Wednesday, February 18, 2026
Google search engine

Homeಅಪರಾಧಬೈಕ್‌'ಗೆ ಖಾಸಗಿ ಬಸ್ ಡಿಕ್ಕಿ: ನಿವೃತ್ತಿಯ ಅಂಚಿನಲ್ಲಿದ್ದ ಬೆಮೆಲ್ ಹಿರಿಯ ಅಧಿಕಾರಿ ಸಾವು

ಬೈಕ್‌’ಗೆ ಖಾಸಗಿ ಬಸ್ ಡಿಕ್ಕಿ: ನಿವೃತ್ತಿಯ ಅಂಚಿನಲ್ಲಿದ್ದ ಬೆಮೆಲ್ ಹಿರಿಯ ಅಧಿಕಾರಿ ಸಾವು

ಕೋಲಾರ: ಬೈಕ್‌ ಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ನಿವೃತ್ತಿಯ ಅಂಚಿನಲ್ಲಿದ್ದ ಬೆಮೆಲ್ ಹಿರಿಯ ಅಧಿಕಾರಿ ಸಾವಿಗೀಡಾಗಿರುವ ಘಟನೆ ಕೋಲಾರ ಜಿಲ್ಲೆಯ ಕೆಜಿಎಫ್ ನಗರದ ಬೆಮೆಲ್ ಕಾರ್ಖಾನೆ ಎದುರು ನಡೆದಿದೆ.

ಮೃತ ಓಂ ಪ್ರಕಾಶ್ (58) ಕೆಜಿಎಫ್ ಘಟಕದ ಬಿಇಎಂಎಲ್ ಕಾರ್ಖಾನೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ಆಗಿದ್ದರು.

ಮನೆಯಲ್ಲಿ ಊಟ ಮುಗಿಸಿ ಕಚೇರಿಗೆ ವಾಪಸ್ ಆದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಡಿಜಿಎಂ ಓಂ ಪ್ರಕಾಶ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular