Saturday, June 20, 2026
Google search engine

Homeರಾಜಕೀಯರಾಜಕೀಯ ಬಿಟ್ಟು ಮೇಕೆದಾಟು ಅಭಿವೃದ್ಧಿ ಯೋಜನೆಯನ್ನ ಮಾಡಿ ತೋರಿಸಿ : ಶೋಭಾ ಕರಂದ್ಲಾಜೆ

ರಾಜಕೀಯ ಬಿಟ್ಟು ಮೇಕೆದಾಟು ಅಭಿವೃದ್ಧಿ ಯೋಜನೆಯನ್ನ ಮಾಡಿ ತೋರಿಸಿ : ಶೋಭಾ ಕರಂದ್ಲಾಜೆ

ಬೆಂಗಳೂರು :  ಡಿಕೆ ಶಿವಕುಮಾರ್ ಕೈಗೆ ಅಧಿಕಾರ ಬಂದಿದೆ. ಮೇಕೆದಾಟು ಯೋಜನೆಯನ್ನ ಜಾರಿ ಮಾಡಿ ತೋರಿಸಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮೇಕೆದಾಟು ವಿಚಾರವಾಗಿ ಸಿಎಂ ಡಿಕೆ ಶಿವಕುಮಾರ್ ಹೋರಾಟ ಮಾಡಿದರು. ಕೇವಲ ವಿರೋಧ ಪಕ್ಷದಲ್ಲಿದ್ದಾಗ ಹೋರಾಟ ಮಾಡಿದರೇ ಸಾಲದು. ತನ್ನ ಕೈಗೆ ಅಧಿಕಾರ ಬಂದಾಗ ಹೋರಾಟ ಮಾಡಿ ತೋರಿಸಬೇಕು. ಡಿಕೆ ಶಿವಕುಮಾರ್  ಕೈಗೆ ಅಧಿಕಾರ ಬಂದಿದೆ.  ಯೋಜನೆಯನ್ನ ಮಾಡಿ ತೋರಿಸಲಿ ಎಂದು ಒತ್ತಾಯಿಸಿದರು.

ತಮಿಳುನಾಡಿನಲ್ಲೂ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ. ಎರಡೂ ಸರ್ಕಾರಗಳೂ ತಕ್ಷಣ ಮೇಕೆದಾಟು ಯೋಜನೆಯನ್ನು ಜಾರಿ ಮಾಡಬೇಕು. ಅದಕ್ಕಾಗಿ ಸಿಎಂ ಡಿಕೆ ಶಿವಕುಮಾರ್ ಗೆ ಆಗ್ರಹ ಮಾಡುತ್ತೇನೆ. ರಾಜಕೀಯ ಎಲ್ಲಾ ಮೇಲಾಟ ಬಿಟ್ಟು ಅಭಿವೃದ್ದಿ ಕಡೆ ಗಮನ ಕೊಡಿ ಮುಖ್ಯವಾಗಿ ಮೇಕೆದಾಟು ಯೋಜನೆ ಪೂರ್ಣಗೊಳಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

RELATED ARTICLES
- Advertisment -
Google search engine

Most Popular