Wednesday, February 18, 2026
Google search engine

Homeರಾಜ್ಯಮತ್ತೇ ಕನ್ನಡಿಗರ ಮೇಲೆ ಪುಂಡಾಟ; ಕನ್ನಡ ಬಾವುಟ ಬಿಚ್ಚಿಸಿ ತಮಿಳಿಗರ ದಬ್ಬಾಳಿಕೆ!

ಮತ್ತೇ ಕನ್ನಡಿಗರ ಮೇಲೆ ಪುಂಡಾಟ; ಕನ್ನಡ ಬಾವುಟ ಬಿಚ್ಚಿಸಿ ತಮಿಳಿಗರ ದಬ್ಬಾಳಿಕೆ!

ಚಾಮರಾಜನಗರ : ಕನ್ನಡ ಬಾವುಟ ಹಾಕಿದ್ದ ವಾಹನವನ್ನು ತಡೆದು ತಮಿಳು ಯುವಕರು ಗಲಾಟೆ ನಡೆಸಿದ ಘಟನೆ ಕನ್ನಡಿಗರಲ್ಲಿ ಆಕ್ರೋಶ ಹುಟ್ಟಿಸಿದ್ದು, ಚಾಮರಾಜನಗರ ಜಿಲ್ಲೆಯಿಂದ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಚಾಮರಾಜನಗರದ ಹರದನಹಳ್ಳಿಯ ಮಣಿ ನಾಯ್ಕ ಹಾಗೂ ಸ್ನೇಹಿತರು ಟಿಟಿ ವಾಹನದಲ್ಲಿ ಕನ್ನಡ ಧ್ವಜ ಅಳವಡಿಸಿಕೊಂಡು ಯಾತ್ರೆಗೆ ತೆರಳುತ್ತಿದ್ದಾಗ, ತಮಿಳುನಾಡಿನ ತೂತುಕುಡಿ ಸಮೀಪ ವಾಹನವನ್ನು ಅಡ್ಡಹಾಕಿ ಕೆಲ ತಮಿಳು ಯುವಕರು ಗಲಾಟೆ ನಡೆಸಿದ್ದಾರೆ ಎಂದು ಆರೋಪಿಸಿದ್ದು, ವಾಹನದಲ್ಲಿದ್ದ ಕನ್ನಡ ಧ್ವಜವನ್ನು ತೆಗೆದುಹಾಕುವಂತೆ ಒತ್ತಾಯಿಸಿದರಲ್ಲದೆ ‘ತಮಿಳುನಾಡಿನಲ್ಲಿ ಕನ್ನಡ ಧ್ವಜ ಹಾಕಲು ಅವಕಾಶ ಇಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಇನ್ನೂ ಈ ಘಟನೆ ವೇಳೆ ಪೊಲೀಸರು ಸ್ಥಳದಲ್ಲಿದ್ದರೂ, ಯುವಕರು ರೌಡಿಸಂ ತೋರಿದರೆಂಬ ಆರೋಪ ಕೇಳಿಬಂದಿದ್ದು, ಕನ್ನಡಿಗರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಯಾತ್ರೆಗೆ ತೆರಳಿದ್ದ ಅಯ್ಯಪ್ಪ ಮಾಲಾಧಾರಿಗಳು ಈ ರೀತಿಯ ಘಟನೆಗಳನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES
- Advertisment -
Google search engine

Most Popular