ಉತ್ತರ ಕನ್ನಡ: ಪತ್ನಿಯ ಕಿರುಕುಳಕ್ಕೆ ಬೇಸತ್ತ ಪತಿ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ನಗರದಲ್ಲಿ ನಡೆದಿದೆ.
ರಾಘವೇಂದ್ರ ವಾಡಕರ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ. ಕಳೆದ ಮೂರು ವರ್ಷಗಳಿಂದ ಮಲೇಷ್ಯಾದಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ, ಒಂದು ವಾರದ ಹಿಂದಷ್ಟೇ ದಾಂಡೇಲಿಗೆ ಬಂದಿದ್ದರು.ಪತಿ ಊರಿಂದ ಬಂದಿದ್ದ ಕೂಡಲೇ ಪತ್ನಿ ಮೇಘಾ ತನ್ನಿಬ್ಬರು ಇಬ್ಬರು ಮಕ್ಕಳೊಂದಿಗೆ ಧಾರವಾಡದ ತವರು ಮನೆಗೆ ತೆರಳಿದ್ದರು.
ರಾಘವೇಂದ್ರ ಒಟ್ಟಿಗೆ ಸಂಸಾರ ಮಾಡೋಣ ಬಾ ಎಂದು ಕರೆದರೂ ಪತ್ನಿ ನಿರಾಕರಿಸಿದ್ದಳು. ನಿನ್ನ ಜೊತೆ ಸಂಸಾರ ಮಾಡಲು ಇಷ್ಟವಿಲ್ಲ, ಸತ್ತು ಹೋಗು ಎಂದು ಹೇಳಿದ್ದಲ್ಲದೆ, ಬೇರೊಬ್ಬ ಪುರುಷನ ಜೊತೆಗಿನ ಫೋಟೋಗಳನ್ನು ಸ್ಟೇಟಸ್ ಹಾಕಿಕೊಂಡು ಪತಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಳು ಎನ್ನಲಾಗಿದೆ. ತನ್ನ ಅನೈತಿಕ ಸಂಬಂಧದ ಬಗ್ಗೆ ಗಂಡನ ಬಳಿ ಬಹಿರಂಗವಾಗಿ ಹೇಳಿಕೊಂಡಿದ್ದ ಮೇಘಾ, ರಾಘವೇಂದ್ರ ಕೈ ಕೊಯ್ದುಕೊಂಡು ಫೋಟೋ ಕಳುಹಿಸಿದಾಗಲೂ ನೀನು ಸತ್ತರೂ ನನಗೆ ತೊಂದರೆಯಿಲ್ಲ ಎಂದು ಕ್ರೂರವಾಗಿ ಪ್ರತಿಕ್ರಿಯಿಸಿದ್ದಳು.
ಇದರಿಂದ ಬೇಸತ್ತ ಪತಿ ರಾಘವೇಂದ್ರ ಈ ಎಲ್ಲಾ ಅವಮಾನ ಮತ್ತು ಕಿರುಕುಳದ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ದಾಂಡೇಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



