ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಗೆಲುವು ಸಾಧಿಸಿ ನೂತನ ಶಾಸಕರಾಗಿ ಆಯ್ಕೆಯಾಗಿದ್ದು ತಮ್ಮ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಶಾಸಕ ಸಮರ್ಥ್ ಶಾಮನೂರು, ಅಭಿವೃದ್ದಿ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಗೆಲ್ಲಿಸಿದ್ದಾರೆ. ನನ್ನ ಅಜ್ಜನ ರೀತಿಯಲ್ಲಿ ಅಜಾತಶತ್ರು ಆಗುತ್ತೇನೆ. ಅದೇ ನನ್ನ ಉದ್ದೇಶ ಎಂದಿದ್ದಾರೆ.
ಜನರ ಪಾಲಿಗೆ ನಮ್ಮ ಮನೆ ಮತ್ತು ಮನಸ್ಸಿನ ಬಾಗಿಲು ತೆರೆದಿರುತ್ತದೆ. ಯಾರೇ ಬಂದರೂ ನಮ್ಮ ಮನೆಯ ಬಾಗಿಲು ತೆರೆದಿರುತ್ತದೆ. ದಾವಣಗೆರೆ ದಕ್ಷಿಣ ಶಾಸಕರ ಜನಸಂಪರ್ಕ ಕಚೇರಿ ತೆರೆಯುತ್ತೇನೆ ಎಂದು ಸಮರ್ಥ್ ಶಾಮನೂರು ತಿಳಿಸಿದ್ದಾರೆ.



