಲಾ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ ಅಳವಡಿಕೆ

ನಮ್ಮ ಮೆಟ್ರೋದಲ್ಲಿ ಮತ್ತಷ್ಟು ಸುರಕ್ಷತೆ : ಎಲ್ಲಾ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ ಅಳವಡಿಕೆ

ಬೆಂಗಳೂರು : ನಮ್ಮ ಮೆಟ್ರೋ ಪ್ರಯಾಣಿಕರ ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಮಹತ್ವದ ನಿರ್ಧಾರ ಕೈಗೊಂಡಿದ್ದು, ಮೆಟ್ರೋ ನಿಲ್ದಾಣಗಳಲ್ಲಿ ಆತ್ಮಹತ್ಯೆ ಯತ್ನಗಳು ಹಾಗೂ ಆಕಸ್ಮಿಕ ಅಪಘಾತಗಳನ್ನು ತಡೆಗಟ್ಟಲು ₹1,274 ಕೋಟಿ ವೆಚ್ಚದಲ್ಲಿ ಎಲ್ಲಾ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್‌ (PSD) ಅಳವಡಿಸಲು ಯೋಜನೆ ರೂಪಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಹಳಿಗಳ ಮೇಲೆ ಬಿದ್ದು ಸಂಭವಿಸುತ್ತಿರುವ ದುರ್ಘಟನೆಗಳ ಹಿನ್ನೆಲೆ ಈ ಸುರಕ್ಷತಾ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಜೊತೆಗೆ, ಭವಿಷ್ಯದಲ್ಲಿ ಸಂಚರಿಸಲಿರುವ ಚಾಲಕರಹಿತ (Driverless) ಮೆಟ್ರೋ ರೈಲುಗಳ ಕಾರ್ಯಾಚರಣೆಗೆ ಈ ತಂತ್ರಜ್ಞಾನ ಅಗತ್ಯವಾಗಿರುವುದರಿಂದ ಮೊದಲ ಹಂತದಲ್ಲಿ ಪಿಂಕ್‌ ಮತ್ತು ಬ್ಲೂ ಲೈನ್‌ನ ಭೂಗತ ಹಾಗೂ ಮೇಲ್ಸೇತುವೆ ನಿಲ್ದಾಣಗಳಲ್ಲಿ ಸ್ಕ್ರೀನ್ ಡೋರ್ಸ್‌ ಅಳವಡಿಸಲಾಗುತ್ತದೆ.

ಈ ಸ್ವಯಂಚಾಲಿತ ಗಾಜಿನ ಬಾಗಿಲುಗಳು ಮೆಟ್ರೋ ಸಿಗ್ನಲಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕ ಹೊಂದಿರುತ್ತವೆ. ರೈಲು ನಿಲ್ದಾಣಕ್ಕೆ ಬಂದು ನಿಖರವಾಗಿ ನಿಂತ ನಂತರವೇ ಬಾಗಿಲುಗಳು ತೆರೆದುಕೊಳ್ಳುವುದರಿಂದ ಪ್ರಯಾಣಿಕರು ಆಕಸ್ಮಿಕವಾಗಿ ಹಳಿಗೆ ಬೀಳುವ ಅಥವಾ ಸುರಕ್ಷತಾ ಗೆರೆಯನ್ನು ದಾಟುವ ಅಪಾಯವನ್ನು ಪರಿಣಾಮಕಾರಿಯಾಗಿ ತಡೆಯಬಹುದು.

ಇದರೊಂದಿಗೆ ಭೂಗತ ನಿಲ್ದಾಣಗಳಲ್ಲಿ ತಂಪು ಗಾಳಿ ಹೊರಹೋಗುವುದನ್ನು ತಡೆಯುವ ಮೂಲಕ ವಿದ್ಯುತ್ ಉಳಿತಾಯಕ್ಕೂ ನೆರವಾಗಲಿದೆ. ದೆಹಲಿ ಮೆಟ್ರೋ ಮಾದರಿಯ ಈ ಅತ್ಯಾಧುನಿಕ ಸುರಕ್ಷತಾ ವ್ಯವಸ್ಥೆಯಿಂದ ಬೆಂಗಳೂರಿನ ಮೆಟ್ರೋ ಪ್ರಯಾಣ ಇನ್ನಷ್ಟು ಸುರಕ್ಷಿತ ಹಾಗೂ ಸುಗಮವಾಗಲಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗುವ ನಿರೀಕ್ಷೆಯಿದೆ.

RELATED ARTICLES
- Advertisment -
Google search engine

Most Popular