Wednesday, July 15, 2026
Google search engine

Homeರಾಜ್ಯ‘ನನ್ನ ಕುಟುಂಬದಲ್ಲಿ ಅಂತರ್ಧರ್ಮೀಯ ವಿವಾಹ ಸಾಮಾನ್ಯ’ : ಲವ್ ಜಿಹಾದ್ ಆರೋಪಗಳಿಗೆ ಆಮಿರ್ ಖಾನ್ ತಿರುಗೇಟು

‘ನನ್ನ ಕುಟುಂಬದಲ್ಲಿ ಅಂತರ್ಧರ್ಮೀಯ ವಿವಾಹ ಸಾಮಾನ್ಯ’ : ಲವ್ ಜಿಹಾದ್ ಆರೋಪಗಳಿಗೆ ಆಮಿರ್ ಖಾನ್ ತಿರುಗೇಟು

ಮುಂಬೈ: ತಮ್ಮ ವಿವಾಹ ವಿಚಾರವಾಗಿ ಕೇಳಿಬರುತ್ತಿರುವ ‘ಲವ್ ಜಿಹಾದ್’ ಆರೋಪಗಳಿಗೆ ನಟ ಆಮಿರ್ ಖಾನ್ ಪ್ರತಿಕ್ರಿಯೆ ನೀಡಿದ್ದು, ತಮ್ಮ ಕುಟುಂಬವು ಸದಾ ಅಂತರ್ಧರ್ಮೀಯ ಸಂಬಂಧಗಳನ್ನು ಗೌರವಿಸಿದೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಆಮಿರ್ ಖಾನ್, ತಮ್ಮ ಕುಟುಂಬದಲ್ಲಿ ವಿವಿಧ ಧರ್ಮಗಳ ನಡುವಿನ ವಿವಾಹಗಳು ನಡೆದಿವೆ. ಆದರೆ ಯಾವುದೇ ವಿವಾಹದಲ್ಲೂ ಧರ್ಮ ಪರಿವರ್ತನೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಮ್ಮದು ತುಂಬಾ ಒಳಗೊಳ್ಳುವ ಕುಟುಂಬ. ನನ್ನ ಇಬ್ಬರು ಸಹೋದರಿಯರು ಹಿಂದೂಗಳನ್ನು ಮದುವೆಯಾಗಿದ್ದಾರೆ. ನನ್ನ ಮಗಳೂ ಹಿಂದೂ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ನನ್ನ ಸೋದರ ಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ವ್ಯಕ್ತಿಯನ್ನು ಮದುವೆಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ತಮ್ಮ ವಿವಾಹಗಳ ಕುರಿತು ಮಾತನಾಡಿದ ಆಮಿರ್, ರೀನಾ ದತ್ತಾ, ಕಿರಣ್ ರಾವ್ ಹಾಗೂ ಗೌರಿ ಅವರೊಂದಿಗೆ ನಡೆದ ಸಂಬಂಧಗಳಲ್ಲಿ ಯಾರೂ ಧರ್ಮ ಬದಲಾವಣೆ ಮಾಡಿಕೊಂಡಿಲ್ಲ. ಎಲ್ಲಾ ವಿವಾಹಗಳು ವಿಶೇಷ ವಿವಾಹ ಕಾಯ್ದೆಯ ಅಡಿಯಲ್ಲಿ ನಡೆದಿವೆ ಎಂದು ತಿಳಿಸಿದ್ದಾರೆ.

ಗೌರಿ ಅವರ ಧರ್ಮದ ಬಗ್ಗೆ ಹರಡುತ್ತಿರುವ ಚರ್ಚೆಗಳಿಗೂ ಪ್ರತಿಕ್ರಿಯಿಸಿರುವ ಅವರು, ಮದುವೆ ವಿಚಾರದಲ್ಲಿ ಧರ್ಮ ಪರಿವರ್ತನೆಯ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಸುಮಾರು 25 ವರ್ಷಗಳಿಂದ ಪರಿಚಯವಿದ್ದ ಗೌರಿ ಅವರನ್ನು ಎರಡು ವರ್ಷಗಳ ಹಿಂದೆ ಮತ್ತೆ ಭೇಟಿಯಾಗಿದ್ದು, ಬಳಿಕ ಸಂಬಂಧ ಗಾಢವಾಯಿತು ಎಂದು ತಿಳಿಸಿದ್ದಾರೆ.

ಆಮಿರ್ ಖಾನ್ ಹಾಗೂ ಗೌರಿ ಅವರ ವಿವಾಹವು ಆತ್ಮೀಯ ಸಮಾರಂಭದಲ್ಲಿ ನಡೆದಿದ್ದು, ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗದ ಕೆಲ ಗಣ್ಯರು ಸೇರಿದಂತೆ ಸುಮಾರು 150 ಮಂದಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಆಮಿರ್ ಅವರ ಮಕ್ಕಳು ಜುನೈದ್ ಖಾನ್ ಮತ್ತು ಇರಾ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular