Wednesday, May 13, 2026
Google search engine

Homeಸ್ಥಳೀಯಹನೂರಿನಲ್ಲಿ ಬಾಲಕಿ ಮೇಲೆ ಚಿರತೆ ದಾಳಿ: ಗಂಭೀರ ಗಾಯ

ಹನೂರಿನಲ್ಲಿ ಬಾಲಕಿ ಮೇಲೆ ಚಿರತೆ ದಾಳಿ: ಗಂಭೀರ ಗಾಯ

ಹನೂರು: ಕಾಡಂಚಿನ ಕಗ್ಗಲಗುಂದಿ ಗ್ರಾಮದಲ್ಲಿ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿದ್ದು, ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.

ಕಗ್ಗಲಗುಂದಿ ಗ್ರಾಮದ ಸುಶೀಲ(6) ಗಾಯಗೊಂಡ ಬಾಲಕಿ.

ಸೋಮವಾರ ಸಂಜೆ ಮನೆಯ ಮುಂಭಾಗ ಆಟವಾಡುತ್ತಾ ಕುಳಿತಿದ್ದ ಬಾಲಕಿಯನ್ನು ಚಿರತೆ ಎಳೆದೊಯ್ದಿದ್ದು, ಆಕೆಯ ಚೀರಾಟ  ಕೇಳಿ ಗ್ರಾಮಸ್ಥರು ಹೊರ ಬಂದಿದ್ದು,  ಗ್ರಾಮಸ್ಥರು ಚಿರತೆಯನ್ನು ಕಂಡು ಜೋರಾಗಿ ಕೂಗಾಡಿದ್ದಾರೆ. ಈ ವೇಳೆ ಬೆದರಿದ ಚಿರತೆ ಬಾಲಕಿಯನ್ನು ಗಾಯಗೊಳಿಸಿ ಬಿಟ್ಟು ಹೋಗಿದೆ.

ಕೂಡಲೇ ಗಾಯಾಳು ಬಾಲಕಿಯನ್ನು ಕಾಮಗೆರೆಯ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಮಗುವಿನ ಗಂಟಲಿನ ಭಾಗದಲ್ಲಿ ತೀವ್ರ ರಕ್ತಸ್ರಾವವಾಗುತ್ತಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ.

RELATED ARTICLES
- Advertisment -
Google search engine

Most Popular