Tuesday, July 14, 2026
Google search engine

Homeರಾಜ್ಯಎಲ್‌ ನಿನೋ ಪರಿಣಾಮ : ಮುಂಗಾರು ದುರ್ಬಲ, ಮಳೆ ಕೊರತೆ ಆತಂಕ ; ರೈತರಿಗೆ ಎದುರಾಗಿದೆ...

ಎಲ್‌ ನಿನೋ ಪರಿಣಾಮ : ಮುಂಗಾರು ದುರ್ಬಲ, ಮಳೆ ಕೊರತೆ ಆತಂಕ ; ರೈತರಿಗೆ ಎದುರಾಗಿದೆ ಸಂಕಷ್ಟದ ಭೀತಿ

ಹೊಸದಿಲ್ಲಿ: ದೇಶಾದ್ಯಂತ ಇತ್ತೀಚೆಗೆ ಚುರುಕುಗೊಂಡಿದ್ದ ಮುಂಗಾರು ಮಾರುತಗಳು ಇದೀಗ ಎಲ್‌ ನಿನೋ ಪ್ರಭಾವದಿಂದ ಮತ್ತೆ ದುರ್ಬಲಗೊಂಡಿದ್ದು, ಹಲವು ಭಾಗಗಳಲ್ಲಿ ಮಳೆ ಕೊರತೆಯ ಆತಂಕ ಎದುರಾಗಿದೆ.

ಮಳೆ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿಂದ ದೇಶದ ಹಲವು ಪ್ರದೇಶಗಳಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗುವ ಮುನ್ಸೂಚನೆ ದೊರೆತಿದೆ. ಕರ್ನಾಟಕದಲ್ಲೂ ಕಳೆದ ಕೆಲವು ದಿನಗಳಿಂದ ಬಿಸಿಲಿನ ತಾಪ ಹೆಚ್ಚಾಗಿದ್ದು, ಉತ್ತಮ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಪೂರ್ಣಗೊಳಿಸಿರುವ ರೈತರಲ್ಲಿ ಆತಂಕ ಹೆಚ್ಚಾಗಿದೆ. ನೈರುತ್ಯ ಮುಂಗಾರು ದುರ್ಬಲಗೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಧ್ಯ, ಪಶ್ಚಿಮ ಹಾಗೂ ವಾಯುವ್ಯ ಭಾರತದ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಎಲ್‌ ನಿನೋ ಪರಿಣಾಮದಿಂದ ವಾತಾವರಣದಲ್ಲಿನ ತೇವಾಂಶ ಕಡಿಮೆಯಾಗುತ್ತಿದ್ದು, ಮೋಡಗಳ ರಚನೆ ಮೇಲೂ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ. ಇದರಿಂದ ಮುಂಗಾರು ಚಟುವಟಿಕೆ ಕುಂಠಿತಗೊಳ್ಳುವ ಸಾಧ್ಯತೆ ಇದೆ.

ಆದರೆ, ಜುಲೈ ಕೊನೆಯ ವಾರದಲ್ಲಿ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆ ಇದೆ. ಈ ಬೆಳವಣಿಗೆಯಿಂದ ಮುಂಗಾರು ಮಾರುತಗಳು ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular