Thursday, July 9, 2026
Google search engine

Homeವಿದೇಶಸಂವಾದವೇ ಜಾಗತಿಕ ಸಂಘರ್ಷಗಳಿಗೆ ಶಾಶ್ವತ ಪರಿಹಾರ: ಪ್ರಧಾನಿ ಮೋದಿ

ಸಂವಾದವೇ ಜಾಗತಿಕ ಸಂಘರ್ಷಗಳಿಗೆ ಶಾಶ್ವತ ಪರಿಹಾರ: ಪ್ರಧಾನಿ ಮೋದಿ

ಮೆಲ್ಬೋರ್ನ್: ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ ಜಾಗತಿಕ ಸಂಘರ್ಷಗಳಿಗೆ ಸಂವಾದ ಮತ್ತು ರಾಜತಾಂತ್ರಿಕ ಮಾತುಕತೆಯೇ ಶಾಶ್ವತ ಪರಿಹಾರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ಪ್ರಧಾನಿ ಆಂಥನಿ ಅಲ್ಬನೀಸ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವದ ಎಲ್ಲ ಸಮಸ್ಯೆಗಳನ್ನು ಶಾಂತಿಯುತ ಮಾತುಕತೆಯ ಮೂಲಕವೇ ಬಗೆಹರಿಸಬೇಕು ಎಂಬುದು ಭಾರತದ ದೃಢ ನಿಲುವು ಎಂದು ಪುನರುಚ್ಚರಿಸಿದರು.

ವಿಶ್ವದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಎಲ್ಲ ಸಂಘರ್ಷಗಳಿಗೆ ಸಂವಾದ ಮತ್ತು ರಾಜತಾಂತ್ರಿಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬಹುದು. ಭಾರತ ಶಾಂತಿ, ಸ್ಥಿರತೆ ಹಾಗೂ ನಿಯಮಾಧಾರಿತ ಜಾಗತಿಕ ವ್ಯವಸ್ಥೆಯನ್ನು ಬಲಪಡಿಸಲು ಸದಾ ಬದ್ಧವಾಗಿದೆ ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮೋದಿ ಅವರು ಈ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗೆ ಅಮೆರಿಕವು ಇರಾನ್‌ನ ಹಲವು ಸೇನಾ ನೆಲೆಗಳು ಹಾಗೂ ಬಂದರು ಮೂಲಸೌಕರ್ಯಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೂ ಮುನ್ನ ಹಾರ್ಮುಜ್ ಜಲಸಂಧಿ ಸಮೀಪ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗೆ ಇರಾನ್ ಹೊಣೆ ಎಂದು ಅಮೆರಿಕ ಆರೋಪಿಸಿತ್ತು.

RELATED ARTICLES
- Advertisment -
Google search engine

Most Popular