Wednesday, April 22, 2026
Google search engine

Homeಸ್ಥಳೀಯಆದಿ ಶಂಕರಾಚಾರ್ಯರ ತತ್ವಜ್ಞಾನ ಜಗತ್ತಿಗೆ ದಾರಿ : ಸುರೇಶ್ ಎನ್ ಋಗ್ವೇದಿ

ಆದಿ ಶಂಕರಾಚಾರ್ಯರ ತತ್ವಜ್ಞಾನ ಜಗತ್ತಿಗೆ ದಾರಿ : ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ : ಉಪನಿಷತ್ತು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆಗೆ ಭಾಷ್ಯ ವನ್ನು ಬರೆಯುವ ಮೂಲಕ ಅರ್ಥ ವಿಶ್ಲೇಷಿಸಿ ಸಾಮಾನ್ಯ ಜನರಿಗೂ ಕೂಡ ಭಾರತದ ಸನಾತನ ಧರ್ಮದ ಮೂಲ ತತ್ವಗಳನ್ನು ತಿಳಿಯಪಡಿಸಿದ ತತ್ವಜ್ಞಾನಿಗಳಾದ ಆದಿಶಂಕರಾಚಾರ್ಯರು ವಿಶ್ವಜ್ಞಾನಿಗಳು ಆಗಿದ್ದವರು. ಅವರ ತತ್ವಗಳು ಜಗತ್ತಿನ ಎಲ್ಲೆಡೆ ವ್ಯಾಪಕವಾಗಿ ಹರಡಿದೆ ಎಂದು ಶ್ರೀ ಶಂಕರ ಅಭಿಯಾನ ಕರ್ನಾಟಕ ಪ್ರಧಾನರಾದ ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ಶಂಕರ ಪುರ ಶ್ರೀರಾಮ ಮಂದಿರದಲ್ಲಿ ಶಂಕರ ಜಯಂತಿ ಮತ್ತು ವಿಶ್ವ ತತ್ವಜ್ಞಾನಿಗಳ ದಿನಾಚರಣೆಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತ ಆದಿ ಶಂಕರರ ಜನ್ಮದಿನವನ್ನು ತತ್ವಜ್ಞಾನಿಗಳ ದಿನಾಚರಣೆಯಂದು ಘೋಷಿಸಿರುವ ಭಾರತ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿ, ಕರ್ನಾಟಕ ಸರ್ಕಾರವು ನಿರಂತರವಾಗಿ ಶಂಕರ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತದ ಮೂಲಕ ರಾಜ್ಯದ ಎಲ್ಲೆಡೆ ಆಚರಿಸುವ ಮೂಲಕ ಅದ್ವೈತ ತತ್ವ ಸಿದ್ಧಾಂತದ ತಿಳುವಳಿಕೆಯ ಕಾರ್ಯವನ್ನು ಮಾಡುತ್ತಿರುವುದು ಹೆಮ್ಮೆಯ ವಿಷಯವೆಂದು ತಿಳಿಸಿ ಆದಿ ಶಂಕರಾಚಾರ್ಯರು ತಮ್ಮ ವಿಶೇಷ ಜ್ಞಾನ, ದೂರ ದೃಷ್ಟಿ ಮತ್ತು ಚಿಂತನೆಯ ಮೂಲಕ ಭಾರತದ ನಾಲ್ಕು ದಿಕ್ಕುಗಳಲ್ಲಿ ಮಠಗಳನ್ನು ಸ್ಥಾಪಿಸುವ ಮೂಲಕ ಶೃಂಗೇರಿ ಪುರಿ ದ್ವಾರಕ ಬದರಿಗಳಲ್ಲಿ ನಾಲ್ಕು ವೇದಗಳ ಮೂಲ ತತ್ವಗಳ ಸಂರಕ್ಷಣೆ ಹಾಗೂ ಸಾಂಸ್ಕೃತಿಕ,ಆದ್ಯಾತ್ಮಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿ ಅಖಂಡ ಭಾರತದ ನಿರ್ಮಾಣದ ಗುರಿಯತ್ತ ಸಾಗಲು ಶಂಕರಾಚಾರ್ಯರೇ ಕಾರಣ.ಶಂಕರಾಚಾರ್ಯರನ್ನು ಶಿವನ ಅವತಾರವೆಂದು ಪುರಾಣಗಳಲ್ಲಿ ನಂಬಿಕೆ ಇದೆ.

ಕೇರಳದ ಕಾಲಡಿಯಲ್ಲಿ ಜನಿಸಿ 16 ವರ್ಷಗಳವರೆಗೆ ಸಕಲ ಅಧ್ಯಯನವನ್ನು ನಡೆಸಿ ಇಡೀ ದೇಶವನ್ನು ಮೂರು ಬಾರಿ ಸಂಚರಿಸಿ ರಾಷ್ಟ್ರೀಯ ಏಕತೆಯನ್ನು ಭಾವೈಕ್ಯತೆಯನ್ನು ಮೂಡಿಸಿ ಹಿಂದೂ ಧರ್ಮದಲ್ಲಿದ್ದ ಅನೇಕ ಮೂಲಭೂತ ಒಡಕುಗಳನ್ನು ಸರಿಪಡಿಸಿ 72 ಕುಪಂತಗಳನ್ನು ಒಂದುಗೂಡಿಸಿ ಜನರಲ್ಲಿ ಏಕತೆಯನ್ನು ಮೂಡಿಸಿದ ಆದಿಶಂಕರಾಚಾರ್ಯರು ಭಾರತದ ಜಗದ್ಗುರು ಆಗಿದ್ದಾರೆ. ಅವರದ್ವೈತ ಸಿದ್ದಾಂತವು ಇಂದು ಇಡೀ ಜಗತ್ತಿನಲ್ಲಿ ವಿಶೇಷ ಅಧ್ಯಯನಕೆ ಒಳಪಟ್ಟ ವಿಚಾರವಾಗಿದೆ ಎಂದು ಬಣ್ಣಿಸಿ, ಶಂಕರಾಚಾರ್ಯ ವಿರಚಿತ ನೂರಾರು ಸ್ತೋತ್ರಗಳು ಅಧ್ಯಯನ ಉಪನಿಷತ್ತು ಬ್ರಹ್ಮಸೂತ್ರ ಭಗವದ್ಗೀತೆಯ ದಿವ್ಯ ಸಂದೇಶಗಳನ್ನು ಅರಿಯುವ ಕೆಲಸವನ್ನು ಮಾಡಬೇಕಾಗಿದೆ ಶಂಕರಾಚಾರ್ಯರ ಮಾತೃಭಕ್ತಿ ಬಡತನ ನಿರ್ಮೂಲನೆ, ಸಾಮಾಜಿಕ ಏಕತೆ,ಆಧ್ಯಾತ್ಮದ ಬದುಕು, ಭಗವಂತನ ಸ್ಮರಣೆ ಹಾಗೂ ಜ್ಞಾನಕ್ಕೆ ಮಹತ್ವವನ್ನು ನೀಡಿದ ಆಚಾರ್ಯರು ಸೂರ್ಯ ಚಂದ್ರ ಇರುವವರೆಗೂ ಶಾಶ್ವತವಾದ ಸ್ಥಾನವನ್ನು ಪಡೆಯುತ್ತಾರೆ ಎಂದು ಋಗ್ವೇದಿ ತಿಳಿಸಿದರು.

ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಜಿ ಎಂ ಹೆಗಡೆ ಯವರು ಶಂಕರಾಚಾರ್ಯರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಉದ್ಘಾಟಿಸಿ ಶಂಕರ ಜಯಂತಿಯ ಶುಭಾಶಯಗಳನ್ನು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀರಾಮ ಮಂದಿರದ ಅಧ್ಯಕ್ಷರಾದ ಪ್ರತಾಪ್ ರವರು ವಹಿಸಿ ಶಂಕರ ಜಯಂತಿಯನ್ನು ನಿರಂತರವಾಗಿ ಶ್ರೀರಾಮ ಮಂದಿರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.ಪ್ರತಿಯೊಬ್ಬರು ಶಂಕರರ ದಿವ್ಯ ಸಂದೇಶಗಳ ಅನುಸರಣೆಯನ್ನು ಮಾಡಿದಾಗ ಆತ್ಮ ತೃಪ್ತಿ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಶ್ರೀರಾಮ ಮಂದಿರದ ಕಾರ್ಯದರ್ಶಿ ಸತೀಶ್ ಕೇಶವಮೂರ್ತಿ , ಸುದರ್ಶನ್ ರಾಧಾಕೃಷ್ಣ, ವತ್ಸಲಾ ರಾಜಗೋಪಾಲ್, ಮಾಜಿ. ನಗರಾಸಭಾ ಉಪಾಧ್ಯಕ್ಷೆ. ಮಮತಾ, ಬ್ರಾಹ್ಮಣ ಸಂಘದ ಬಾಲ ಸುಬ್ರಹ್ಮಣ್ಯ ಮುಂತಾದವರು ಇದ್ದರು.
ಸಾಮೂಹಿಕ ಶ್ರೀ ಶಂಕರ ಅಷ್ಟೋತ್ತರ ಪಾರಾಯಣ,ಭಜನೆ,ಗಾಯನ ನಡೆಯಿತು.

RELATED ARTICLES
- Advertisment -
Google search engine

Most Popular