Saturday, April 18, 2026
Google search engine

Homeಸ್ಥಳೀಯರಾಜಣ್ಣ ಹೇಳಿಕೆ ವೈಯಕ್ತಿಕ ಅಲ್ಪಸಂಖ್ಯಾತರ ನಿರ್ಲಕ್ಷ್ಯ ಇಲ್ಲ : ಡಾ.ಜಿ.ಪರಮೇಶ್ವರ್

ರಾಜಣ್ಣ ಹೇಳಿಕೆ ವೈಯಕ್ತಿಕ ಅಲ್ಪಸಂಖ್ಯಾತರ ನಿರ್ಲಕ್ಷ್ಯ ಇಲ್ಲ : ಡಾ.ಜಿ.ಪರಮೇಶ್ವರ್

ಬೆಂಗಳೂರು : ಮುಸ್ಲೀಮರು ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ನಿರ್ಲಕ್ಷ್ಯ ಮಾಡಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಆಪ್ತರನ್ನ ರಕ್ಷಿಸುವಲ್ಲಿ ಅಸಹಾಯಕರಾಗಿದ್ದಾರೆ ಸೈಲೆಂಟ್ ಆಗಿದ್ದಾರೆ ಎಂಬ ಮಾಜಿ ಸಚಿವ ಕೆ.ಎನ್ ರಾಜಣ್ಣ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದರು.

ಕೆಎನ್ ರಾಜಣ್ಣ ಅವರ ಹೇಳಿಕೆ ವೈಯಕ್ತಿಕ ಈ ಬಗ್ಗೆ ಮಾತನಾಡಲ್ಲ. ಆದರೆ ಕಾಂಗ್ರೆಸ್ ಅಲ್ಪಸಂಖ್ಯಾತರನ್ನ ನಿರ್ಲಕ್ಷ ಮಾಡಿಲ್ಲ ಮುಸ್ಲೀಮರು ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಅವರ ಅಭಿವೃದ್ದಿ ಮಾಡಬೇಕು. ಒಂದು ಕ್ಷೇತ್ರದಿಂದ ಎಲ್ಲಾ ಬದಲಾವಣೆ ಆಗಲಿದೆ ಎಂದು ತಿಳಿದುಕೊಳ್ಳುವುದು ಬೇಡ  ನಾವು ಮುಸ್ಲೀಮರು ಸಹೋದರರು ಇಂದು  ಸಹ ಮುಂದೆಯೂ ಸಹ. ಒಂದು ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿಲ್ಲ. ಅಂತಾ ಬೇಸರ ಮಾಡಿಕೊಳ್ಳೋದು ಬೇಡ.  ಆ ರೀತಿ ಆಗಿದ್ದರೆ ಸಿಎಂ, ಡಿಸಿಎಂ ನಾವೆಲ್ಲರೂ ಸೇರಿ ಸರಿಪಡಿಸುತ್ತೇವೆ ಎಂದರು.

RELATED ARTICLES
- Advertisment -
Google search engine

Most Popular